ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ಒಂಟಿ ಆನೆ ದಾಳಿ ಮಾಡಿ ಉಮೇಶ್ ಶೆಟ್ಟಿ ಹಾಗೂ ಹರೀಶ್ ಶೆಟ್ಟಿ ಇಬ್ಬರ ಸಾವಾಗಿದೆ. ಮನೆ ಬಳಿ ನಾಯಿ ಬೊಗಳುವ ಶಬ್ದ ಕೇಳಿ ಹೊರಗೆ ಬಂದ ಇಬ್ಬರನ್ನು ಒಂಟಿ ಆನೆ ತುಳಿದು ಸಾಯಿಸಿದೆ. ಇಂದು (ಅ.31) ಮುಂಜಾನೆ ಜಾವದಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಗ್ರಾಮಸ್ಥರು ಹಾಗೂ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

ಇತ್ತೀಚೆಗೆ ಮಾನವ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸ್ಥಳಿಯರಾದ ಕೆ.ಎಲ್ ಅಶೋಕ್, ಕರ್ನಾಟಕ ಜನಶಕ್ತಿ ನಾಯಕರು ಮಾತನಾಡುತ್ತಾ, “ಮನೆ ಬಳಿಯೇ ಆನೆ ತುಳಿತಕ್ಕೆ ಜನರು ಸಾಯುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ. ಈಗ ಶೃಂಗೇರಿಯ ಕೆರೆಕಟ್ಟೆ ಗ್ರಾಮದ ಉಮೇಶ್ ಶೆಟ್ಟಿ ಹಾಗೂ ಹರೀಶ್ ಹೆಗಡೆ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದವರು ಹಾಗೂ ಕುಟಂಬಕ್ಕೆ ಆಧಾರವಾಗಿದ್ದರು. ಈಗ ಈ ಕುಟುಂಬದ ಸ್ಥಿತಿ ನಿಜಕ್ಕೂ ಚಿಂತಾಜನಕ ಸ್ಥಿತಿಗೆ ತಲುಪಿದೆ, ಸರ್ಕಾರ ತುಳಿತಕ್ಕೊಳಗಾದವರ ಕುಟುಂಬಳಿಗೆ ನೆರವಾಗುವ ಕೆಲಸ ಮಾಡಬೇಕು ಅಲ್ಲದೇ ಮುಂದಿನ ದಿನಗಳಲ್ಲಿ ಮಾನವ ಪ್ರಾಣಿ ಸಂಘರ್ಷವನ್ನು ತಡೆಗಟ್ಟುವ ಕೆಲಸಕ್ಕೆ ಗಂಭೀರ ಚಿಂತನೆ ಮಾಡಬೇಕು, ಅಲ್ಲದೇ ಅರಣ್ಯ ಇಲಾಖೆ ಸಲಚಿವ ಈಶ್ವರ್ ಖಂಡ್ರೆ ಇಲಾಖೆಯನ್ನು ನಿಭಾಯಿಸುವಲ್ಲ ವಿಫಲವಾಗಿದ್ದಾರೆ ಹಾಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಸ್ಥಳೀಯ ಕರ್ನಾಟಕ ಜನಶಕ್ತಿ ಮುಖಂಡರಾದ ಸುರೇಶ್ ಗಡಿಕಲ್ ಮಾತನಾಡುತ್ತಾ, “ಶೃಂಗೇರಿ ಭಾಗದಲ್ಲಿ ಹಲವು ಬಾರಿ ಆನೆಗಳು ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ” ಎಂದಿದ್ದಾರೆ.


