Homeಕರ್ನಾಟಕಸಿದ್ಧಲಿಂಗಯ್ಯನವರಿಗೆ... ತಮಟೆಯ ಹಾಡು

ಸಿದ್ಧಲಿಂಗಯ್ಯನವರಿಗೆ… ತಮಟೆಯ ಹಾಡು

- Advertisement -
- Advertisement -

ತಮಟೆ ತೊಗಲ ತೀಡಿ ತೀಡಿ
ತಮಟೆ ದನಿಯ ಹೊಸತು ಮಾಡಿ
ಜಗದ ಜಡವ ಸಾರಿದೆ
ಬೆವರ ತಾಪ ಸೋಕಿದೆ

ಮೋಡ ತಾರೆ ಗ್ರಹಗಳಲ್ಲಿ
ಮುತ್ತು ರತ್ನ ಉದುರುತಿರಲು
ರೆಟ್ಟೆ ಹೊಟ್ಟೆ ಬೆವರ ಜೊತೆಗೆ
ಕುಳಿತುಕೊಂಡೆ ಮಾತಿಗೆ

ಒಡಲತುಂಬ ಕಾವ್ಯ ಕಟ್ಟೆ
ನದಿಗಳಲ್ಲಿ ಹರಿಯಬಿಟ್ಟೆ
ಕನಸು ತೇಲಿ ಮೂಟೆಗಟ್ಟೆ
ಬಾಯಿ ಬಿಚ್ಚಿ ಹಾರಿಬಿಟ್ಟೆ

ಹರಿತವಾದ ಹಲ್ಲು ಮೂಡಿ
ಹಸಿ ಹಸಿವು ಹೊಟ್ಟೆಯೊಳಗೆ
ಗೋಳಾಡುವ ಬಾಯಿ ಮುಚ್ಚಿ
ಕೆಂಡ ಸುರಿವ ನಾಲಿಗೆ

ಗಾಳಿ ಮಳೆ ಬಿಸಿಲಿನಲ್ಲಿ
ಬದುಕುವವರ ರೆಕ್ಕೆಗಳು
ಸಿಟ್ಟಿನಿಂದ ನಕ್ಕಾಗ
ಬಾನೆತ್ತರ ಬಿರುಗಾಳಿ

ಆಡು ಭಾಷೆ ಹಾಡುವವರ
ಕ್ರಾಂತಿಪದದ ದನಿಯಾದೆ
ಒಲವಾದೆ ಬಲವಾದೆ
ತಲೆಯೆತ್ತಿ ನಡೆವ ಛಲವಾದೆ

ಓ ಬಂಡಾಯಗಾರ
ಇರುವೆ ಸಾಲಿನೊಡೆಯ
ಕನ್ನಡವ್ವನ ಕರಿಯ

ತಬರ-ಬೆಲ್ಚಿ ಕಾಡಿದಂತೆ
ಖೈರ್ಲಾಂಜಿ- ವೇಮುಲ ಕಾಡಲಿಲ್ಲವೇ
ಇನ್ನೂ ಅಲ್ಲೇ ಕುಂತವರ ಕೂಗು
ಮೊನ್ನೆಯವರೆಗೂ ಕೇಳಿತಲ್ಲವೇ

ಮುಳ್ಳಿನ ಆಲಿಂಗನಕ್ಕೆ
ತೋಳ್ದೆರದ ಚಳಿಯಾದೆಯಲ್ಲ
ನೋವನೇಕೆ ಹೇಳಲಿಲ್ಲ
ತಬ್ಬಿದ್ದು ನಲವತ್ತೇಳರ ಸ್ವಾತಂತ್ರ್ಯವೇ

ಹೋಗಿ ಬಾ ಹೋಗಿ ಬಾ
ಕನ್ನಡದ ಕ್ರಾಂತಿಕವಿಯೆ
ನಿನ್ನ ಹೆಜ್ಜೆ ಗುರುತುಗಳು
ಕಬ್ಬಂಡೆ ಮೇಲೆ ಮೂಡಿವೆ


ಇದನ್ನೂ ಓದಿ: ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ಧಲಿಂಗಯ್ಯನವರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...