Homeಕರ್ನಾಟಕಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

- Advertisement -
- Advertisement -

ಒಲ್ಲದ ಮನಸ್ಸಿನಿಂದಲೇ ಸ್ಪೀಕರಿಕೆ “ದಂಡ” ದೀಕ್ಷೆ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಕತ್ತಲಲ್ಲಿ ಕೋಲು ಕಳಕೊಂಡ ಅರೆ ಕುರುಡನಂತೆ ಕಂಗಾಲು ಬಿದ್ದಿದ್ದಾರೆ. ಸತತ ಆರು ಬಾರಿ ಮತೋನ್ಮತ್ತ ಮಸಲತ್ತಿನ ಬಲದಿಂದ ಶಾಸಕಾಗಿರುವ ಈ ಎಬಿವಿಪಿ ಕೇಡರಿನ “ಹಿರಿಯ” ಸಂಘಿ ಸರದಾರ, ಸದನದಲ್ಲಿ ಸಂಸದೀಯ ಜಾಣ್ಮೆ ಪ್ರದರ್ಶಿಸಿದ ಕುರುಹುಗಳೇನೂ ಕಾಣಿಸುತ್ತಿಲ್ಲ. ಕಾಗೇರಿ ಅಂಥ ಜನತಾಂತ್ರಿಕ, ಜನಪದ ಕುಶಾಗ್ರಮತಿ ರಾಜಕಾರಣಿಯೇನಲ್ಲ ಎಂಬುದು ಆತನ ಕಾಲು ಶತಮಾನದ ಗ್ರಾಫು-ಟ್ಯ್ರಾಕು ನೋಡಿದರೆ ಎಂಥವರಿಗೆ ಪಕ್ಕಾ ಆಗುತ್ತದೆ. ಆತನ ಸ್ವಪಕ್ಷದ ಆಜನ್ಮ ಶತ್ರುವೂ, ಬೆಂಕಿ ಬಡಾಯಿ ಸಂಸದನೂ ಆದ ಅನಂತ್ಮಾಣಿ ಆಗಾಗ ಕಾಗೇರಿಗೆ “ಸಂಭಾವಿತ ಹೇಡಿ” ಎಂದು ಪರೋಕ್ಷವಾಗಿ ತಿವಿಯುತ್ತಲೇ ಇರುತ್ತಾನೆ.

ನಿಧಾನಗತಿಯ ಕಾಗೇರಿಯಲ್ಲಿ ಸದನ ನಿಭಾಯಿಸುವ ಪ್ರಜಾತಾಂತ್ರಿಕ ಕೌಶಲ್ಯವಾಗಲೀ, ಹಾರಾಡುವ ಶಾಸಕರನ್ನು ನಿಯಮ ನೀತಿಗಳ ಅಂಕುಶದಿಂದ ನಿಯಂತ್ರಿಸುವ ಜ್ಞಾನವಾಗಲೀ ಇಲ್ಲವೆಂದು ಕೇಶವಕೃಪದಲ್ಲಿ ಒಂದು ಸುತ್ತಿನ ಚರ್ಚೆಯೂ ಆಗಿದೆಯಂತೆ. ಆತ ಅಧಿವೇಶನ ನಡೆಯುವ ಹೊತ್ತಲ್ಲಿ ವಿಧಾನಸಭಾ ಅಧ್ಯಕ್ಷತೆ ಕುರ್ಚಿಯಲ್ಲಿ ಒಂಥರಾ ಕಕ್ಕಾಬಿಕ್ಕಿ ಆಗಿರುವುದಂತೂ ಹೌದು. ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

ಯಡ್ಡಿ ಸರ್ಕಾರದ ಕಡೆಯಲ್ಲಿ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಒಬ್ಬರು ಬಿಟ್ಟರೆ ಸಂಸಧೀಯ ಪರಿಭಾಷೆಯಲ್ಲಿ ಮಾತಾಡುವ ತಂತ್ರಗಾರರು ಇಲ್ಲ. ಸಿ.ಟಿ.ರವಿಯಂಥ ದೇಶ “ಕುಟ್ಟುವ” ಹಿಂದೂತ್ವದ ಹಿರೇಮಣಿಗಳು ಬಿಜೆಪಿ ಬದಿಯಲ್ಲಿದ್ದಾರೆಯೇ ಹೊರತು ಕಾಂಗ್ರೆಸ್‍ನ ಸಿದ್ದು, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ….. ಮುಂತಾದ ನುರಿತ ಸಂಸದೀಯ ಪಟುಗಳಿಗೆ ತಿರುಗೇಟು ಕೊಡುವ ಚತುರರಿಲ್ಲ!

