Homeಚಳವಳಿಸಿದ್ದರಾಮಯ್ಯನವರಿಂದ ಅಂಬೇಡ್ಕರ್ ಓದು ಸರಣಿಯ 500 ನೇ ಸಂಚಿಕೆಯ ಓದು: ವಿಶಿಷ್ಟ ಪ್ರಯತ್ನಕ್ಕೆ ಶ್ಲಾಘನೆ

ಸಿದ್ದರಾಮಯ್ಯನವರಿಂದ ಅಂಬೇಡ್ಕರ್ ಓದು ಸರಣಿಯ 500 ನೇ ಸಂಚಿಕೆಯ ಓದು: ವಿಶಿಷ್ಟ ಪ್ರಯತ್ನಕ್ಕೆ ಶ್ಲಾಘನೆ

- Advertisement -
- Advertisement -

ಡಾ.ಬಿ.ಆರ್ ಅಂಬೇಡ್ಕರ್‌ರವರ ಮೂಲ ಬರಹಗಳು ಮತ್ತು ಭಾಷಣಗಳನ್ನು ಕನ್ನಡದಲ್ಲಿ ಕೇಳುವ ವಿಶಿಷ್ಟ ಪ್ರಯತ್ನವಾದ ‘ಅಂಬೇಡ್ಕರ್ ಓದು ಸರಣಿ’ಯ 500ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಓದಿದ್ದಾರೆ.

ಈ ಕಾರ್ಯಕ್ರಮವನ್ನು ನಡೆಸುತ್ತಿರುವ ಡಾ.ಅರುಣ್ ಜೋಳದ ಕೂಡ್ಲಿಗಿ ಮತ್ತು ಅನೇಕ ವಿದ್ವಾಂಸರ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂಬ ಆತಂಕ ಅನೇಕರನ್ನು ಕಾಡುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಇದು ಸಾವಿರಾರು ಸಂಚಿಕೆಗಳನ್ನು ಕಾಣಲಿ ಎಂದು ಹಾರೈಸುತ್ತೇನೆ ಎಂದ ಸಿದ್ದರಾಮಯ್ಯನವರು, “ಪ್ರಜಾಪ್ರಭುತ್ವ ನ್ಯಾಯಪ್ರದವಾಗಿ ಕಾರ್ಯನಿರ್ವಹಿಸಲು ಇರುವ ಪೂರ್ವಭಾವಿ ನಿಯಮಗಳು” ಎಂಬ ಅಧ್ಯಾಯವನ್ನು ಓದಿದರು.

ಅದಕ್ಕೂ ಮುನ್ನ ಈ ದಿನ ಮಾಧ್ಯಮ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಚಿಂತಕ, ಬರಹಗಾರ ವಿಕಾಸ್ ಆರ್ ಮೌರ್ಯ ಮಾತನಾಡಿ, “ಡಿಜಿಟಲ್ ಸ್ಪೇಸ್‌ನಲ್ಲಿ ಅಂಬೇಡ್ಕರ್‌ರವರ ಚಿಂತನೆಗಳನ್ನು ನೆಲೆಗೊಳಿಸುವ ಈ ಪ್ರಯತ್ನ ಅಸಾಮಾನ್ಯವಾದುದು” ಎಂದರು.

ನಮ್ಮ ದೇಶಕ್ಕೆ ಅಂಟಿರುವ ಅಸ್ಪೃಶ್ಯತೆ ಮತ್ತು ಜಾತೀಯತೆಯ ಕಾರಣಕ್ಕೆ ಅಂಬೇಡ್ಕರ್‌ರನ್ನು ಮೂಲೆಗುಂಪು ಮಾಡಲಾಗಿತ್ತು. ಅವರು ನಿಧನರಾದ 10 ವರ್ಷಗಳ ನಂತರವಷ್ಟೆ 1966ರಲ್ಲಿ ಭಾರತೀಯ ಅಂಚೆ ಚೀಟಿಯಲ್ಲಿ ಅವರ ಭಾವಚಿತ್ರವನ್ನು ಒಳಗೊಳ್ಳಲಾಯಿತು. ಅಂಬೇಡ್ಕರ್‌ರವರಿಗೆ ಭಾರತ ರತ್ನ ಪ್ರಶಸ್ತ ಕೊಟ್ಟಿದ್ದು 1991ರಲ್ಲಿ. ಅವರ ಸಂಪೂರ್ಣ ಬರಹಗಳು ಮತ್ತು ಭಾಷಣಗಳನ್ನು 1991ರ ಇಸವಿಯಿಂದ ನಮಗೆ ತಲುಪಿದವು. 1916ರಿಂದಲೇ ಅಂಬೇಡ್ಕರ್ ಪ್ರಕಾರವಾಗಿ ಬರೆದಿದ್ದರು, 1936ರಲ್ಲಿಯೇ ಜಾತಿವಿನಾಶ ಕೃತಿ ರಚಿಸಿದ್ದರು. ಆದರೂ ಸಂವಿಧಾನ ಜಾರಿಯಾದ 41 ವರ್ಷದವರೆಗೂ ಅವರ ಬರಹಗಳನ್ನು ಸಾರ್ವಜನಿಕಗೊಳಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

