Homeಕರ್ನಾಟಕಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು 'ಕೈ' ಜಾರಲಿದೆ

ಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು ‘ಕೈ’ ಜಾರಲಿದೆ

- Advertisement -
- Advertisement -

ಶಿವಾಜಿನಗರದ ಉಪಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ರೋಷನ್ ಬೇಗ್ ಪಕ್ಷೇತರ ಅಭ್ಯರ್ಥಿಯಾಗುವ ನಿರ್ಧಾರದಿಂದ ಹಿಂದೆ ಸರಿದಿರೋದ್ರಿಂದ ಕಾಂಗ್ರೆಸ್‍ನ ರಿಜ್ವಾನ್ ಅರ್ಷದ್ ಗೆಲುವು ಸುಲಭವಾಗಿದೆ ಎನ್ನಲಾಗುತ್ತಿದೆ. ಆದರೆ ಕಟ್ಟಾ ಮತ್ತು ನಿರ್ಮಲ್ ಸುರಾನಾರಂತಹ ಟಾಪ್ ಲೆವೆಲ್ ನಾಯಕರನ್ನು ಪಕ್ಕಕ್ಕೆ ಸರಿಸಿ ಮಾಜಿ ಕಾರ್ಪೊರೇಟರ್‍ಗೆ ಬಿಜೆಪಿ ಟಿಕೆಟ್ ನೀಡಿರೋದ್ಯಾಕೆ? ಸ್ವತಃ ರೇವಣ್ಣ ಜೆಡಿಎಸ್ ಸೇರುವಂತೆ ಬಹಿರಂಗ ಆಫರ್ ಕೊಟ್ಟರೂ ರೋಷನ್ ಬೇಗ್ ಮೌನ ವಹಿಸಿದ್ದೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕುತೂಹಲ ಕೆರಳಿಸುತ್ತವೆ.

ಶಿವಾಜಿನಗರದ ಒಟ್ಟು ಏಳು ಬಿಬಿಎಂಪಿ ವಾರ್ಡುಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಕಾರ್ಪೊರೇಟರುಗಳು ಗೆದ್ದಿದ್ದರೆ, ಒಂದು ಬಿಜೆಪಿ ಮತ್ತೊಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಹಲಸೂರು ವಾರ್ಡ್‍ನ ಆ ಪಕ್ಷೇತರ ಅಭ್ಯರ್ಥಿ ಮಮತಾರವರ ಪತಿ ಶರವಣನೇ ಈಗ ಬಿಜೆಪಿಯ ಅಭ್ಯರ್ಥಿ. ಅಂದರೆ ಎರಡು ವಾರ್ಡುಗಳಲ್ಲಷ್ಟೇ ಬಿಜೆಪಿ ಪ್ರಾಬಲ್ಯವಿದೆ ಅಂದಹಾಗಾಯ್ತು. ಮುಸ್ಲಿಂ ಪ್ರಾಬಲ್ಯವಿರುವ, ಕ್ರಿಶ್ಚಿಯನ್ನರ ಒಲವು ನಿರ್ಣಾಯಕವೆನಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಗೆಲುವಿನ ಹಾದಿ ಸಲೀಸು ಎಂಬಂತೆ ಗೋಚರಿಸುತ್ತೆ. ಸಾಲದ್ದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾಕ್ಷೇತ್ರವನ್ನೂ ಒಳಗೊಳ್ಳುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹುರಿಯಾಳಾಗಿದ್ದ ಇದೇ ರಿಜ್ವಾನ್ ಅರ್ಷದ್‍ಗೆ, ಬಿಜೆಪಿಯ ವಿಜೇತ ಅಭ್ಯರ್ಥಿ ಪಿ.ಸಿ.ಮೋಹನ್‍ಗಿಂತ ಸುಮಾರು ಹದಿನೈದು ಸಾವಿರ ಮತಗಳ ಲೀಡ್ ಶಿವಾಜಿನಗರದಿಂದ ಸಿಕ್ಕಿತ್ತು. ಪಿ.ಸಿ.ಮೋಹನ್ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಸಂಸದರಾದರೂ ಬಿಜೆಪಿಗೆ ಇಲ್ಲಿ ಸಿಕ್ಕಿದ್ದು ಕೇವಲ 44,424 ಮತಗಳು ಮಾತ್ರ. ರಿಜ್ವಾನ್‍ಗೆ ಶಿವಾಜಿನಗರದಲ್ಲಿ 59,273 ಮತಗಳು ಲಭಿಸಿದ್ದವು. ಅದೂ, ಅಷ್ಟರಲ್ಲಾಗಲೆ ತನಗೆ ಎಂಪಿ ಟಿಕೆಟ್ ಸಿಗಲಿಲ್ಲವೆಂದು ಸಿಟ್ಟುಗೊಂಡಿದ್ದ ರೋಷನ್ ಬೇಗ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾಗ್ಯೂ ಕಾಂಗ್ರೆಸ್‍ಗೆ ಇಲ್ಲಿ ಮುನ್ನಡೆ ಸಿಕ್ಕಿತ್ತು. ಈ ಅಂಕಿಅಂಶವೂ ಕಾಂಗ್ರೆಸ್‍ನ ಪರವಾಗಿಯೇ ಇದೆ.