ಇದು ಪೆದ್ದು ಸ್ಪೀಕರ್ ಪೀಕಲಾಟವನ್ನು ಮತ್ತಷ್ಟು ಜಾಸ್ತಿಮಾಡಿದೆ! ಆತ ಯಡ್ಡಿಯ ಅಕ್ರಮ ಸರ್ಕಾರಕ್ಕೆ ಸಂದಿಗ್ಧ ಎದುರಾದಾಗೆಲ್ಲಾ ತಿಣುಕಾಡುವಂತಾಗಿದೆ ಪಾಪ!!. ಕಾಗೇರಿಯ ಇನ್ನೊಂದು ದೊಡ್ಡ ಕಷ್ಣವೆಂದರೆ ಅನರ್ಹ ಶಾಸಕರ ಗಲೀಜು ಪ್ರಕರಣ. ಈ ಕೇಸು ಸುಪ್ರೀಂ ಕೋರ್ಟಿನಲ್ಲಿದೆಯಾದರೂ ವಿಧಾನಸಭಾಧ್ಯಕ್ಷ ಕಾಗೇರಿಯನ್ನೂ ಇದು ಕಂಡೂಕಾಣದಂತೆ ಬಾದಿಸುತ್ತಿದೆ. ಮಾಧ್ಯಮದವರನ್ನು ಅಧಿವೇಶನಕ್ಕೆ ಬರದಂತೆ ನಿರ್ಬಂಧಿಸಿರುವ ಕಾಗೇರಿ ವಿವಾದಕ್ಕೆ ಸಿಲುಕಿದ್ದಾರೆ. ಇಂಥ ಹಲವು “ಧರ್ಮಸೂಕ್ಷ್ಮ”ಕ್ಕೆ ಬಿದ್ದಿರುವ ಕಾಗೇರಿಗೆ ಸ್ಪೀಕರಿಕೆ ಹೊಣೆಗಾರಿಕೆ ಸುಸ್ತು ಹೊಡೆಸುತ್ತಿದೆ.

ಅಧಿಕಾರ ವಹಿಸಿಕೊಂಡ ಮರುಕ್ಷಣದಿಂದಲೇ ಕಾಗೇರಿ ಆಸರೆಗಾಗಿ ತಡಕಾಡುತ್ತಲೇ ಇದ್ದರು. ಸದನ ಮತ್ತು ಕಲಾಪದ ತಂತ್ರಜ್ಞಾನದ ಆಳ-ಅಗಲ ಬಲ್ಲವನೊಬ್ಬನ ಸಹಾಯಕನಾಗಿ ನೇಮಿಸಿಕೊಳ್ಳುವ ಅರ್ಜಂಟಿಗೆ ಬಿದ್ದಿದ್ದರು. ಕಾಗೇರಿಯ ದೌರ್ಬಲ್ಯ ಗೊತ್ತಾಗಿದ್ದೇ ತಡ, ವಿಧಾನ ಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್ ಚುರುಕಾದರು. ಬಿಜೆಪಿ ವಲಯದಲ್ಲಿ ಪ್ರಭಾವಿ ಸಂಪರ್ಕಗಳನ್ನು ಹೊಂದಿರುವ ಓಂ ಪ್ರಕಾಶ್ ಹತ್ತಿರದ ಸಂಬಂಧಿಯೊಬ್ಬರು ಬಿಜೆಪಿಯ ಆಯಕಟ್ಟಿನ ಜಾಗದಲ್ಲೂ ಇದ್ದಾರೆ. ಈತ ಕಾಗೇರಿಗೂ ಪರಮಾಪ್ತ. ಹಿಂದೆ ಇಂಥದೇ ಆಟ ಆಡಿ ವಿಧಾನಸಭೆ-ವಿಧಾನ ಪರಿಷತ್ ಎರಡಕ್ಕೂ ಸೇರಿದ ಮಹಾಪ್ರಧಾನ ಕಾರ್ಯದರ್ಶಿ ಆಗಲು ಓಂ ಪ್ರಕಾಶ್ ಹವಣಿಸಿದ್ದರು. ಆಗ ಯಡ್ಡಿ ಸಿಎಂ ಆಗಿದ್ದರೆ, ಒಂ ಪ್ರಕಾಶ್ ವಿಧಾನಸಭೆಯ ಕಾರ್ಯದರ್ಶಿಯಾಗಿದ್ದರು. ಆದರೆ ಆಗ ಅದು ವಿಫಲವಾಗಿತ್ತು.