21 ಸಂಪುಟಗಳಲ್ಲಿ ಅಂಬೇಡ್ಕರ್‌ರವರ ಬರಹಗಳು ಸಿಗುತ್ತಿವೆ. ಅವುಗಳನ್ನು ಆಡಿಯೋ ರೂಪದಲ್ಲಿ ಪ್ರತಿಯೊಂದು ಮನೆಮನೆಗೂ ತಲುಪಿಸುವ ಈ ಕೆಲಸ ಸಾಮಾನ್ಯವಾದುದ್ದಲ್ಲ. ಸೆಪ್ಟಂಬರ್ 09, 2020ರಿಂದ ಮೊದಲ ಕಂತು ಆರಂಭವಾಗಿ ಈಗ 500ನೇ ಸಂಚಿಕೆ ತಲುಪಿದ್ದೇವೆ. ಇದೊಂದು ಸಾಹಸವೇ ಆಗಿದೆ. ಜಾನಪದ, ಪುರಾಣ, ಭಜನೆ ಇತ್ಯಾದಿಗಳಲ್ಲಿ ಅಂಬೇಡ್ಕರ್‌ರವರನ್ನು ಹೇಗೆ ಕಾಣಲಾಗುತ್ತದೆ ಎಂದು ಅಧ್ಯಯನ ಮಾಡುತ್ತಿದ್ದ ಅರುಣ್ ಜೋಳದ ಕೂಡ್ಲಿಗಿಯರವರು ಈ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ಡಿಜಿಟಲ್ ಮಾಧ್ಯಮದಲ್ಲಿ ಅಂಬೇಡ್ಕರ್‌ರನ್ನು ಕಾಣುವುದು ವಿರಳ. ಕೌಂಟರ್‌ ಕರೆಂಟ್ಸ್, ರೌಂಟ್‌ ಟೇಬಲ್ ನಂತಹ ಕೆಲವೇ ವೆಬ್‌ಸೈಟ್‌ಗಳು ಆ ಕೆಲಸ ಮಾಡುತ್ತಿವೆ. ನಮ್ಮ ಕರ್ನಾಟಕದಲ್ಲಿ ಈ ಓದು ಸರಣಿ ಆರಂಭವಾದ್ದರಿಂದ ನೇರವಾಗಿ ಅಂಬೇಡ್ಕರ್‌ರವರ ಬರಹ ಮತ್ತು ಭಾಷಣಗಳನ್ನು ನಮಗೆ ಸಿಗುತ್ತಿವೆ. ಈ ಪ್ರಯತ್ನ ಇಡೀ ದೇಶಕ್ಕೆ ಮೊಟ್ಟಮೊದಲ ಪ್ರಯತ್ನವಾಗಿದೆ. ಈ ಆಡಿಯೋ ಆರ್ಕೈವ್ ಸರಣಿಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡೋಣ. ಇದು ಮುಂದುವರೆಯಲಿ ಎಂದರು.

