ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿಯಲು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಇಂದು ಮಣಿಪುರದ ತೌಬಲ್ ಜಿಲ್ಲೆಯ ವೇದಿಕೆ ಕಾರ್ಯಕ್ರಮದಿಂದ ಆರಂಭವಾಗಿದೆ.
‘ಇದು ಸೈದ್ಧಾಂತಿಕ ಯಾತ್ರೆಯೇ ಹೊರತು ಚುನಾವಣಾ ಯಾತ್ರೆಯಲ್ಲ’ ಎಂದು ಕಾಂಗ್ರೆಸ್ ಶನಿವಾರ ಪ್ರತಿಪಾದಿಸಿದೆ. ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10 ವರ್ಷಗಳ “ಅನ್ಯಾಯ ಕಾಲ” ಅಂತ್ಯಗೊಳಿಸುವುದು ಈ ಯಾತ್ರೆಯ ಉದ್ದೇಶವಾಗಿದೆ ಎಂದು ಪಕ್ಷ ಹೇಳಿದೆ.
LIVE: Launch of #BharatJodoNyayYatra in Thoubal, Manipur. https://t.co/oUEMw0XGzg
— Congress (@INCIndia) January 14, 2024
ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿದ್ದು, ಬಸ್ ಮತ್ತು ಕಾಲ್ನಡಿಗೆಯಲ್ಲಿ 6,713 ಕಿ.ಮೀ. ಈ ಯಾತ್ರೆಯು 67 ದಿನಗಳಲ್ಲಿ 110 ಜಿಲ್ಲೆಗಳಲ್ಲಿ ಪ್ರಯಾಣ ಬೆಳೆಸಲಿದೆ. ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಮಣಿಪುರಕ್ಕೆ ಆಗಮಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತೌಬಾದಲ್ಲಿರುವ ಖೋಂಗ್ಜೋಮ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಮಣಿಪುರದಿಂದ ನ್ಯಾಯ ಯಾತ್ರೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ನ್ಯಾಯ ಯಾತ್ರೆ’ ಆರಂಭಿಸಲು ಭಾನುವಾರ ಇಂಫಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಕೋರಿದರು.
ಭಾರತ್ ಜೋಡೊ ಯಾತ್ರೆಯಲ್ಲಿ ಬಳಸುವ ವಿಶೇಷ ಬಸ್ ಅನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅನಾವರಣಗೊಳಿಸಿದರು.
ಇದನ್ನೂ ಓದಿ; ಪ್ರಚೋದನಾಕಾರಿ ಹೇಳಿಕೆ: ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು


