Homeಕರೋನಾ ತಲ್ಲಣಭಾರತದ ಕೊರೊನಾ ಪರೀಕ್ಷಾ ಪ್ರಮಾಣ ಕಡಿಮೆ: WHO

ಭಾರತದ ಕೊರೊನಾ ಪರೀಕ್ಷಾ ಪ್ರಮಾಣ ಕಡಿಮೆ: WHO

ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಯುಎಸ್ ನಂತಹ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಒಟ್ಟಾರೆಯಾಗಿ ಕಡಿಮೆ ಪರೀಕ್ಷಾ ಪ್ರಮಾಣವನ್ನು ಹೊಂದಿದೆ ಎಂದು ಅವರು ಹೇಳಿದರು.

- Advertisement -
- Advertisement -

ಕೊರೊನಾಗೆ ಸಮರ್ಪಕ ಪರೀಕ್ಷೆಯ ಮಹತ್ವವನ್ನು ಒತ್ತಿಹೇಳುತ್ತಾ, ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಉತ್ತಮ ಸಾಧನೆ ತೋರಿದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪರೀಕ್ಷಾ ಪ್ರಮಾಣ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಮಂಗಳವಾರ ಹೇಳಿದ್ದಾರೆ.

ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕಾದಂತಹ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಒಟ್ಟಾರೆಯಾಗಿ ಕಡಿಮೆ ಪರೀಕ್ಷಾ ಪ್ರಮಾಣವನ್ನು ಹೊಂದಿದೆ ಎಂದು ಅವರು ಹೇಳಿದರು.

ಪ್ರತಿ ಸಾರ್ವಜನಿಕ ಆರೋಗ್ಯ ಇಲಾಖೆಯು ಪ್ರತಿ ಮಿಲಿಯನ್‌ಗೆ ಪರೀಕ್ಷಾ ದರ ಎಷ್ಟು ಮತ್ತು ಪರೀಕ್ಷಾ ಸಕಾರಾತ್ಮಕ ದರ ಯಾವುದು ಎಂಬ ಮಾನದಂಡಗಳನ್ನು ಹೊಂದಿರಬೇಕು ಎಂದು ಹೇಳಿದರು.

ಪರೀಕ್ಷೆಯು ಅತ್ಯಂತ ಮುಖ್ಯವಾಗಿದೆ ಎಂದು WHO ಪದೇ ಪದೇ ಒತ್ತಿಹೇಳುತ್ತಿದೆ ಎಂದು ಅವರು ಹೇಳಿದರು.

“ನಾವು ಸಮರ್ಪಕವಾಗಿ ಪರೀಕ್ಷೆ ಮಾಡದಿದ್ದರೆ, ವೈರಸ್ ಎಲ್ಲಿದೆ ಎಂದು ನಮಗೆ ತಿಳಿಯುವುದಿಲ್ಲ. ನೀವು ಪರೀಕ್ಷಿಸದಿದ್ದರೆ, ನೀವು ಬೆಂಕಿಯೊಟ್ಟಿಗೆ ಕಣ್ಣುಮುಚ್ಚಿ ಹೋರಾಡಿದಂತಾಗುತ್ತದೆ. ನಾವು ಪರೀಕ್ಷಿಸಬೇಕು, ಪರೀಕ್ಷಿಸುತ್ತಿರಬೇಕು ಎಂದು ಹೇಳಿದರು.

ಡಾ. ಸೌಮ್ಯಾ ಸ್ವಾಮಿನಾಥನ್ ಮುಂದಿನ 12 ತಿಂಗಳುಗಳವರೆಗೆ, ದೇಶಗಳು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಹೇಳಿದರು.

ಉತ್ತಮ ಆಡಳಿತ, ವೈಜ್ಞಾನಿಕ ಜ್ಞಾನದ ಆಧಾರದ ಮೇಲೆ ಉತ್ತಮ ಕಾರ್ಯತಂತ್ರದ ಯೋಜನೆ, ಸಮುದಾಯ, ವೈಯಕ್ತಿಕ ನಂಬಿಕೆಯ ಒಳಗೊಳ್ಳುವಿಕೆ, ಸರ್ಕಾರ ಮತ್ತು ಜನರ ನಡುವಿನ ಉತ್ತಮ ಸಂವಹನದಿಂದಾಗಿ ಕೆಲವು ದೇಶಗಳು ಮೊದಲ ಹಂತದಲ್ಲಿ ವೈರಸ್‌ನ್ನು ಯಶಸ್ವಿಯಾಗಿ ನಿಯಂತ್ರಿಸುತ್ತವೆ ಎಂದು ಹೇಳಿದರು.

ಆದರೆ ಪರೀಕ್ಷೆ ಮಾತ್ರ ಸಮಸ್ಯೆಯನ್ನು ಪರಿಹರಿಸಲು ಹೋಗುವುದಿಲ್ಲ ಸೋಂಕು ದೃಢಪಟ್ಟ ಜನರನ್ನು ಪ್ರತ್ಯೇಕಿಸುವುದು, ಸಂಪರ್ಕವನ್ನು ಪತ್ತೆಹಚ್ಚುವುದು ಮುಖ್ಯ ಎಂದು ಅವರು ಹೇಳಿದರು.

27-28 ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಲ್ಲಿದ್ದರೆ, ಇನ್ನೂ 150 ಲಸಿಕೆಗಳು ಪೂರ್ವ-ಕ್ಲಿನಿಕಲ್ ಪರೀಕ್ಷೆಯಲ್ಲಿವೆ ಎಂದು ಅವರು ಹೇಳಿದರು. ಕೇವಲ ಐದು ಲಸಿಕೆಗಳು ಮೂರನೇ ಹಂತದ ಪ್ರಯೋಗಗಳಿಗೆ ಪ್ರವೇಶಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ತಿಳಿದುಕೊಳ್ಳುತ್ತೇವೆ. ನೀವು ಹೆಚ್ಚಿನ ಸಂಖ್ಯೆಯ ಆರೋಗ್ಯವಂತ ವ್ಯಕ್ತಿಗಳಿಗೆ ಲಸಿಕೆ ಹಾಕಲು ಹೋಗುವಾಗ ಸಾರ್ವಜನಿಕ ನಂಬಿಕೆಯನ್ನು ಪಡೆಯಲು ಸುರಕ್ಷತೆ ಮುಖ್ಯವಾಗಿದೆ ಎಂದರು.


ಇದನ್ನೂ ಓದಿ: ಕಮರಿದ ವಿಶ್ವಾಸ; ಕುಲೀನ ಅನುಮಾನಗಳ ನಡುವೆ, ಈ ದೇಶ ಮತ್ತೊಮ್ಮೆ ವಿಭಜನೆಯಾಗಿದೆ: ಶಿವಸುಂದರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...