“ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು, ಆಗ ಎಲ್ಲವೂ ಸರಿಯಾಗುತ್ತದೆ” ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮಿ ತಮ್ಮ ಹೇಳಿಕೆಗೆ ಮುಸಲ್ಮಾನರಲ್ಲಿ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಇಂದು (ನ.27) ಅವರು ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಬಾಯಿ ತಪ್ಪಿ ನೀಡಿದ ಹೇಳಿಕೆಯನ್ನು ಬೆಳೆಸದಂತೆ ಮತ್ತು ವಿವಾದವನ್ನು ಕೊನೆಗೊಳಿಸುವಂತೆ ಅವರು ಮುಸ್ಲಿಮರಲ್ಲಿ ಕೇಳಿಕೊಂಡಿದ್ದಾರೆ.
ಚಂದ್ರಶೇಖರ್ ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. “ಇಂದು ಮುಸ್ಲಿಮರಿಗೆ ಹೀಗೆ ಹೇಳುತ್ತಾರೆ, ಮುಂದಿನ ದಿನಗಳಲ್ಲಿ ಈ ಪಾಳೇಗಾರಿ ಮನಸ್ಥಿತಿಯ ಸ್ವಾಮಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಇಲ್ಲಿನ ಹಿಂದುಳಿದ ವರ್ಗಗಳ ಇತರ ಸಮುದಾಯಗಳಿಗೆ ಮತ್ತು ದಲಿತರಿಗೂ ಹೀಗೆ ಹೇಳುತ್ತಾರೆ” ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಕ್ಫ್ ಕಾಯಿದೆ ವಿರುದ್ಧವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯ ಸಹ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸ್ವಾಮಿ “ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ಮುಸ್ಲಿಂ ಜನಾಂಗಕ್ಕೆ ಮತದಾನದ ಹಕ್ಕೇ ಇಲ್ಲದಂತೆ ಕಾನೂನು ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಖಂಡಿತ ಅದನ್ನು ಮಾಡಬೇಕು. ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತ ಹಾಕುವ ಅಧಿಕಾರವಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕಿಲ್ಲದಂತೆ ಮಾಡಿದರೆ ಅವರು ಅವರ ಪಾಡಿಗಿರುತ್ತಾರೆ. ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ” ಎಂದಿದ್ದರು.
ಈ ಹೇಳಿಕೆ ವಿರುದ್ಧ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿವಾದವು ತೀವ್ರಗೊಳ್ಳುತ್ತಿದ್ದಂತೆ ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಕ್ಫ್ ಮಂಡಳಿ ರೈತಾಪಿ ಜನಗಳ ಒಕ್ಕಲೆಬ್ಬಿಸಿ ಅವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಗಮನಿಸಿದ್ದೆ. ಹಾಗಾಗಿ ರೈತನನ್ನು ಒಕ್ಕಲೆಬ್ಬಿಸುವ ಯಾವುದೇ ಸಂಸ್ಥೆಯ ನಡೆಯನ್ನಾಗಲಿ ನಾವು ಒಪ್ಪಲಾಗದು. ವಕ್ಫ್ ಮಂಡಳಿಗೆ ಅವರು ಹೊಂದಿರುವ ಜಮೀನುಗಳು ಯಾವ ರೀತಿ ಅವರಿಗೆ ಬಂದಿವೆ ಎಂಬುವುದರ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ ಆ ಜಮೀನುಗಳನ್ನು ಅವರು ಉಳಿಸಿಕೊಳ್ಳುವುದರ ಬಗ್ಗೆ ನಮಗೆ ಯಾವುದೇ ಅಭ್ಯಂತರವಿರುವುದಿಲ್ಲ” ಎಂದು ಹೇಳಿದ್ದಾರೆ.
“ಆದರೆ ತಲ ತಲಾಂತರಗಳಿಂದ ಕೃಷಿ ಮಾಡುತ್ತಿರುವ ನಮ್ಮ ರೈತನನ್ನು ವಕ್ಫ್ ಮಂಡಳಿಯ ಹೆಸರೇಳಿ ಜಾಗ ಖಾಲಿ ಮಾಡಿಸುವಂತಿಲ್ಲ. ಮೂಲತಃ ಒಕ್ಕಲಿಗರು ಧರ್ಮ ಸಹಿಷ್ಣುಗಳಾಗಿದ್ದು, ನಾವು ಎಲ್ಲಾ ಧರ್ಮದವರನ್ನು ಇಲ್ಲಿಯವರೆಗೂ ಸಮಾನವಾಗಿಯೇ ಕಂಡಿದ್ದೇವೆ. ನಮ್ಮ ಮಠಕ್ಕೆ ಮುಸ್ಲಿಮರು ಸಹ ಸಂಪರ್ಕವಿಟ್ಟುಕೊಂಡು ಬಂದು ಹೋಗುತ್ತಿರುತ್ತಾರೆ. ನಾನು ಕೂಡಾ ಸಹ ಮುಸ್ಲಿಮರ ಮದುವೆ ಹಾಗೂ ಇತರೆ ಶುಭ ಸಮಾರಂಭಗಳಿಗೆ ಭಾಗಿಯಾಗಿರುತ್ತೇನೆ. ಆದ್ದರಿ೦ದ ಮುಸ್ಲಿಮರ ಬಗ್ಗೆ ಯಾವುದೇ ಅಸಹಿಷ್ಣುತೆ ನನಗೆ ಇಲ್ಲ” ಎಂದು ತಿಳಿಸಿದ್ದಾರೆ.
“ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ ಆಗಿದ್ದು, ಅವರಿಗೂ ಎಲ್ಲರಂತೆ ಮತದಾನದ ಹಕ್ಕು ಇರುತ್ತದೆ. ನಿನ್ನೆಯ ದಿನ ನಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ನಾವು ಹೃತ್ಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಈ ವಿಷಯವನ್ನು ಬೆಳೆಸದಂತೆ ಇಲ್ಲಿಗೆ ಮುಕ್ತಾಯ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ” ಎಂದು ಕೋರಿದ್ದಾರೆ.
ಈ ಹಿಂದೆಯೂ ಚಂದ್ರಶೇಖರ ಅವರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. “ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಇಬ್ಭಾಗವಾಗಬೇಕು. ಹಾಗಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ” ಎಂದು ಹೇಳಿಕೆ ನೀಡಿದ್ದರು.
ಚಂದ್ರಶೇಖರ ಅವರ ನಿನ್ನೆಯ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇವೆಲ್ಲಾ ಉತ್ತರ ಪ್ರದೇಶದಿಂದ ಆಮದಾಗಿರುವ ಮಾತುಗಳಾಗಿವೆ. ಮೋದಿ ಮತ್ತು ಅಮಿತ್ ಶಾ ಅವರನ್ನು ಮೆಚ್ಚಿಸಲು ಈ ಸ್ವಾಮಿಗಳು ನೋಡುತ್ತಿದ್ದಾರೆ. ಇಂದು ಮುಸ್ಲಿಮರಿಗೆ ಹೀಗೆ ಹೇಳುತ್ತಾರೆ, ಮುಂದಿನ ದಿನಗಳಲ್ಲಿ ಈ ಪಾಳೇಗಾರಿ ಸ್ವಾಮಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಇಲ್ಲಿನ ಹಿಂದುಳಿದ ಇತರ ವರ್ಗಗಳು, ಮಹಿಳೆಯರಿಗೆ ಮತ್ತು ದಲಿತರಿಗೂ ಹೀಗೆ ಎನ್ನುತ್ತಾರೆ” ಎಂದು ದಲಿತ ಹೋರಾಟಗಾರರೊಬ್ಬರು ಹೇಳಿದ್ದರು.
“ಈ ಹಿಂದೆ ಉತ್ತರದಲ್ಲಿ ಈ ರೀತಿಯಾಗಿ ಸ್ವಾಮಿಗಳು ಕೋಮು ಉದ್ರೇಕಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು. ಅವರನ್ನು ರಾಜಕೀಯ ನಾಯಕರು ಬಳಸಿಕೊಂಡು ಅವರಿಗೆ ಅಧಿಕಾರ ನೀಡಿದ್ದರು. ಇದೀಗ ಅಧಿಕಾರಕ್ಕಾಗಿ ದಕ್ಷಿಣದ ಸ್ವಾಮಿಜಿಗಳು ಕೂಡಾ ಅದೇ ದಾರಿಯಲ್ಲಿ ಮೋದಿ ಮತ್ತು ಅಮಿತ್ ಶಾ ಅವರನ್ನು ಮೆಚ್ಚಿಸಲು ನೋಡುತ್ತಿದ್ದಾರೆ. ಆದರೆ ಇದು ಕರ್ನಾಟಕವಾಗಿದ್ದು, ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆ ಅವರನ್ನು ಒಪ್ಪುವುದಿಲ್ಲ” ಎಂದು ದಲಿತ ಹಕ್ಕುಗಳ ಹೋರಾಟಗಾರ ರವಿಕುಮಾರ್ ಅವರು ಹೇಳಿದ್ದರು.
ಉದಯ್ ಕುಮಾರ್ ಎಂಬ ಟ್ವಿಟರ್ ಬಳಕೆದಾರರೊಬ್ಬರು “ಖಾವಿದಾರಿ ಸ್ವಾಮಿಗಳಿಗೆ ಮಾತಾಡುವ ಹಕ್ಕು ಇಲ್ಲದಂತೆ ಮಾಡಬೇಕು. ಇಂದು ಮುಸ್ಲಿಮರಿಗೆ ಹೇಳುತ್ತಾರೆ. ನಾಳೆ ದಲಿತರಿಗೆ ಹೇಳುತ್ತಾರೆ. ಇವರು ಮನುವಾದಿಗಳು” ಎಂದು ಟೀಕಿಸಿದ್ದರು. ಮತದಾನದ ಹಕ್ಕಿನ
ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮಿ ವಿವಾದ
ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮಿ ವಿವಾದ



manu vadigalu prachara madodu idanne. ivarigella istondu prachara kodabedi