ಹಾಗಿರುವಾಗ, ಸರ್ಕಾರದ ಅಳಿವುಉಳಿವು ನಿರ್ಧರಿಸುವ ಈ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿ, ಪ್ರಭಾವಿ ಕಟ್ಟಾ ಮತ್ತು ಸುರಾನಾಗೆ ಟಿಕೇಟ್ ನೀಡದೆ ಹೊಸಮುಖ ಶರವಣಗೆ ಮಣೆ ಹಾಕಿದ್ದೇಕೆ? 1999 ಮತ್ತು 2004ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸತತವಾಗಿ ಇಲ್ಲಿಂದ ಗೆದ್ದು ಶಾಸಕರಾಗಿದ್ದಂತವರು. ಅವರು ಹೆಬ್ಬಾಳದತ್ತ ವಲಸೆ ಹೋದ ಮೇಲೆ ಸುರಾನಾ 2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರೂ ರಾಜ್ಯ ಬಿಜೆಪಿಯೊಳಗೆ ಪ್ರಭಾವಿ ವ್ಯಕ್ತಿ. ಸುರಾನಾ ಯಡ್ಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿರಬಹುದು. ಆದರೆ ಕಟ್ಟಾ ನಾಯ್ಡುಗೆ ಆ ಪ್ರತಿಕೂಲ ವಾತಾವರಣ ಇರಲಿಲ್ಲ. ಹಾಗೆ ನೋಡಿದರೆ ಕಳೆದ 2018ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್ ವಿರುದ್ಧ ಅಖಾಡಕ್ಕಿಳಿದಿದ್ದ ಕಟ್ಟಾ ಭರ್ಜರಿ ಪೈಪೋಟಿಯನ್ನೇ ಕೊಟ್ಟಿದ್ದರು. 2013ರಲ್ಲಿ ಸುರಾನಾ ಸ್ಪರ್ಧಿಸಿದ್ದಾಗ ಕೇವಲ 31.68%ಗೆ ಸೀಮಿತವಾಗಿದ್ದ ಬಿಜೆಪಿ ಮತಗಳಿಕೆಯನ್ನು ಕಟ್ಟಾ ವರ್ಚಸ್ಸು 2018ರಲ್ಲಿ 41.20%ಗೆ ಏರಿಸಿತ್ತು. ಆದಾಗ್ಯೂ ಕಟ್ಟಾಗೆ ಟಿಕೆಟ್ ಕೈತಪ್ಪಿದೆ.

ಇದರ ಹಿಂದೆ ಬಿಜೆಪಿಯ ಒಂದಷ್ಟು ಲೆಕ್ಕಾಚಾರಗಳಿವೆ. ಯಡ್ಯೂರಪ್ಪನವರ ಹಠಕ್ಕೆ ಕಟ್ಟುಬಿದ್ದು ಅನರ್ಹ ಶಾಸಕರಿಗೆಲ್ಲ ಟಿಕೆಟ್ ಖಾತ್ರಿ ಮಾಡಿದಂತೆ, ರೋಷನ್ ಬೇಗ್‍ಗೂ ಅಭಯ ನೀಡಲು ಬಿಜೆಪಿಗೆ ಎರಡು ತೊಡಕುಗಳಿದ್ದವು. ಮೊದಲನೆಯದು ಆತ ಮುಸ್ಲಿಂ ವ್ಯಕ್ತಿ. ಎರಡನೆಯದು, ರೋಷನ್ ಬೇಗ್ ಹೆಸರು ಐಎಂಎ ಬಹುಕೋಟಿ ಹಗರಣದಲ್ಲಿ ತಳುಕು ಹಾಕಿಕೊಂಡದ್ದು. ಧರ್ಮದ ಹೆಸರಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಮನ್ಸೂರ್ ಖಾನ್ ಮುಂಡಾಯಿಸಿದ ಈ ಹಗರಣದಿಂದ ಬಚಾವಾಗುವ ಸಲುವಾಗಿಯೇ ರೋಷನ್ ಬೇಗ್ ರಾಜೀನಾಮೆ ನೀಡಿ ಬಿಜೆಪಿಯತ್ತ ಸರಿದದ್ದು ಎಂಬ ಆಪಾದನೆ ಇದೆ. ಇದೇ ಕಾರಣಕ್ಕೆ ಸಂತ್ರಸ್ತ ಮುಸ್ಲಿಮರ ಸಿಟ್ಟಿಗೂ ಬೇಗ್ ಗುರಿಯಾಗಬೇಕಾಗಿ ಬಂದಿದೆ. ಅವರನ್ನು ಕಣಕ್ಕಿಳಿಸಿದರೂ ಗೆಲ್ಲುವ ಛಾನ್ಸು ತೀರಾ ಕಮ್ಮಿ ಅನ್ನೋದು ಬಿಜೆಪಿಗೆ ಮನದಟ್ಟಾಗಿತ್ತು.

