Homeಅಂತರಾಷ್ಟ್ರೀಯ2050ರ ವೇಳೆಗೆ ಮುಂಬೈ, ಕೋಲ್ಕತ್ತಾ ನಗರಗಳು ಸಮುದ್ರದೊಳಗೆ ಮುಳುಗಲಿವೆಯೇ? ಹೊಸ ವರದಿ ಬಿಚ್ಚಟ್ಟ ವಾಸ್ತವ....

2050ರ ವೇಳೆಗೆ ಮುಂಬೈ, ಕೋಲ್ಕತ್ತಾ ನಗರಗಳು ಸಮುದ್ರದೊಳಗೆ ಮುಳುಗಲಿವೆಯೇ? ಹೊಸ ವರದಿ ಬಿಚ್ಚಟ್ಟ ವಾಸ್ತವ….

- Advertisement -
- Advertisement -

ಪ್ರಾಕೃತಿಕ ವಿಕೋಪದಿಂದ ಭಾರತದ ಹಲವು ಪ್ರದೇಶಗಳು ಈಗಾಗಲೇ ತತ್ತರಿಸಿ ಹೋಗಿವೆ. ಚಂಡಮಾರುತ, ಮಳೆ, ಪ್ರವಾಹಕ್ಕೆ ತುತ್ತಾಗಿ ಭಾರಿ ಹಾನಿಯುಂಟಾಗಿದೆ. ಲಕ್ಷಾಂತರ ಜನ ಸಂತ್ರಸ್ತರಾಗಿದ್ದು, ಮನೆ-ಮಠ ಕಳೆದುಕೊಂಡಿದ್ದಾರೆ. ಹೀಗಿರುವಾಗ ಅಮೆರಿಕ ಮೂಲದ ಸಂಸ್ಥೆಯಿಂದ ಬಿಡುಗಡೆ ಮಾಡಿದ ವರದಿ ಜನರನ್ನು ಮತ್ತಷ್ಟು ಗಾಬರಿ ಬೀಳಿಸುವಂತಿದೆ.

ಅಮೆರಿಕ ಮೂಲದ ಹವಾಮಾನ ಕೇಂದ್ರ ಅಧ್ಯಯನ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿ, ಭಾರತಕ್ಕೆ ಜಲದಿಗ್ಬಂಧನ ಉಂಟಾಗುವ ಸಾಧ್ಯತೆಗಳನ್ನು ಗಂಭೀರವಾಗಿ ಉಲ್ಲೇಖಿಸಿದೆ. 2050 ರ ವೇಳೆಗೆ ಕಡಲ್ಕೊರೆತ ಮತ್ತು ಸಮುದ್ರದ ಉಬ್ಬರ, ಉಕ್ಕುವಿಕೆ, ಕಾರ್ಬನ್ ಡೈಆಕ್ಸೈಡ್ ಪ್ರಮಾಣದ ಹೆಚ್ಚಳದಿಂದ ಕರಾವಳಿ ಭಾಗಗಳಾದ ಮುಂಬೈ, ನವೀ ಮುಂಬೈ, ಕೋಲ್ಕತ್ತಾ ನಗರಗಳು ಮುಳುಗಿ ಹೋಗಲಿವೆ. ಕಡಲ್ಕೊರೆತದ ಹೆಚ್ಚಳದಿಂದ ಈಗ 50 ಲಕ್ಷ ಜನ ಮಾತ್ರ ಸಂತ್ರಸ್ತರಾಗಿದ್ದಾರೆ. ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮೂರೂವರೆ ಕೋಟಿ ಜನ ಸಂಕಷ್ಟ ಅನುಭವಿಸಲಿದ್ದಾರೆ ಎಂದು ವರದಿ ಹೇಳಿದೆ.

ಯುಎಸ್ ಮೂಲದ ಹವಾಮಾನ ಸಂಶೋಧನೆ ಮತ್ತು ಸಂವಹನ ಸಂಸ್ಥೆ ಹವಾಮಾನ ಕೇಂದ್ರ, ನೂತನ ಡಿಜಿಟಲ್ ಎಲಿವೇಶನ್ ಮಾದರಿಯ ಸಮುದ್ರ ಉಬ್ಬರ ಮಾಪನವನ್ನು ಸಂಶೋಧನೆ ಮಾಡಿದೆ. ಈ ಮೂಲಕ ಸಂಶೋಧನೆ ನಡೆಸಿ, ಹವಾಮಾನ ಅಧ್ಯಯನ ಕೇಂದ್ರ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ನೈಸರ್ಗಿಕ ಬದಲಾವಣೆ, ಕರಾವಳಿಯಲ್ಲಿ ಪ್ರವಾಹ, ಕಡಲ್ಕೊರೆತದಂತ ವಿಷಯಗಳನ್ನು ನಾಸಾದ ಎಸ್.ಆರ್.ಟಿ.ಎಂ ( ಶಟಲ್ ರಾಡಾರ್ ಟೋಪೋಗ್ರಫಿ ಮಿಷನ್ ) ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದೂ ಅಲ್ಲದೇ ಇವುಗಳಿಂದ ಆಗಬಹುದಾದ ಅನಾಹುತವನ್ನು ಇಲ್ಲಿಯವರೆಗೆ ಕಡಿಮೆ ಮಟ್ಟದಲ್ಲಿ ಊಹಿಸಿದೆ ಎಂದು ಉಲ್ಲೇಖಿಸಿದೆ.