ಹೋರಾಟಗಾರ್ತಿ ದು.ಸರಸ್ವತಿಯವರು ಮಾತನಾಡಿ, “ಅಂಬೇಡ್ಕರ್‌ ಎಲ್ಲರಿಗೂ ದಕ್ಕುತ್ತಿದ್ದಾರೆ, ಇಂದಿಗೂ ನಮ್ಮೊಳಗೆ ಜೀವಂತವಿದ್ದಾರೆ. ಇನ್ನೂ ನೂರು ವರ್ಷ ಕಳೆದರೂ ಜೀವಂತವಾಗಿಯೇ ಇರುತ್ತಾರೆ. ಏಕೆಂದರೆ ಅಂಬೇಡ್ಕರ್ ಮಾಡಿರುವ ಕೆಲಸಗಳಿಗೆ ಎಂದಿಗೂ ಸಾವಿಲ್ಲ” ಎಂದರು.

“ಮಹಾರಾಷ್ಟ್ರದ ಸಂಶೋಧಕರಾದ ಉರ್ಮಿಳಾ ಪಾವರ್, ಮೀನಾಕ್ಷಿ ಮೂನ್‌ರವರು ಅಂಬೇಡ್ಕರ್‌ ಬಗ್ಗೆ ಹೆಚ್ಚು ತಿಳಿದುಕೊಳ್ಳಲು, ಓದಲು ಮುಂದಾದಾಗ ಅವರಿಗೆ ಕೊನೆಗೆ ಹೆಚ್ಚಿನ ಮಾಹಿತಿ ಸಿಕ್ಕಿದ್ದು ಅಂಬೇಡ್ಕರ್‌ರವರೆ ಹೊರತಂದಿದ್ದ ಮೂಕನಾಯಕ, ಬಹಿಷ್ಕೃತ ಭಾರತ ಪತ್ರಿಕೆಗಳಿಂದ ಮಾತ್ರ. ಏಕೆಂದರೆ ಆ ಕಾಲದಲ್ಲಿಯೇ ಮುಖ್ಯವಾಹಿನಿ ಮಾಧ್ಯಮಗಳು ಅಂಬೇಡ್ಕರ್‌ರವರನ್ನು ನಿರ್ಲಕ್ಷಿಸಿದ್ದವು. ದಲಿತ ಚಳವಳಿ ದೇಶಾದ್ಯಂತ ಹರಡಿದ ಕಾರಣಕ್ಕೆ ಮಾತ್ರ ಅವರಿಗೆ ಭಾರತ ರತ್ನ ನೀಡಲಾಯಿತು” ಎಂದರು.

ಹಿರಿಯ ಪತ್ರಕರ್ತರಾದ ಡಿ.ಉಮಾಪತಿಯವರು ಅಂಬೇಡ್ಕರ್ ಓದು ಕುರಿತು ಮಾತನಾಡಿದರು. ರಂಗಭೂಮಿ ಕಲಾವಿದರಾದ ರವಿಕಿರಣ್ ರಾಜೇಂದ್ರನ್ ಮತ್ತು ಅಶ್ವಿನಿ ಬೋಧ್ ತಮ್ಮ ಅನಿಸಿಕೆ ಹಂಚಿಕೊಂಡರು.

ಅಂಬೇಡ್ಕರ್‌ ಓದು ಅಭಿಯಾನದ ಎಲ್ಲಾ ಆಡಿಯೋಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: 100 ಗಂಟೆ ಪೂರೈಸಿದ ಅಂಬೇಡ್ಕರ್ ಓದು ಸರಣಿ: ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಜ್ಞಾನ ಭಂಡಾರವಿದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಮ್ಮ ಉಳಿವಿಗಾಗಿ dr b r ambedkar ಅವರನ್ನು ಎಳೆದು ತರಬೇಡಿ. ಸಿದ್ದರಾಮಯ್ಯ ನವರು ನಮಗೆ ಅಂಬೇಡ್ಕರನ್ನು ಪರಿಚಯಿಸಿ ಕೊಡುವ ಪ್ರಯತ್ನ ಮಾಡುವುದು ಬೇಡ. ಆತ ಮಹಾನ್ ವ್ಯಕ್ತಿ, ದೀನ ದಲಿತರಿಗೆ ತಮ್ಮ ಜೀವನವನ್ನೇ ಪಣವಾಗಿಟ್ಟ ದೇವರು. ಅಂಥ ವ್ಯಕ್ತಿಯನ್ನ ಸಿದ್ದರಾಮಯ್ಯ ನವರೂ ಪ್ರಚಾರಕ್ಕೆ ಬಳಿಸಿದ್ದು ಏಕೋ ಸರಿ ಕಾಣಿಸುತ್ತಿಲ್ಲ. ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...