ಈ ವಾರದಲ್ಲಿ ಕರ್ನಾಟಕ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಫಲಿತಾಂಶ ಪ್ರಕಟವಾದ ನಂತರ ಇಲಾಖೆಯ ಅಧಿಕೃತ ವೆಬ್ಸೈಟ್‌ನಲ್ಲಿ ಪ್ರಕಟವಾಗಲಿದೆ. ಬಹುತೇಕ ಆಗಸ್ಟ್ 6 ಅಥವಾ 8 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆಗಸ್ಟ್ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಘೋಷಿಸುವುದಾಗಿ ಜುಲೈ ತಿಂಗಳಲ್ಲಿ ಹೇಳಿದ್ದರು. ರಾಜ್ಯದಲ್ಲಿ ಈ ವರ್ಷ ಸುಮಾರು 8.40 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ.
ಜುಲೈ 3 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದಿದ್ದು, ಈಗಾಗಲೇ ಮೌಲ್ಯಮಾಪನ ಮುಕ್ತಾಯವಾಗಿದೆ. ಹೀಗಾಗಿ ಈ ವಾರದಲ್ಲೇ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದೆ.
ಕೊರೊನಾ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ತಡವಾಗಿ ಜೂನ್ 25ರಿಂದ ನಡೆಸಲಾಗಿತ್ತು. ಕೊರೋನಾ ಭೀತಿಯ ನಡುವೆ ಪರೀಕ್ಷೆಗಳನ್ನು ನಡೆಸಿದ್ದಕ್ಕೆ ವ್ಯಾಪಕ ವಿರೋಧ ಕೂಡಾ ಕೇಳಿಬಂದಿತ್ತು.
ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ವೀಕ್ಷಿಸಲು ಹೀಗೆ ಮಾಡಿ.
• ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ karresults.nic.in ವೆಬ್ಸೈಟ್‌ಗೆ ಹೋಗಿ.
• ಎಸ್ಸೆಸ್ಸೆಲ್ಸಿ ರಿಸಲ್ಟ್ 2020 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್‌ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.
• ಹಾಲ್ ಟಿಕೆಟ್‌ನ ಮಾಹಿತಿಯನ್ನು ವೆಬ್ಸೈಟ್‌ನಲ್ಲಿ ವೇರಿಫೈ ಮಾಡಿ.
ಇಷ್ಟು ಮಾಡಿದರೆ ಪರೀಕ್ಷೆಯ ಫಲಿತಾಂಶ ಸಿಗುತ್ತದೆ. ಆ ಫಲಿತಾಂಶವನ್ನು ಪಿಡಿಎಫ್ ಫಾರ್ಮಾಟ್‌ನಲ್ಲಿಯೇ ಡೌನ್ಲೋಡ್ ಕೂಡಾ ಮಾಡಬಹುದಾಗಿದೆ.
ಓದಿ: UPSC-2019 ರ ಪರೀಕ್ಷಾ ಫಲಿತಾಂಶ ಪ್ರಕಟ; ಪ್ರದೀಪ್ ಸಿಂಗ್‌ಗೆ ಮೊದಲ ಸ್ಥಾನ