ನಾಸಾ ಮಾದರಿಯಲ್ಲಿ  ಆಗಸಕ್ಕೆ ಹತ್ತಿರವಿರುವ ಸಮುದ್ರದ ಮೇಲ್ಮೆ ಉಬ್ಬರವನ್ನು ಅಳೆಯುವಾಗ, ಅಂತಹ ಜಲಪ್ರದೇಶವು ಆವರಿಸಿರುವ ಭೂಭಾಗದಲ್ಲಿರುವ ಮರದ ತುದಿಗಳು ಮತ್ತು ಕಟ್ಟಡಗಳ ಮೇಲ್ಛಾವಾಣಿಗಳನ್ನು ಪರಿಗಣಿಸಲಾಗುತ್ತಿದೆ. ಹೊಸ ಸಂಶೋಧನಾ ವಿಧಾನದಲ್ಲಿ ಇಂತಹ ದೋಷಗಳನ್ನು ಸರಿಪಡಿಸಿಕೊಂಡು ಕೃತಕ ಬುದ್ದಿಮತ್ತೆ ಸಾಧನಗಳ ಮೂಲಕ ಸಮುದ್ರದ ಮೇಲ್ಮೈ ಉಬ್ಬರವನ್ನು ಸಂಶೋಧಕರು ಮಾಪನ ಮಾಡಿದ್ದಾರೆ. ಅದರ ಪ್ರಕಾರ 2050ರ ವೇಳೆಗೆ ಸಮುದ್ರತೀರ ಪ್ರದೇಶಗಳಲ್ಲಿ ನಾಸಾ ಊಹಿಸಿದ್ದಕ್ಕಿಂತಲೂ ಗಂಭೀರ ಉಬ್ಬರ ಸಂಭವಿಸಲಿದೆ.  ಇದು ಜಾಗತಿಕವಾಗಿ 300 ದಶಲಕ್ಷ ಜನರ ಮೇಲೆ ಪರಿಣಾಮ ಬೀರಬಹುದು. ಏಷ್ಯಾ ಭಾಗಗಳಲ್ಲಿ ಕರಾವಳಿ ಭಾಗಗವನ್ನು ಅತಿಕ್ರಮಿಸಿಕೊಂಡಿರುವವರ ಭೂಮಿಯನ್ನೂ ಸಹ ಇದು ಮುಳುಗಿಸಲಿದೆ. ಸುಮಾರು 150 ದಶಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ.

2015ರ ಪ್ಯಾರಿಸ್ ಒಪ್ಪಂದವನ್ನು ಉಲ್ಲಂಘಿಸಿ ಹೊರಸೂಸುತ್ತಿರುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣದ ಆಧಾರದಲ್ಲಿ ಮತ್ತು ಹಿಮಗಡ್ಡೆಗಳ ತ್ವರಿತ ಕರಗುವಿಕೆಯಿಂದಾಗಿ ಸಮುದ್ರಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಸುಮಾರು 640 ದಶಲಕ್ಷ ಜನ ವಾಸಿಸುತ್ತಿರುವ ಕರಾವಳಿ ಭೂಭಾಗವು ಅಲೆಗಳ ಅಪಾಯಕಾರಿ ಉಬ್ಬರದ ಆತಂಕಕ್ಕೆ ಈಡಾಗಲಿವೆ. ಅದರಲ್ಲಿ 340 ದಶಲಕ್ಷ ಜನ ವಾಸಿಸುತ್ತಿರುವ ಭೂಪ್ರದೇಶವು 2100ರ ವೇಳೆಗೆ ಸರಾಸರಿ ಅಲೆಗಳ ಎತ್ತರಕ್ಕಿಂತಲೂ ತಗ್ಗಿನ ಪ್ರದೇಶವಾಗಿ ರೂಪಾಂತರವಾಗಲಿದೆ. ಇದರ ಅರ್ಥ ಏಷ್ಯಾದ ಎಂಟು ದೇಶಗಳಲ್ಲಿ ಅಪಾಯ ಹೆಚ್ಚಲಿದೆ. ಕನಿಷ್ಠ 10 ದಶಲಕ್ಷ ಜನ ವಾಸಿಸುವ ಭೂಮಿಗೆ ಹೋಲಿಸಿದರೆ ಉಬ್ಬರವಿಳಿತ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಜಾಗತಿಕ ಸರಾಸರಿ ಸಮುದ್ರಮಟ್ಟ, ಇಪ್ಪತ್ತನೇ ಶತಮಾನದಲ್ಲಿ 11-16 ಸೆಂ.ಮೀ ಹೆಚ್ಚಾಗಿದೆ. ಇಂಗಾಲದ ಹೊರಸೂಸುವಿಕೆಗೆ ತೀಕ್ಷ್ಣ ಮತ್ತು ತಕ್ಷಣದ ಕಡಿತವಿದ್ದರೂ ಸಹ, ಇದು ಈ ಶತಮಾನದಲ್ಲಿ 0.5 ಮೀ. ಆಗಿದೆ. ಆದರೆ ಹೆಚ್ಚಿನ ಇಂಗಾಲ ಹೊರಸೂಸುವಿಕೆಯ ಸನ್ನಿವೇಶಗಳಲ್ಲಿ, ಇಪ್ಪತ್ತೊಂದನೇ ಶತಮಾನದಲ್ಲಿ 2 ಮೀ.ನಷ್ಟು ಮೀರಿ ಹೋಗಲಿದೆ ಎಂದು ಅಧ್ಯಯನ ಎಚ್ಚರಿಸಿದೆ. ಹೊಸ ಅಂಕಿ ಅಂಶಗಳ ಪ್ರಕಾರ, 2050ರ ವೇಳೆಗೆ ಬಾಂಗ್ಲಾದೇಶ ಮತ್ತು ಚೀನಾದಲ್ಲಿ ಕ್ರಮವಾಗಿ ಕರಾವಳಿ ಪ್ರದೇಶದ 93 ಮತ್ತು 42 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...