Homeರಾಷ್ಟ್ರಹೈದರಾಬಾದ್ ನಲ್ಲಿ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ಹೈದರಾಬಾದ್ ನಲ್ಲಿ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಹೈದರಾಬಾದ್ ನಲ್ಲಿ ಐಐಟಿ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಹೈದರಾಬಾದ್ ಐಐಟಿಯಲ್ಲಿ ಮೂರನೇ ವರ್ಸದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಪಿಚ್ಚಿಕಾಲ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.

ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಸಂಗಾರೆಡ್ಡಿ ಜಿಲ್ಲೆಯ ಕಂಡ ಸಮೀಪವಿರುವ ಹೈದರಾಬಾದ್ ಐಐಟಿ ಕ್ಯಾಂಪಸ್ ನ ಹಾಸ್ಟೆಲ್ ಕಟ್ಟಡದ ಮೇಲಿನಿಂದ ಸಿದ್ಧಾರ್ಥ ಜಿಗಿದಿದ್ದಾನೆ. ತೀವ್ರ ಗಾಯಗೊಂಡು ಅಸ್ವಸ್ತನಾಗಿದ್ದ ಆತನನ್ನು ಬಾಲಾಜಿ ಕಾಂಟಿನೆಂಟಲ್ ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಟೈಪ್ ಮಾಡಿ ಅದನ್ನು ತನ್ನ ಸ್ನೇಹಿತರಿಗೆ ಇ-ಮೇಲ್ ಮಾಡಿದ್ದಾನೆ. ಡೆತ್ ನೋಟ್ ನಲ್ಲಿ ‘ಜೀವನದಲ್ಲಿ ಖಿನ್ನತೆ ಉಂಟುಮಾಡಿದೆ. ತಪ್ಪಾದ ಎಳೆಗಳನ್ನು ಎಂದಿಗೂ ಕೊನೆಗೊಳಿಸಲು ಆಗುವುದಿಲ್ಲ. ಮಾನಸಿಕವಾಗಿ ಒತ್ತಡದಲ್ಲಿದ್ದೇನೆ. ಭವಿಷ್ಯದ ದಾರಿ ಕಾಣುತ್ತಿಲ್ಲ.’
‘ಎರಡು ತಿಂಗಳಿಂದಲೂ ಈ ಬಗ್ಗೆ ಯೋಚಿಸುತ್ತಿದ್ದೇನೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಸಾಧಿಸಲು ಆಗುತ್ತಿಲ್ಲ. ಪ್ರತಿಯೊಂದು ಹೆಜ್ಜೆಯ ಬಗ್ಗೆಯೂ ವಿಮರ್ಶೆ ಮಾಡಿಕೊಂಡಿದ್ದೇನೆ. ಹೋಗಬಾರದೆಂದು ಕೊಂಡಿದ್ದೇನೆ. ಹೌದು, ಹೋಗಬಾರದು. ನಾನು ಸ್ವಾವಿಮರ್ಶೆ ಮಾಡಿಕೊಳ್ಳುವ ವ್ಯಕ್ತಿ. ‘
‘ಎಲ್ಲಾ ಸಮಯದಲ್ಲೂ ನನ್ನ ಹಿಂದಿನವರನ್ನು ಹೋಲಿಸಿಕೊಂಡರೆ ಆ ದಾರಿಯಲ್ಲಿ ಹೋಗಬೇಕು ಎನಿಸುತ್ತಿದೆ. ಆದರೆ ನನಗೆ ಓದುವುದರಲ್ಲಿ ಆಸಕ್ತಿ ಬರುತ್ತಿಲ್ಲ.ಭವಿಷ್ಯ ಬಗ್ಗೆ ದಾರಿ ಕಾಣುತ್ತಿಲ್ಲ ‘ ಹೀಗೆ ಬರೆದಿರುವ ಪಿಚ್ಚಕಾಲ ಸಿದ್ದಾರ್ಥ ತನ್ನ ನೋವನ್ನ ಪತ್ರದ ಮೂಲಕ ತೋಡಿಕೊಂಡಿದ್ದಾನೆ.
ಇದೇ ವರ್ಸದ ಜುಲೈ ತಿಂಗಳಲ್ಲಿ ಮಾರ್ಕ್ ಆಂಡ್ರ್ಯೂ ಚಾರ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದ. ಹೈದರಾಬಾದ್ ನ ಐಐಟಿ ಕ್ಯಾಂಪಸಲ್ಲಿರುವ ಹಾಸ್ಟೆಲ್ ರೂಂನಲ್ಲಿ ಸೀಲಿಂಗ ಫ್ಯಾನ್ ಗೆ ಬಿಗಿದುಕೊಂಡು ನೇಣಿಗೆ ಶರಣಾಗಿದ್ದ. ಅವನು ಕೂಡ ಡೆತ್ ನೋಟ್ ಬರೆದಿದ್ದ. ಹೆಚ್ಚು ಅಂಕ ಪಡೆಯಲು ಆಗಿಲ್ಲ. ಹೀಗಾಗಿ ನನಗೆ ಭವಿಷ್ಯ ಇಲ್ಲ. ನಾನು ಜಗತ್ತಿನಲ್ಲಿ ವಿಫಲನಾಗಿದ್ದೇನೆ. ನಾನು ನಿಮ್ಮೆಲ್ಲರನ್ನು ನಿರಾಸೆಗೊಳಿಸಿದ್ದೇನೆ. ಎಂದು ನಾನು ಎಂದಿಗೂ ಆಲೋಚಿಸಿರಲಿಲ್ಲ.ನಾನು ಅರ್ಹನಲ್ಲ ಹೀಗೆ…
ಫೆಬ್ರವರಿ ತಿಂಗಳಲ್ಲಿ ಅನಿರುದ್ಧ ಮುಮ್ಮನೆಲಿ ಬಿಲ್ಡಿಂಗ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪಿಎಚ್.ಡಿ. ವಿದ್ಯಾರ್ಥಿ ರೋಹಿತ್ ವೇಮುಲ ಹೈದರಾಬಾದ್ ಉಸ್ಮಾನಿಯಾ ಯೂನಿವರ್ಸಿಟಿಯ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಎಲ್ಲಾ ಪ್ರಕರಣಗಳು ಹೈದರಾಬಾದ್ ನಲ್ಲೇ ನಡೆದ್ದರೂ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಲು ಕಾರಣವೇನು ಎಂಬುದನ್ನು ಸರ್ಕಾರಗಳು ಕಂಡುಕೊಂಡಿಲ್ಲ. ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಹೋಗದಂತೆ ಮಾಡಲು ಕ್ರಮ ಕೈಗೊಳ್ಳಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...