ಶಿವ-ಪಾರ್ವತಿ ವೇಷ ಧರಿಸಿದ ರಂಗಭೂಮಿ ಕಲಾವಿದರಿಬ್ಬರು ಬೆಲೆ ಏರಿಕೆ ವಿರುದ್ಧ ವಿನೂತನ ಬೀದಿ ನಾಟಕ ಪ್ರದರ್ಶಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರ ಗಮನ ಸೆಳೆದಿದೆ. ಕೂಡಲೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಆರೋಪದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ಜರುಗಿದೆ.
ಅಸ್ಸಾಂನ ನಾಗೋನ್ ನಗರದಲ್ಲಿ ಈ ಬೀದಿ ನಾಟಕ ನಡೆದಿದ್ದು, ಸಾರ್ವಜನಿಕರ ಗಮನೆ ಸೆಳೆದಿದೆ. ಇಬ್ಬರೆ ನಟರು ಶಿವ-ಪಾರ್ವತಿಯ ವೇಷ ಧರಿಸಿ ಹಲವೆಡೆ ನಾಟಕ ಪ್ರದರ್ಶಿಸಿದ್ದಾರೆ.
ಬಿರಿಂಚಿ ಬೋರಾ ಎಂಬ ಕಲಾವಿದರೊಬ್ಬರು ಶಿವನ ವೇಷ ಧರಿಸಿದರೆ, ನಟಿ ಪರಿಶಿಮಿತ ಎನ್ನುವವರು ಪಾರ್ವತಿಯ ವೇಷ ಧರಿಸಿ ಬೀದಿ ನಾಟಕದಲ್ಲಿ ಭಾಗವಹಿಸಿದ್ದರು. ಮನೆಯಿಂದಲೇ ಶಿವ ಪಾರ್ವತಿಯ ವೇಷದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೊರಟ ಅವರ ಬೈಕ್ ದಾರಿ ಮಧ್ಯೆಯೆ ನಿಂತು ಹೋಗುತ್ತದೆ. ಆಗ ಪಾರ್ವತಿ ಗೊಣಗುಡುತ್ತಾ ಶಿವನನ್ನು ಶಪಿಸುತ್ತಾರೆ. ಆಗ ಶಿವ ಪಾರ್ವತಿಯ ನಡುವೆ ವಾದ-ವಿದಾದ ನಡೆದು, ‘ಪೆಟ್ರೋಲ್ ಖಾಲಿ ಆದರೆ ನಾನೇನು ಮಾಡುವುದು, ಎಷ್ಟು ದುಡ್ಡು ಕೊಟ್ಟರೂ ಬೇಗ ಖಾಲಿಯಾಗುತ್ತದೆ. ನನ್ನನ್ನು ಬೈಯ್ಯುವುದರ ಬದಲು ಪೆಟ್ರೋಲ್ ದರ ಹೆಚ್ಚು ಮಾಡಿದ ನರೇಂದ್ರ ಮೋದಿ ಸರ್ಕಾರಕ್ಕೆ ಬೈಯಿ’ ಎನ್ನುತ್ತಾರೆ ಶಿವ. ಅಲ್ಲದೆ ಅಲ್ಲಿ ಸುತ್ತ ನೆರೆದಿದ್ದ ಜನರನ್ನು ಉದ್ದೇಶಿಸಿ ದಯವಿಟ್ಟು ಸರ್ಕಾರದ ಬೆಲೆ ಏರಿಕೆ ವಿರುದ್ಧ ದನಿಯೆತ್ತಿ ಪ್ರತಿಭಟಿಸಿ ಎಂದು ಕರೆ ನೀಡುತ್ತಾರೆ.
ಇಂತಹ ವಿನೂತನ ಬೀದಿನಾಟಕವನ್ನು ಅಲ್ಲಿ ನೆರೆದಿದ್ದವರು ಕುತೂಹಲದಿಂದ ವೀಕ್ಷಿಸಿ ಚಪ್ಪಾಳೆ ತಟ್ಟಿ ಬೆಂಬಲಿಸಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಇದನ್ನು ಸಹಿಸದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಯವರು ಬೀದಿ ನಾಟಕ ಮಾಡಿದ ಕಲಾವಿದನ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಪೊಲೀಸ್ ದೂರು ಸಲ್ಲಿಸಿದ್ದಾರೆ.
ಪೊಲೀಸರು ನಟ ಬಿರಿಂಚಿ ಬೋರಾರನ್ನು ಬಂಧಿಸಿದ್ದಾರೆ. ಆನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ; ಇದು ನಮ್ಮ ಭವಿಷ್ಯಕ್ಕಾಗಿ: ಜನಾಂದೋಲನಕ್ಕೆ ಲಂಕಾ ಮಾಜಿ ಕ್ರಿಕೆಟಿಗರ ಬೆಂಬಲ



ಇದ್ದದ್ದು ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಅಂದ್ರಂತೆ.. ಇಲ್ಲಿ ಯಾರು ಅನ್ಯಾಯದ ವಿರುದ್ಧ ದ್ವನಿ ಎತ್ತಬಾರದು, ಪ್ರತಿಭಟಿಸಬಾರದು ಒಂದು ವೇಳೆ ಹಾಗೇನಾದ್ರೂ ಮಾಡಿದ್ರೆ ಕೆಲವರು ಅವರೇ ಮೆಣಸಿನಕಾಯಿಯ ತುದಿ ಚಿವುಟಿ ಅಂಡಿಗೆ ಏರಿಸ್ಕೊಂಡು ಬಂದಬಿಡತಾವೇ ಅವ್ರಿಗೆ ಇಲ್ದಿರೋ ಸೆಕ್ಷನ್ ಅಡಿ ಕೇಸ್ ದಾಖಸೋಕೆ ಥೂ…. ಇವರ ಜನ್ಮಕ್ಕೆ ನಾಯಿ ಉಚ್ಚೆ ಹುಯ್ಲಿ.. ಇದೇನು ಪ್ರಜಾಪ್ರಭುತ್ವನಾ ಇಲ್ಲ ರಾಜಬ್ರಭುತ್ವನಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.ಇದೆ ಕೆಲಸ ಬೇರೆ ಧರ್ಮದ ನಟರು ಮಾಡಿದ್ರೆ ಆಗ್ಲೇ ಇಲ್ಲೊಂದು ಹುಚ್ಚು, ಬೇವರ್ಸಿ, ಕಂತ್ರಿ, ಕಜ್ಜಿ, ಹಲ್ಕಟ್, ಹಡಬಿಟ್ಟಿ ನಾಯಿ ಬೊಗಳಿರೋದು.