ಕಾಮಿಡಿಯನ್ ಕುನಾಲ್ ಕಮ್ರಾ ಅವರೊಂದಿಗೆ ಒಗ್ಗಟ್ಟನ್ನು ತೋರಿಸಲು ಕಾರ್ಯಕರ್ತರ ಗುಂಪೊಂದು ವಾರಣಾಸಿ-ದೆಹಲಿ ನಡುವೆ ಸಂಚರಿಸುವ ಇಂಡಿಗೊ ವಿಮಾನದಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿ ಅವರನ್ನು ಎದುರಿಸಿದ ಕಾಮಿಡಿಯನ್ ಕುನಾಲ್ ಕಮ್ರಾ ಅವರಿಗೆ ಆರು ತಿಂಗಳ ಕಾಲದ ನಿಷೇಧವನ್ನು ಖಂಡಿಸಿ ಆಕ್ಟಿವಿಸ್ಟ್ ಪ್ರಿಯಾ ಪಿಳ್ಳೈ ಮತ್ತು ಇತರ ಮೂವರು ವಾರಣಾಸಿ-ದೆಹಲಿ ಇಂಡಿಗೊ ವಿಮಾನದಲ್ಲಿ ಗುರುವಾರ ಫಲಕಗಳನ್ನು ಹಿಡಿದಿದ್ದರು.
ಇದೇ ವೇಳೆ ಟ್ವಿಟ್ಟರ್‌ನಲ್ಲಿ #boycottIndigo ಟ್ರೆಂಡಿಂಗ್ ಆಗಿರುವಾಗಲೇ ಕಮ್ರಾವನ್ನು ನಿಷೇಧಿಸಿದ ಇಂಡಿಗೊ ನಡೆಯನ್ನು ವಿರೋಧಿಸಲು ಕೆಲವರು, ಸ್ಪಷ್ಟವಾಗಿ ವಿಮಾನದ ಒಳಗಿನ ಜಾಗವನ್ನೇ ಆಕ್ರಮಿಸಿಕೊಂಡಿದ್ದಾರೆ.
ಇಂಡಿಗೊ ಫ್ಲೈಟ್ ಪೈಲಟ್ ಕೂಡ ಈ ನಿಷೇಧದ ಕ್ರಮವನ್ನು ಟೀಕಿಸಿದ್ದಾರೆ. ಅಲ್ಲದೇ ಕುನಾಲ್ ಕರ್ಮ ಇಂಡಿಗೊ ವಿರುದ್ಧ 25 ಲಕ್ಷ ರೂಗಳ ಮಾನನಷ್ಟ ಮೊಕದ್ದಮೆ ಸಹ ಹೂಡಿದ್ದಾರೆ.
ಪತ್ರಿಕಾ ಡಾಟ್ ಕಾಮ್ ವರದಿಯ ಪ್ರಕಾರ, ಕೆಲವು ಜನರು ಕುನಾಲ್ ಕಮ್ರಾ ಅವರನ್ನು ಇಂಡಿಗೊ ನಿಷೇಧಿಸಿರುವುದನ್ನು ವಿರೋಧಿಸಿ ಪ್ರತಿಭಟಿಸಲು ಪ್ರಾರಂಭಿಸಿದರು … ವಾರಣಾಸಿಯಿಂದ ದೆಹಲಿಗೆ ಪ್ರಯಾಣಿಸುವ ಇಂಡಿಗೊ ವಿಮಾನದ ಒಳಗೆ.
‘ಕುನಾಲ್ ಕಮ್ರಾ ಪರ ನಾವಿದ್ದೇವೆ. ನೀವು ನಮ್ಮನ್ನು ವಿಭಜಿಸಿದಷ್ಟು ನಾವು ಒಗ್ಗೂಡುತ್ತೇವೆ ಮತ್ತು ಡಬಲ್ ಆಗುತ್ತೇವೆ. ನಿಷೇಧವನ್ನು ನಾವು ಖಂಡಿಸುತ್ತೇವೆ’ ಎಂದು ಹೇಳುವ ಪೋಸ್ಟರ್‌ಗಳನ್ನು ಕೆಲವು ಪ್ರತಿಭಟನಾಕಾರರು ಹಿಡಿದಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಚಿತ್ರಗಳು ಮತ್ತು ವೈರಲ್ ವೀಡಿಯೊಗಳು ತೋರಿಸುವಂತೆ ಪ್ರತಿಭಟನಾಕಾರರು ಮೌನವಾಗಿ ಪೋಸ್ಟರ್‌ಗಳನ್ನು ಹಿಡಿದಿಟ್ಟುಕೊಂಡಿದ್ದಾರೆ, ಮತ್ತು ಇತರ ಪ್ರಯಾಣಿಕರು ತಮ್ಮ ಅದನ್ನು ಗಮನದಿಂದ ಓದುತ್ತಿದ್ದಾರೆ.
ನಂತರ ಸಿಬ್ಬಂದಿ ಬಂದು ಕುಳಿತುಕೊಳ್ಳಲು ಹೇಳಿದ್ದಾರೆ. ಅಲ್ಲಿಗೆ ಶಾಂತಿಯುತ ಪ್ರತಿಭಟನೆ ಮುಗಿದಿದೆ. ಯಾವುದೇ ವಾದ ವಿವಾದಗಳು ದಾಖಲಾಗಿಲ್ಲ.


