Homeಮುಖಪುಟತಾಜ್‌ ಮಹಲ್‌ ಆವರಣದಲ್ಲಿ ಕೇಸರಿ ಬಾವುಟ ಹಾರಿಸಿದ ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು: ಬಂಧನ

ತಾಜ್‌ ಮಹಲ್‌ ಆವರಣದಲ್ಲಿ ಕೇಸರಿ ಬಾವುಟ ಹಾರಿಸಿದ ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು: ಬಂಧನ

ನಾಲ್ಕು ಜನ ಆರೋಪಿಗಳು ಯೂಟ್ಯೂಬ್‌ನಲ್ಲಿ ತಮ್ಮ ವೀಡಿಯೋ ಹೆಚ್ಚು ವೀಕ್ಷಣೆಯಾಗಲಿ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ- ಕೇಂದ್ರ ಭದ್ರತಾ ದಳದ ಮುಖ್ಯಸ್ಥ ರಾಹುಲ್‌ ಯಾದವ್‌

- Advertisement -
- Advertisement -

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದಲ್ಲಿರುವ ತಾಜ್‌ ಮಹಲ್‌‌ ಆವರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು‌ ಕೇಸರಿ ಧ್ವಜ ಹಾರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಜ್‌ ಮಹಲ್‌ ಆವರಣದಲ್ಲಿ ಧ್ವಜ ಹಾರಿಸಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು.‌ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ಟೈಮ್ಸ್‌ ಆಫ್ ಇಂಡಿಯಾ ಟ್ವೀಟ್ ಮಾಡಿದ್ದು, “ಹಿಂದೂ ಜಾಗರಣ್ ಮಂಚ್‌ನ ಕಾರ್ಯಕರ್ತರು ಸೋಮವಾರ ತಾಜ್ ‌ಮಹಲ್ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ್ದರು. ಇದಾದ ನಂತರ ಸಂಘಟನೆಯ ಯುವ ವಿಭಾಗದ ಜಿಲ್ಲಾಧ್ಯಕ್ಷ ಸೇರಿದಂತೆ ಉದ್ವಿಗ್ನಗೊಂಡಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ” ಎಂದು ವರದಿ ಮಾಡಿದೆ.

ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ಇದನ್ನೂ ಓದಿ: ರೈಲು ಸುರಂಗ ನಿರ್ಮಿಸಲು ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ ’ಆತ್ಮನಿರ್ಭರ್‌’ ಮೋದಿ ಸರ್ಕಾರ!

ಹಿಂದೂ ಜಾಗರಣ ಮಂಚ್‌ RSS ನ ಅಂಗಸಂಸ್ಥೆಯಾಗಿದೆ. ಆರೋಪಿಗಳನ್ನು ಹಿಂದೂ ಜಾಗರಣ ಮಂಚ್‌ನ ಯುವ ವಿಭಾಗದ‌ ಜಿಲ್ಲಾಧ್ಯಕ್ಷ ಗೌರವ್‌ ತಲ್ವಾರ್‌ ಮತ್ತು ಕಾರ್ಯಕರ್ತರಾದ ರಿಷಿ ಲವಾನಿಯಾ, ಸೋನು ಭಗೇಲ್‌, ವಿಶೇಷ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಕೇಂದ್ರ ಭದ್ರತಾ ದಳದ ಮುಖ್ಯಸ್ಥ ರಾಹುಲ್‌ ಯಾದವ್‌ ಈ ಕುರಿತು ಪ್ರತಿಕ್ರಿಯಿಸಿ, “ನಾಲ್ಕು ಜನ ಆರೋಪಿಗಳು ಯೂಟ್ಯೂಬ್‌ನಲ್ಲಿ ತಮ್ಮ ವೀಡಿಯೋ ಹೆಚ್ಚು ವೀಕ್ಷಣೆಯಾಗಲಿ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ. ತಾಜ್‌ಮಹಲ್‌ ಪ್ರವೇಶ ದ್ವಾರದಲ್ಲಿ ಲೋಹ ಪತ್ತೆಹಚ್ಚುವ ವ್ಯವಸ್ಥೆಯಿದೆ, ಆದರೆ ಸಣ್ಣ ಬಟ್ಟೆ ತುಂಡುಗಳು ಇದರಲ್ಲಿ ದಾಖಲಾಗುವುದಿಲ್ಲ. ಇನ್ನು ಸೆಲ್ಫೀ ಸ್ಟಿಕ್‌ ಗಳನ್ನು ಆವರಣಕ್ಕೆ ತರಲು ಅನುಮತಿಯಿದೆ. ಅವರು ಸೆಲ್ಫೀ ಸ್ಟಿಕ್‌ ಬಳಸಿ ಬಾವುಟ ಹಾರಿಸಿದ್ದಾರೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಟ್ರ್ಯಾಕ್ಟರ್ ಚಲಾಯಿಸಿಕೊಂಡು ದೆಹಲಿಯತ್ತ ದಾಪುಗಾಲಿಡುತ್ತಿರುವ ‘ರೈತ ಪುತ್ರಿಯರು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...