ಶಿವಾಜಿನಗರ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಅನ್ನೋದು ಎಷ್ಟು ಸತ್ಯವೋ, ಇಲ್ಲಿ ತಮಿಳಿಗರ ಮತಗಳೂ ಗಣನೀಯ ಸಂಖ್ಯೆಯಲ್ಲಿವೆ ಅನ್ನೋದೂ ಅಷ್ಟೇ ಸತ್ಯ. ಶಿವಾಜಿನಗರ, ಭಾರತಿನಗರ, ರಾಮಸ್ವಾಮಿ ಪಾಳ್ಯ, ಹಲಸೂರು, ಸಂಪಂಗಿರಾಮನಗರದಲ್ಲಿ ತಮಿಳರ ಮತಗಳೂ ಸಾಕಷ್ಟಿವೆ. ರೋಷನ್ ಬೇಗ್ ಗೆದ್ದು ಬರುತ್ತಿದ್ದುದು ಮುಸ್ಲಿಂ ಮತಗಳ ಜೊತೆಗೆ ತಮಿಳು ಮತಗಳೂ ಸೇರಿಕೊಳ್ಳುತ್ತಿದ್ದುದರಿಂದ. ಕಟ್ಟಾ ಕ್ಷೇತ್ರ ತೊರೆದ ನಂತರ ಅವೂ ಒಂದು ರೀತಿಯಲ್ಲಿ ಕಾಂಗ್ರೆಸ್‍ನ ಪಾರಂಪರಿಕ ಮತಗಳಂತಾಗಿವೆ. ಅವುಗಳನ್ನು ಕಾಂಗ್ರೆಸ್‍ನಿಂದ ವಿಮುಖಗೊಳಿಸದ ಹೊರತು ಇಲ್ಲಿ ಗೆಲ್ಲೋದು ಕಷ್ಟ ಅನ್ನೋದನ್ನು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಫಲಿತಾಂಶಗಳು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದವು. ಆರೆಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡ ಕೋಮು ಧ್ರುವೀಕರಣ ಸೃಷ್ಟಿಸಿದರೂ 2018ರಲ್ಲಿ ಬಿಜೆಪಿ ಗೆಲ್ಲಲಾಗದಿದ್ದಕ್ಕೆ ತಮಿಳು ಮತಗಳು ಕಾಂಗ್ರೆಸ್‍ಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇ ಕಾರಣ. ಆ ತಮಿಳು ಓಟುಗಳ ಮೇಲೆ ಕಣ್ಣಿಟ್ಟೇ ತಮಿಳಿಗ ಎಂ.ಶರವಣನನ್ನು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದೆ.

