ಡಿಎಂಕೆ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರದಂದು ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಯೋಜನೆಗಳು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿರುವುದು ವಿಶೇಷವಾಗಿದೆ.
1 ರಿಂದ 5 ನೇ ತರಗತಿವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಯೋಜನೆ, ಎಕ್ಸಲೆನ್ಸ್ ಶಾಲೆಗಳು, ಶಾಲಾ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ, ನಗರ ಪ್ರದೇಶಗಳಲ್ಲಿನ ಕೇಂದ್ರಗಳಂತೆ ಪಿಎಚ್‌ಸಿ (ಸಾರ್ವಜನಿಕ ಆರೋಗ್ಯ ಕೇಂದ್ರ) ಮತ್ತು ‘ನಿಮ್ಮ ಕ್ಷೇತ್ರದ ಯೋಜನೆಯಲ್ಲಿ ಸಿಎಂ’ ಯೋಜನೆಯ ವಿಸ್ತರಣೆಯನ್ನು ರಾಜ್ಯದ ವಿಧಾನಸಭೆಯಲ್ಲಿ ಮಾಡಿದ ಐದು ಘೋಷಣೆಗಳಾಗಿವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ನಿಮ್ಮ ಕ್ಷೇತ್ರದಲ್ಲಿ ಸಿಎಂ’ ಯೋಜನೆಯು ಸಾರ್ವಜನಿಕ ಕುಂದುಕೊರತೆ ನಿವಾರಣಾ ಯೋಜನೆಯಾಗಿದ್ದು, ಇದನ್ನು ತಮಿಳುನಾಡಿನ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ: ಬಣ್ಣದ ರಿಸ್ಟ್ ಬ್ಯಾಂಡುಗಳ ಮೂಲಕ ತಮಿಳುನಾಡು ಶಾಲೆಗಳಲ್ಲಿ ಮಾರಕವಾದ ಜಾತಿ ತಾರತಮ್ಯ!
ಸುಮಾರು ಒಂದು ದಶಕದ ನಂತರ ಡಿಎಂಕೆ-ಕಾಂಗ್ರೆಸ್ ಒಕ್ಕೂಟವು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಬಹುಮತದೊಂದಿಗೆ ಗೆದ್ದಿತ್ತು.
LIVE: சட்டமன்ற உரை https://t.co/OlFcmTozRt
— M.K.Stalin (@mkstalin) May 7, 2022
ಹೊಸ ಯೋಜನೆಗಳ ಘೋಷಣೆಗೂ ಮುಂಚೆ ಶನಿವಾರ ಮುಂಜಾನೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ತಂದೆ, ಮಾಜಿ ಸಿಎಂ ಕರುಣಾನಿಧಿ ಮತ್ತು ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ಮರೀನಾ ಬೀಚ್ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


