Homeಮುಖಪುಟ35000 ಸಾವಿರದಿಂದ ಸೊನ್ನೆ ರೂಗಿಳಿದ ವಿದ್ಯುತ್ ಬಿಲ್: ದೆಹಲಿ ಆಪ್ ಸರ್ಕಾರ ಮಾಡಿದ ಮೋಡಿಯಾದರೂ ಏನು...

35000 ಸಾವಿರದಿಂದ ಸೊನ್ನೆ ರೂಗಿಳಿದ ವಿದ್ಯುತ್ ಬಿಲ್: ದೆಹಲಿ ಆಪ್ ಸರ್ಕಾರ ಮಾಡಿದ ಮೋಡಿಯಾದರೂ ಏನು ಗೊತ್ತೆ?

ದೆಹಲಿಯಲ್ಲಿ ಈ ಬಾರಿ ಬಿಸಿಲು ಮತ್ತು ಉಷ್ಣಾಂಶ ಮಿತಿ ಮೀರಿ ಏರಿಕೆಯಾಗಿದೆ. ಸಹಜವಾಗಿ ಸೆಕೆಯೂ ಹೆಚ್ಚಾಗಿದೆ. ಹಾಗಾಗಿ ಅಲ್ಲಿನ ಶಾಲೆಗಳಲ್ಲಿ ಉತ್ತಮ ಫ್ಯಾನ್ ಗಳು ಮತ್ತು ಕೂಲರ್ ಗಳನ್ನು ಅಳವಡಿಸಿ ಮಕ್ಕಳ ಹಿತ ಕಾಯಲಾಗುತ್ತಿದೆ

- Advertisement -
- Advertisement -

| ನಾನುಗೌರಿ ಡೆಸ್ಕ್ |

ದೆಹಲಿ ಸರ್ಕಾರಿ ಶಾಲೆಗಳಲ್ಲಿ ವಾರ್ಷಿಕ ವಿದ್ಯುತ್ ಬಿಲ್ 35000 ದಾಟುತ್ತಿತ್ತು. ಅದನ್ನು ತಪ್ಪಿಸಲು ಅಲ್ಲಿನ ಆಮ್ ಆದ್ಮಿ ಪಕ್ಷ ನೇತೃತ್ವದ ಮಾಡಿದ ಪ್ರಯೋಗ ಫಲ ನೀಡಿದೆ. ಹಾಲಿ 21 ಶಾಲೆಗಳಲ್ಲಿ ವಿದ್ಯುತ್ ಬಿಲ್ ಸೊನ್ನೆ ರೂಗಿಳಿದಿದೆ ಮಾತ್ರವಲ್ಲ ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸುವ ಮಟ್ಟಕ್ಕೆ ಇಳಿದಿವೆ.

ಇದಕ್ಕಾಗಿ ಅವರೇನು ಹೋಮ ಹವನ ಮಾಡಲಿಲ್ಲ. ಮ್ಯಾಜಿಕ್ ಮಾಡಲಿಲ್ಲ, ಫ್ರಿ ವಿದ್ಯುತ್ ಸಹ ನೀಡಲಿಲ್ಲ. ವೈಜ್ಞಾನಿಕ ವಿಧಾನದಲ್ಲಿ 21 ಶಾಲೆಗಳ ಮಹಡಿ ಮೇಲೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿದ್ದು ಆ ಶಾಲೆಗಳು ಬಳಸಿ ಮಿಗುವಷ್ಟು ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ “21 ಶಾಲೆಗಳ ನಮ್ಮ ಪ್ರಯೋಗ ಸಫಲವಾಗಿದೆ. 100 ಶಾಲೆಗಳಲ್ಲಿ ಸೋಲಾರ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. 500 ಶಾಲೆಗಳಿಗೆ ಶೀಘ್ರದಲ್ಲಿಯೇ ವಿಸ್ತರಿಸುತ್ತೇವೆ ಎಂದಿದ್ದಾರೆ.” ದೆಹಲಿಯು ಪೂರ್ಣ ವಿದ್ಯುತ್ ಸ್ವಾವಲಂಬಿಯಾಗುವತ್ತ ಇದೊಂದು ದೃಢ ಹೆಜ್ಜೆ ಎಂದು ಸಹ ಹೇಳಿದ್ದಾರೆ.

ದೆಹಲಿಯಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2016-17ರಲ್ಲಿ ದೆಹಲಿಯ ಪ್ರತಿ ಮಗಿವಿನ ವಾರ್ಷಿಕ ಶಿಕ್ಷಣ ವೆಚ್ಚ 54,910/- ಗಳಿದ್ದು 2018-19ರ ವೇಳೆಗೆ 66,038/- ರೂಗಳಿಗೆ ಏರಿಕೆಯಾಗಿದೆ. ಹೊಸದಾಗಿ 300 ನರ್ಸರಿ ತರಗತಿಗಳನ್ನು ಆರಂಭಿಸಿರುವ ಅವರು 12,748 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಹಲವು ಹೊಸ ಕಟ್ಟಡಗಳ ಜೊತೆಗೇನೆ 52 ಶಾಲೆಗಳ ದುರಸ್ಥಿ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.

ದೆಹಲಿ ಸರ್ಕಾರಿ ಶಾಲೆಯ ಈಜುಕೊಳ

ದೆಹಲಿಯಲ್ಲಿ ಈ ಬಾರಿ ಬಿಸಿಲು ಮತ್ತು ಉಷ್ಣಾಂಶ ಮಿತಿ ಮೀರಿ ಏರಿಕೆಯಾಗಿದೆ. ಸಹಜವಾಗಿ ಸೆಕೆಯೂ ಹೆಚ್ಚಾಗಿದೆ. ಹಾಗಾಗಿ ಅಲ್ಲಿನ ಶಾಲೆಗಳಲ್ಲಿ ಉತ್ತಮ ಫ್ಯಾನ್ ಗಳು ಮತ್ತು ಕೂಲರ್ ಗಳನ್ನು ಅಳವಡಿಸಿ ಮಕ್ಕಳ ಹಿತ ಕಾಯಲಾಗುತ್ತಿದೆ. ಕರ್ನಾಟಕದಲ್ಲಿ ಎಷ್ಟೋ ಶಾಲೆಗಳಿಗೆ ವಿದ್ಯುತ್ ಸಹ ಇಲ್ಲದಿರುವ ಸಂಧರ್ಭದಲ್ಲಿ ನಾವು ಇದನ್ನೂ ಊಹಿಸಿಕೊಳ್ಳುವುದು ಸಹ ಕಷ್ಟವೇನೋ?

ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ. ಶಿಕ್ಷಕರಿಗೆ ವಿದೇಶಗಳಲ್ಲಿಯೂ ತರಬೇತಿ ನೀಡಲಾಗಿದೆ. ಸತತ ಪರಿಶ್ರಮದ ನಂತರ ದೆಹಲಿಯ ಮಕ್ಕಳು ಎಸ್‍ಎಸ್‍ಎಲ್‍ಸಿ, ಸಿಬಿಎಸ್‍ಸಿ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದರ ಹಿಂದೆ ಅತಿಶಿ ಮರ್ಲೀನಾ, ಮನೀಶ್ ಸಿಸೋಡಿಯ, ಅರವಿಂದ್ ಕೇಜ್ರಿವಾಲ್‍ರವರ ಇಚ್ಛಾಶಕ್ತಿ ಕೆಲಸ ಮಾಡಿತ್ತು.

