ಶಿವರಾತ್ರಿ ಹಬ್ಬದ ಪ್ರಯುಕ್ತ ತಾಜ್‌ಮಹಲ್ ಆವರಣದೊಳಗೆ ಶಿವಪೂಜೆ ಮಾಡಲು ಮುಂದಾಗಿದ್ದ ಹಿಂದೂ ಮಹಾಸಭಾದ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಐತಿಹಾಸಿಕ ಮತ್ತು ಜಗತ್ ಪ್ರಸಿದ್ಧ ತಾಜ್‌ಮಹಲ್‌ನಲ್ಲಿ ನಿಯೋಜಿಸಲಾಗಿರುವ ಕೇಂದ್ರ ಭದ್ರತಾ ಪಡೆ ಸಿಬ್ಬಂದಿಯು ಮೂವರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್‌ಡಿಟಿವಿ ವರದಿ ಮಾಡಿದೆ.
“ಮಹಿಳೆಯೂ ಸೇರಿದಂತೆ ಹಿಂದೂ ಮಹಾಸಭಾದ ಮೂವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ತಾಜ್‌ಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಉಮೇಶ್ ಚಂದ್ರ ತ್ರಿಪಾಠಿ ಹೇಳಿದ್ದಾರೆ.
ಹಿಂದೂ ಮಹಾಸಭಾದ ಪ್ರಾಂತೀಯ ಅಧ್ಯಕ್ಷೆ ಮೀನಾ ದಿವಾಕರ್ ಎಂಬುವವರು ತಾಜ್‌ಮಹಲ್ ಆವರಣದಲ್ಲಿರುವ ಮುಖ್ಯ ತೊಟ್ಟಿಯ ಬಳಿ ಇಬ್ಬರು ವ್ಯಕ್ತಿಗಳೊಂದಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೊಘಲರ ಆಳ್ವಿಕೆಯಲ್ಲಿ ನಿರ್ಮಾಣವಾಗಿರುವ ಸ್ಮಾರಕವನ್ನು ಭಾರತದ ಪುರಾತತ್ವ ಇಲಾಖೆಯು ಅಡಿಯಲ್ಲಿ ಸಂರಕ್ಷಿಸಲಾಗಿದೆ.
ಇದನ್ನೂ ಓದಿ: ತಾಜ್ ಮಹಲ್ ಆವರಣದಲ್ಲಿ ಕೇಸರಿ ಬಾವುಟ ಹಾರಿಸಿದ ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು: ಬಂಧನ
ಈ ಹಿಂದೆಯೂ, ತಾಜ್ ಮಹಲ್ ಆವರಣದೊಳಗೆ ಭಗವಾಧ್ವಜ ಹಾರಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇವರ ಕೃತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಜ್ ಮಹಲ್ ಆವರಣದಲ್ಲಿ ಧ್ವಜ ಹಾರಿಸಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದರು.
#Agra: Activists of Hindu Jagran Manch on Monday hoisted saffron flags within the premises of #TajMahal, leading to the arrest of four persons including the outfit’s youth wing district president. pic.twitter.com/F3OFGDQG3e
— TOI Agra (@TOIAgra) January 4, 2021
ಕೇಂದ್ರ ಭದ್ರತಾ ದಳದ ಮುಖ್ಯಸ್ಥ ರಾಹುಲ್ ಯಾದವ್ ಈ ಕುರಿತು ಪ್ರತಿಕ್ರಿಯಿಸಿ, “ನಾಲ್ಕು ಜನ ಆರೋಪಿಗಳು ಯೂಟ್ಯೂಬ್‌ನಲ್ಲಿ ತಮ್ಮ ವೀಡಿಯೋ ಹೆಚ್ಚು ವೀಕ್ಷಣೆಯಾಗಲಿ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ. ತಾಜ್‌ಮಹಲ್ ಪ್ರವೇಶ ದ್ವಾರದಲ್ಲಿ ಲೋಹ ಪತ್ತೆಹಚ್ಚುವ ವ್ಯವಸ್ಥೆಯಿದೆ, ಆದರೆ ಸಣ್ಣ ಬಟ್ಟೆ ತುಂಡುಗಳು ಇದರಲ್ಲಿ ದಾಖಲಾಗುವುದಿಲ್ಲ. ಇನ್ನು ಸೆಲ್ಫೀ ಸ್ಟಿಕ್ ಗಳನ್ನು ಆವರಣಕ್ಕೆ ತರಲು ಅನುಮತಿಯಿದೆ. ಅವರು ಸೆಲ್ಫೀ ಸ್ಟಿಕ್ ಬಳಸಿ ಬಾವುಟ ಹಾರಿಸಿದ್ದಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಬಾಕ್ಸಿಂಗ್ ಕಲಿಯಲು ಬಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಕೋಚ್!