ಇದೇ ಓಂ ಪ್ರಕಾಶ್‍ರನ್ನು ಕಾಗೇರಿ ಈಗ ತನ್ನ “ಸಲಹೆಗಾರ”ನಾಗಿ ನೇಮಿಸಿಕೊಂಡಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲೇ ಯಾವ ಸ್ಪೀಕರೂ ಇಂಥ ದೈನೇಸಿ ಸ್ಥಿತಿಗೆ ಬಿದ್ದಿರಲಿಲ್ಲ. ಸ್ಪೀಕರ್ ವಿಶೇಷ ಕರ್ತವ್ಯಾಧಿಕಾರಿ ನೇಮಿಸಿ ಕೊಳ್ಳಬಹುದೇ ಹೊರತು “ಸಲಹೆಗಾರ” ಹುದ್ದೆ ಸೃಷ್ಟಿಗೆ ವಿಧಾನಸಭೆಯ ಸಿ ಆ್ಯಂಡ್ ಆರ್ ನಿಯಮದಂತೆ ಅವಕಾಶವೇ ಇಲ್ಲ! ನಡುಪಕ್ಷೀಯವಾಗಿ ಓಂ ಪ್ರಕಾಶ್‍ರನ್ನು ಸಲಹೆಗಾರನೆಂದು ನೇಮಿಸಿಕೊಂಡಿರುವ ಕಾಗೇರಿ ಸಂಪ್ರದಾಯ, ನೀತಿಯನ್ನೆಲ್ಲಿ ಬುದ್ದಿ ಪೂರ್ವಕವಾಗೇ ದಿಕ್ಕರಿಸಿದ್ದಾರೆ. ಇಂಥ ನೇಮಕಾತಿ ಹೊತ್ತಲ್ಲಿ ವಿಧಾನಸಭೆ ಸಮಿತಿ ಸಭೆ ಕರೆಯುವುದು ಪದ್ಧತಿ. ವಾಡಿಕೆಯನ್ನೆಲ್ಲ ಕಡೆಗಣಿಸಿ ಸಲಹೆಗಾರನ ನೇಮಿಸಿಕೊಂಡಿರುವ ಕಾಗೇರಿ ನಡೆಯಿಂದ ವಿಧಾನಸಭೆ ಸಿಬ್ಬಂದಿ ಬೆಚ್ಚಿಬಿದ್ದಿದೆ. ಇದ್ಯಾವುದಕ್ಕೂ ಕೇರ್ ಮಾಡದ ಕಾಗೇರಿ ತನ್ನ ನಿಲುವು ಅಚಲ ಎಂದು ಸಿಬ್ಬಂದಿಗೆ ರೋಪು ಹಾಕಿದ್ದಾರಂತೆ.

ವಿಧಾನಸಭೆಯ ಕಾರ್ಯದರ್ಶಿಗೆ ತತ್ಸಮಾನವಾದ ಹುದ್ದೆ ಸಲಹೆಗಾರ ಸಾಹೇಬರಿಗೆ ದಯಪಾಲಿಸಲಾಗಿದೆ. ಇದರಿಂದ ಎರಡು ಅಧಿಕಾರ ಕೇಂದ್ರ ಸೃಷ್ಟಿಯಾಗಿ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಅನಾಹುತ ಎದುರಾಗಲಿದೆ. ದೈನಂದಿನ ಕಾರ್ಯನಿರ್ವಹಣೆಯಲ್ಲಿ ಎಡವಟ್ಟಾಗಲಿದೆ. ಅನಗತ್ಯ ದುಂದು ವೆಚ್ಚವಾಗಲಿದೆ. ಅಷ್ಟಕ್ಕೂ ಇಂಥದೊಂದು ಸಲಹೆಗಾರನ ಅಗತ್ಯವಾದರೂ ಇತ್ತೇ ಎಂದರೆ, ಊಹುಂ ಅದೂ ಇಲ್ಲ! ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಿಗೆ ಸದನದ ಕಲಾಪದ ನಿಯಮಾವಳಿ, ಇನ್ನಿತರ ಕಾನೂನು, ಶಾಸಕರ ಹಕ್ಕು ಬಾಧ್ಯತೆಗಳ ತಿಳುವಳಿಕೆ ಇದ್ದೇ ಇರುತ್ತದೆ. ಇವರೆಲ್ಲ ಸ್ಪೀಕರ್ ಎಂಥ ಮೊದ್ಮಣಿಯಾದರೂ ಗೈಡ್ ಮಾಡಿ ಹಳಿಗೆ ತರುವ ಜಾಣರಿರುತ್ತಾರೆ.

ಆದರೆ ಗೊಂದಲಕ್ಕೆ ಬಿದ್ದಿರುವ ಕಾಗೇರಿಗೆ ಸಿಬ್ಬಂದಿ, ಕಾರ್ಯದರ್ಶಿಗಳಿಗಿಂತ ಖಾಸಗಿ ಸಲಹೆಗಾರನ ಮೇಲೆಯೇ ನಂಬಿಕೆ ಹೆಚ್ಚು! ಸಾಮಾನ್ಯವಾಗಿ ಇಂಥ ಅಯೋಗ್ಯ ನೇಮಕಾತಿಗೆ ಹಣಕಾಸು ಇಲಾಖೆ ಆಕ್ಷೇಪವೆತ್ತಿ ಕಡತ ತಿರಸ್ಕಾರಿಸುತ್ತಾರೆ. ಆದರೆ ವಿಚಿತ್ರವೆಂದರೆ ಕಾಗೇರಿಯ ಈ ಕರಾಮತ್ತನ್ನು ಈವರೆಗೆ ಹಣಕಾಸು ಇಲಾಖೆ ಪ್ರಶ್ನಿಸದೇ ನಿಗೂಢ ಮೌನದಲ್ಲಿದೆ.

ಇದು ಸಂಘದೊಳಗಿನ ಸರ್ಕಸ್ ಮತ್ತು ಕಾಗೇರಿಯ ಪೊಕ್ಕುತನದ ಮಹಿಮೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...