ಭೀಕರ ಪ್ರವಾಹ ಪೀಡಿತ ವಯನಾಡ್ ಪುನರ್ವಸತಿಗೆ ₹2,000 ಕೋಟಿ ಮತ್ತು ವಿಶೇಷ ಪ್ಯಾಕೇಜ್‌ಗೆ ₹24,000 ಕೋಟಿ ನೆರವು ನೀಡಬೇಕು ಎಂದು ಕೇರಳ ಸರ್ಕಾರವು ಕೇಂದ್ರ ಸರ್ಕಾರದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಬೇಡಿಕೆಯಿಟ್ಟಿದೆ. ಸಾಮಾನ್ಯ ಸಾಲದ ಮಿತಿಯನ್ನು ಮೊಟಕುಗೊಳಿಸಿರುವುದು ರಾಜ್ಯದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ರಾಜ್ಯವು ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ. ವಿಶೇಷ ಪ್ಯಾಕೇಜ್ ನೀಡಿ
ಜಿಎಸ್‌ಟಿ ಪರಿಹಾರ ನಿಲುಗಡೆ, ಕೇಂದ್ರ ವರ್ಗಾವಣೆಯಲ್ಲಿ ಕಡಿತ ಮತ್ತು ಆದಾಯ ಕೊರತೆ ಅನುದಾನದ ನಿಲುಗಡೆಯಿಂದಾಗಿ ರಾಜ್ಯವು ಆರ್ಥಿಕವಾಗಿ ಒತ್ತಡದಲ್ಲಿದೆ ಎಂದು ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
10 ನೇ ಹಣಕಾಸು ಆಯೋಗದ ಅವಧಿಯಲ್ಲಿ 3.875 ಪೈಸೆಯಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ 1.925 ಪೈಸೆ ಯವರೆಗೆ ಕೇರಳದ ಪಾಲು ನಿರಂತರವಾಗಿ ಕುಸಿತ ಕಂಡಿದೆ ಎಂದು ಸಚಿವರು ಹೇಳಿದ್ದಾರೆ. ರಾಜ್ಯ ಸರ್ಕಾರವು ತನ್ನದೇ ಆದ ತೆರಿಗೆ ಆದಾಯದಲ್ಲಿ ಶ್ಲಾಘನೀಯ ಹೆಚ್ಚಳ ಮಾಡಿದರೂ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಟ್ಟು ಆದಾಯ ವೆಚ್ಚದಲ್ಲಿ ರಾಷ್ಟ್ರೀಯ ಸರಾಸರಿ 53.9 ಲೈಸೆಗೆ ಹೋಲಿಸಿದರೆ, ಕೇರಳದ ಸ್ವಂತ ಆದಾಯದ ಪಾಲು 63.58 ಪೈಸಯಷ್ಟಿದೆ ಎಂದು ಅವರು ಹೇಳಿದ್ದಾರೆ.
ವಯನಾಡಿನಲ್ಲಿ ಭೂಕುಸಿತದ ಸಂತ್ರಸ್ತರ ಪುನರ್ವಸತಿಗಾಗಿ ₹2,000 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ನೈಸರ್ಗಿಕ ವಿಕೋಪಗಳು ಮತ್ತು ಸಂಭಾವ್ಯ ಅಪಾಯಗಳ ಕಾರಣದಿಂದಾಗಿ ಪೀಡಿತ ಪ್ರದೇಶವು ಇನ್ನು ಮುಂದೆ ವಾಸಯೋಗ್ಯವಾಗಿಲ್ಲ, ಆದ್ದರಿಂದ ನಿರಾಶ್ರಿತರನ್ನು ಹೊಸ ಟೌನ್‌ಶಿಪ್‌ಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಯೋಜಿಸಿದೆ. ವಿಶೇಷ ಪ್ಯಾಕೇಜ್ ನೀಡಿ
ಇಷ್ಟೆ ಅಲ್ಲದೆ, ಸಚಿವ ಬಾಲಗೋಪಾಲ್ ಅವರು ವಿಜಿಂಜಂ ಇಂಟರ್‌ನ್ಯಾಷನಲ್ ಸೀಪೋರ್ಟ್ ಲಿಮಿಟೆಡ್‌ಗೆ 5000 ಕೋಟಿ ರೂಪಾಯಿಗಳ ವಿಶೇಷ ನೆರವಿನ ರಾಜ್ಯದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. 2022-23 ರಿಂದ ಮುಕ್ತ ಮಾರುಕಟ್ಟೆಯ ಸಾಲದ ಮೇಲಿನ ಸೀಲಿಂಗ್ ಅನ್ನು ನಿಗದಿಪಡಿಸಲು ಕೇಂದ್ರ ಸರ್ಕಾರದ ಹೊಸ ವಿಧಾನದ ಬಗ್ಗೆ ಮರುಚಿಂತನೆ ಮಾಡಬೇಕೆಂದು ಸಚಿವರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ, ಶಸ್ತ್ರಾಸ್ತ್ರ – ಬಿಹಾರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ
ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ, ಶಸ್ತ್ರಾಸ್ತ್ರ – ಬಿಹಾರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ


