Homeಕರ್ನಾಟಕಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ನಾಳೆ ಮೈಸೂರಿನಲ್ಲಿ ಪ್ರತಿಭಟನೆ

ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ನಾಳೆ ಮೈಸೂರಿನಲ್ಲಿ ಪ್ರತಿಭಟನೆ

ಇಡೀ ಘಟನೆಯ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕೆಂದು ಆರೋಪಿಸಿ ಜೂನ್ 12 ರಂದು ಪ್ರತಿಭಟನೆ ನಡೆಸಿ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ.

- Advertisement -
ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ನಡೆದಿದ್ದ ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ನಾಳೆ ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದು ಬುಧವಾರ ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಟೌನ್ ಹಾಲ್ ಮುಂಭಾಗ ನಡೆಯಲಿದೆ.
ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಈ ಘಟನೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಹ ಕರ್ತವ್ಯ ನಿರ್ಲಕ್ಷ್ಯವು ಕೂಡ ಕಾರಣವಾಗಿದ್ದು ಅವರ ಮೇಲೂ ಕ್ರಮ ಜರುಗಿಸಬೇಕು ಮತ್ತು ಕೂಡಲೇ ಸರ್ಕಲ್ ಇನ್ಸ್ ಪೆಕ್ಟರ್ ರವರನ್ನು ವಜಾ ಮಾಡಬೇಕೆಂದ ಹಕ್ಕೊತ್ತಾಯಗಳನ್ನು ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.
ಅಮಾನವೀಯ ಘಟನೆಯ ವಿವರ:
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿಯ ಎಸ್. ಪ್ರತಾಪ್ ರವರು ಗುಂಡ್ಲುಪೇಟೆ ನಿವಾಸಿಯಾಗಿದ್ದು ಜೂನ್ 2 ರಂದು ಐ.ಎ.ಎಸ್.ಸಿ ಪರೀಕ್ಷೆಯನ್ನು ಬರೆಯಲು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದಾರೆ. ತಡವಾಗಿ ಹೋದ ಕಾರಣ ಪರೀಕ್ಷೆ ವಂಚಿತನಾಗಿ, ಇದೆ ಬೇಸರದಿಂದ ಮೈಸೂರಿನಲ್ಲಿ ಕಾಲ ಕಳೆದು ವಾಪಸ್ಸು ಗುಂಡ್ಲುಪೇಟೆ ಕಡೆಗೆ ತನ್ನ ಬೈಕಿನಲ್ಲಿ ಹೋಗಬೇಕಾದ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಈತನ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ.
ನಂತರ ಮಾನಸಿಕವಾಗಿ ಹೆದರಿಹೋದ ಈತ ರಾತ್ರಿಯಿಡಿ ಅಲ್ಲೆ ಕಾಲ ಕಳೆದು ಜೂನ್ 3ರ ಬೆಳಿಗ್ಗೆ 6 ಗಂಟೆಗೆ ಆಶ್ರಯಕ್ಕಾಗಿ ವೀರನಪುರ ಗೇಟ್ ಹತ್ತಿರವಿರುವ ಶನಿಮಹಾತ್ಮ (ಕೆಬ್ಬೆಕಟ್ಟೆ ಹತ್ತಿರ) ದೇವಸ್ಥಾನಕ್ಕೆ ಹೋಗಿದ್ದಾರೆ. ಈತನನ್ನು ಕಂಡ ಅರ್ಚಕರು ಈತನ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಿಸಿದಾಗ ಈತನ ಊರು ಮತ್ತು ಈತ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೆಂದು ತಿಳಿದ ನಂತರ ದೇವಾಲಯದಲ್ಲಿ ವಿಗ್ರಹ ಕದಿಯಲು ಬಂದಿದ್ದಾನೆ ಎಂದು ಆರೋಪಿಸಿ ಥಳಿಸಿದ್ದಲ್ಲದೇ, ಆತನ ಬಟ್ಟೆಯನ್ನೆಲ್ಲ ಬಿಚ್ಚಿ ಕೈಗಳನ್ನು ಹಗ್ಗದಿಂದ ಕಟ್ಟಿ ದೇವಸ್ಥಾನದಿಂದ ಊಟಿ- ಮೈಸೂರು ರಸ್ತೆಯ ಮುಖ್ಯ ರಸ್ತೆಯವರೆವಿಗೂ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆ ಮೆರವಣಿಗೆಯ ವಿಡಿಯೋ ಕೂಡ ಮಾಡಿ ಕ್ರೌರ್ಯದ ಅಟ್ಟಹಾಸ ಮೆರೆದಿದ್ದಾರೆ.
ತಲೆ ಕೆಡಿಸಿಕೊಳ್ಳದ ಜಿಲ್ಲಾಡಳಿತ
ಅಂದಹಾಗೆ ಈ ರೀತಿ ಗುಂಪು ಹಲ್ಲೆ ನಡೆದು, ಜಾತಿ ನಿಂದನೆ, ಬೆತ್ತಲೆ ಮೆರವಣಿಗೆ ನಡೆದು ಒಂದು ವಾರವಾದರೂ ಪೊಲೀಸ್ ಇಲಾಖೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಪೊಲೀಸ್‍ನವರು ಕನಿಷ್ಠ ಸ್ವಯಂ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕಿತ್ತು. ಆದರೆ ಜಿಲ್ಲಾಡಳಿತ ಸೇರಿದಂತ ಪೊಲೀಸ್ ಇಲಾಕೆ ಅದಕ್ಕೂ ತಮಗೂ ಸಂಬಂಧವಿಲ್ಲದ ರೀತಿ ವರ್ತಿಸಿದ್ದಾರೆ. ಅಮಾನವೀಯವಾದ ಘೋರ ಘಟನೆಯೊಂದು ತಮ್ಮ ಜಿಲ್ಲೆಯಲ್ಲಿ ನಡೆದಿದ್ದರೂ ಆರೋಪಿಗಳು ಇನ್ನು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಹಲ್ಲೆಗೊಳಗಾದ ಎಸ್ ಪ್ರತಾಪ್ ಎಂಬುವವರು ಮತ್ತಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿ ಸದ್ಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿಭಟನೆಗೆ ಕರೆ
ಇದರಿಂದ ಎಚ್ಚೆತ್ತ ದಲಿತ ಸಂಘಟನೆಗಳು ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಇಡೀ ಘಟನೆಯ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕೆಂದು ಆರೋಪಿಸಿ ಜೂನ್ 12 ರಂದು ಪ್ರತಿಭಟನೆ ನಡೆಸಿ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ಬಳಸಿ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು, ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು. ಈ ರೀತಿಯ ಅಮಾನವೀಯ ದೌರ್ಜನ್ಯಗಳು ಹೆಚ್ಚುತ್ತಿರುವುದು ನೋಡಿದರ ಕಾಯ್ದೆಯನ್ನು ಇನ್ನಷ್ಟು ಸಬಲಗೊಳಿಸಬೇಕಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ ವಿಕೃತಿ ಮೆರೆಯುತ್ತಿರುವ ಜಾತಿವಾದಿಗಳಿಗೆ ಸರ್ಕಾರ ಸರಿಯಾಗಿ ಎಚ್ಚರಿಕೆ ಕೊಡಬೇಕಿದೆ. ಇದು ಕೇವಲ ದಲಿತ ಸಂಘಟನೆಗಳು ಮಾತ್ರ ಮಾಡುವ ಪ್ರತಿಭಟನೆಯಲ್ಲ. ಎಲ್ಲಾ ಸಮುದಾಯದ ಮಾನಯವೀಯತೆ ಉಳ್ಳವರು ಇಂತಹ ವಿಕೃತ ಘಟನೆಗಳ ವಿರುದ್ಧ ದನಿಯೆತ್ತಬೇಕು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಜನಶಕ್ತಿಯ ಗೌರಿ ತಿಳಿಸಿದ್ದಾರೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...