ಸೆಕೆ ತಡೆಯಲು ಕೂಲರ್ ಗಳು

ಸರ್ಕಾರಿ ಶಾಲೆಗಳನ್ನು ವಿಶ್ವದರ್ಜೆಗೆ ಏರಿಸಿದ್ದು, ಹೊಸ ಹೈಟೆಕ್ ಶಾಲೆಗಳನ್ನು ಸ್ಥಾಪಿಸಿದ್ದು, ಮೊಹಲ್ಲ ಕ್ಲಿನಿಕ್‍ಗಳು, ಹೈಟೆಕ್ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟಿದ್ದು, ವಿದ್ಯುತ್ ದರ ಅರ್ಧಕ್ಕೆ ಇಳಿಸಿದ್ದು, ನೀರಿನ ದರ ಸಂಪೂರ್ಣ ಕಡಿತಗೊಳಿಸಿ ಉಚಿತ ಮಾಡಿದ್ದು, ಆಯುಸ್ಮಾನ್ ಭಾರತ್‍ನ ಸುಲಭ ಯೋಜನೆ, ಮೆಟ್ರೊ ಮತ್ತು ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇನ್ನಿತರ ಹತ್ತಾರು ದೆಹಲಿಯ ಜನಪರ ಯೋಜನೆಗಳ ಸಾಲಿಗೆ ಈ ಸೋಲಾರ್ ಘಟಕಗಳು ಸೇರುತ್ತಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸಿತ್ತು. ಯಾರು ಫ್ರಿಡ್ಜ್ ಹೊಂದಿದ್ದಾರೆ, ಟೆಲಿಫೋನ್ ಹೊಂದಿದ್ದಾರೋ ಅಥವಾ ಬೈಕ್ ಹೊಂದಿರುವವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂಬ ಕಠಿಣ ನಿಯಮವನ್ನು ರೂಪಿಸಿತ್ತು. ಇವೆಲ್ಲವೂ ಇಲ್ಲದೇ ಇರುವವರಿಗೆ ಮಾತ್ರ 5 ಲಕ್ಷ ರೂವರೆಗಿನ ಚಿಕಿತ್ಸೆ ಉಚಿತವಾಗಿತ್ತು.

ಇದಕ್ಕೆ ಸೆಡ್ಡು ಹೊಡೆದ ದೆಹಲಿ ಸರ್ಕಾರ ದೆಹಲಿಯ ನಿವಾಸಿಗಳು ಫ್ರಿಡ್ಜ್, ಟೆಲಿಫೋನ್, ಬೈಕ್ ಇದ್ದರೂ ಎಲ್ಲರೂ ಸಹ ಹೊಸ ಆರೋಗ್ಯ ಯೋಜನೆಯ ಫಲಾನುಭವಿಗಳಾಗಿದ್ದು ಸಂಪೂರ್ಣ ಉಚಿತ ಚಿಕಿತ್ಸೆ ಮಾತ್ರವಲ್ಲದೇ, ಚಿಕಿತ್ಸೆಯ ಮಿತಿಯನ್ನು ಸಹ ತೆಗೆದುಹಾಕಿ ಮಾದರಿ ಯೋಜನೆ ಎನಿಸಿಕೊಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಒಟ್ಟಿನಲ್ಲಿ ಜನರಿಗೆ ಏನೆಲ್ಲಾ ಮೂಲಭೂತ ಅವಶ್ಯಕತೆಗಳಿವೆಯೇ ಅವೆಲ್ಲವನ್ನು ಪೂರೈಸಲು ದೆಹಲಿಯ ಆಪ್ ಒಂದೊಂದೇ ದೃಢ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಅದೊಂದು ಮಾದರಿ ಸರ್ಕಾರವಾಗಿದೆ. ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯ, ಅತಿಶಿ ಮರ್ಲೀನಾ ಇವರನ್ನು ಈ ಕಾರಣಕ್ಕೆ ಅಭಿನಂದಿಸಬೇಕಿದೆ. ದೆಹಲಿ ಸರ್ಕಾರಕ್ಕೆ ಮಾಡಲಾಗುವ ಕೆಲಸಗಳನ್ನು ಉಳಿದ ಸರ್ಕಾರಗಳು ಯಾಕೆ ಮಾಡಲಾಗುವುದಿಲ್ಲ ಎಂಬ ಪ್ರಶ್ನೆಯನ್ನು ಜನತೆ ಕೇಳಬೇಕಿದೆ ಮತ್ತು ಅದೇ ಮಾದರಿಯಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...