ಜೆಡಿಎಸ್ ಕೂಡಾ ಮುಸ್ಲಿಂ ಅಭ್ಯರ್ಥಿ ತನ್ವೀರ್ ಅಹ್ಮದ್‍ರನ್ನು ಕಣಕ್ಕಿಳಿಸಿರೋದ್ರಿಂದ ಮುಸ್ಲಿಂ ಮತಗಳು ಸಹಜವಾಗಿಯೇ ಛಿದ್ರವಾಗುತ್ತವೆ. ಐಎಂಎ ವಂಚನೆಯ ಕಾರಣಕ್ಕೆ ಒಂದಷ್ಟು ಮುಸ್ಲಿಮರು ಬೇಗ್ ಜೊತೆಗೆ ಇಡಿಯಾಗಿ ಕಾಂಗ್ರೆಸಿನ ವಿರುದ್ಧವೂ ಸಿಟ್ಟಾಗಿದ್ದಾರೆ. ಅವರು ಜೆಡಿಎಸ್‍ಗೆ ಮತ ಹಾಕಬಹುದು. ಆಗ ಸಹಜವಾಗಿಯೇ ಕಾಂಗ್ರೆಸಿನ ಮತಗಳಿಕೆ ಕುಸಿಯುತ್ತೆ. ಇಪ್ಪತ್ತೈದರಿಂದ ಮೂವತ್ತು ಸಾವಿರಗಳಷ್ಟಿರುವ ತಮ್ಮ ಸಾಂಪ್ರದಾಯಿಕ ಬಿಜೆಪಿ ಮತಗಳ ಜೊತೆಗೆ ತಮಿಳು ಮತಗಳು ಒಲಿದರೆ ಗೆಲುವು ಗ್ಯಾರಂಟಿ ಅನ್ನೋದು ಬಿಜೆಪಿಯ ಲೆಕ್ಕಾಚಾರ.
ಒಂದು ಮೂಲದ ಪ್ರಕಾರ, ಯಡ್ಯೂರಪ್ಪನ ಮೂಲಕ ಟಿಕೆಟು ಪಡೆಯಲು ಕೊನೇವರೆಗೂ ಯತ್ನಿಸಿದ ರೋಷನ್ ಬೇಗ್, ತನಗೆ ಸಿಗದಿದ್ದರು ತನ್ನ ಪ್ರತಿಸ್ಪರ್ಧಿಗಳಾದ ಕಟ್ಟಾ ಅಥವಾ ಸುರಾನಾ ಪಾಲಾಗಲಿದ್ದ ಟಿಕೆಟ್ ತಪ್ಪಿಸಲು, ತನ್ನ ಆಪ್ತ ಶರವಣ್‍ಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ ಹಲಸೂರು ವಾರ್ಡ್‍ನಿಂದ ತನ್ನ ಹೆಂಡತಿಗೆ ಶರವಣ ಬಿಜೆಪಿ ಟಿಕೇಟ್ ಕೇಳಿದ್ದರು. ಆದರೆ ಬಿಜೆಪಿ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಇದರಿಂದ ಸಿಟ್ಟಿಗೆದ್ದ ಶರವಣ ಮಡದಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ಈ ಅವಧಿಯಲ್ಲಿ ಬಿಜೆಪಿ ಜೊತೆ ಕೊಂಚ ಮುನಿಸಿಕೊಂಡಿದ್ದ ಶರವಣ, ಬೇಗ್ ಜೊತೆ ಒಡನಾಟ ಸಾಧಿಸಿಕೊಂಡದ್ದು ದಿಟ.

ಟಿಕೇಟ್, ಶಾಸಕ ಸ್ಥಾನ, ಮಂತ್ರಿಗಿರಿಗಿಂತ ಹೆಚ್ಚಾಗಿ ಐಎಂಎ ಕುಣಿಕೆಯಿಂದ ತನ್ನ ತಲೆ ಉಳಿದರೆ ಸಾಕು ಎಂಬಂತಿರುವ ರೋಷನ್‍ಗೆ ಮೊದಲಿಂದಲೂ ರಿಜ್ವಾನ್ ಕಂಡರೆ ಅಷ್ಟಕ್ಕಷ್ಟೇ. ಮುಂದೊಂದು ದಿನ ತನ್ನ ಮುಸ್ಲಿಂ ಲೀಡರಿಕೆಗೆ ಈ ಹುಡುಗ ಕಂಟಕವಾಗುತ್ತಾನೆಂಬ ಅಳುಕು ಬೇಗ್‍ರದ್ದು. ಹಾಗಾಗಿ ಅಭ್ಯರ್ಥಿಯಾಗದೆ ಹೋದರು ಬೇಗ್, ಬಿಜೆಪಿಯ ಶರವಣಗೆ ನೆರವಾಗುವ ಸಾಧ್ಯತೆ ದಟ್ಟವಾಗಿದೆ. ನಾಮಪತ್ರ ಸಲ್ಲಿಕೆಯ ನಂತರ ಬೇಗ್ ಹೋಗಿ ಯಡ್ಯೂರಪ್ಪರನ್ನು ಭೇಟಿಯಾಗಿ ಬಂದಿರೋದೆ ಇದಕ್ಕೆ ಸಾಕ್ಷಿ. ಗುಪ್ತವಾಗಿ ಬಿಜೆಪಿ ಪರ ಕೆಲಸ ಮಾಡುವುದಕ್ಕೆಂದೇ ಜೆಡಿಎಸ್ ಸ್ಪರ್ಧಿಸುವ ಆಫರ್ ಕೊಟ್ಟರೂ ರೋಷನ್ ಬೇಗ್ ಗಪ್‍ಚುಪ್ ಆದರಾ……?

ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟಿನಂತೆ ಕಾಣುವ ಬಿಜೆಪಿಯ ಶರವಣ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸಿ ಕಾಂಗ್ರೆಸ್ ಮೈಮರೆಯದಿದ್ದರೆ ರಿಜ್ವಾನ್ ಇಲ್ಲಿ ಗೆಲುವಿನ ನಗೆ ಬೀರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...