Homeಮುಖಪುಟಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಎರಡು ವಾರಗಳ ಹಿಂದೆ ಸಿನೆಮಾ ಮತ್ತು ಸ್ಟ್ರಕ್ಚರ್ ಬಗ್ಗೆ ಬರೆದಿದ್ದೆ. ಇಂದು ಸಂಘರ್ಷದ ಬಗ್ಗೆ ಬರೆಯಲು ಪ್ರಯತ್ನಿಸುವೆ.
ಇತರ ಕಲಾ ಮಾಧ್ಯಮಗಳನ್ನು ಹೋಲಿಸಿದರೆ ಸಿನೆಮಾಗೆ ತನ್ನದೇ ಆದ ಸಾಧ್ಯತೆಗಳೊಂದಿಗೆ ಇತಿಮಿತಿಗಳೂ ಇವೆ. ಸಿನೆಮಾದಲ್ಲಿ ಒಂದು ನೇರ ಕಥೆ ಇರಲೇಬೇಕು. ಒಬ್ಬ ಮುಖ್ಯ ಪಾತ್ರವನ್ನು ಗುರುತಿಸಲೇಬೇಕು,(ಇದಕ್ಕೆ ಕೆಲವು ಶ್ರೇಷ್ಠ ಅಪವಾದಗಳು ಖಂಡಿತ ಇವೆ.) ಆ ಮುಖ್ಯ ಪಾತ್ರಕ್ಕೆ ಕೆಲವು ಗುರಿಗಳಿರಬೇಕು, ಆ ಗುರಿಗಳಿಗೆ ತದ್ವಿರುದ್ಧವಾಗಿ ಕೆಲವು ಶಕ್ತಿಗಳಿರಬೇಕು. ಆಗ ಉಂಟಾಗುವುದು ಸಂಘರ್ಷ.

ಸಂಘರ್ಷವೇ ಒಂದು ಸಿನೆಮಾದ ಜೀವಾಳ. ಸಂಘರ್ಷ ತಪ್ಪಿದ ತಕ್ಷಣ ಆ ಸಿನೆಮಾ ಬಿದ್ದುಹೋಗುತ್ತದೆ. ನಮ್ಮಲ್ಲಿ ಅನೇಕ ಬರಹಗಾರರು ‘ಒಳ್ಳೆಯ’ ಕಥೆಗಳನ್ನು, ‘ಒಳ್ಳೆಯ’ ಸೀನ್‍ಗಳನ್ನು ಬರೆದು ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಒಳ್ಳೆಯ ಹಾಸ್ಯ, ಭಾವನೆ, ಒಳ್ಳೆಯ ವಿಚಾರಗಳನ್ನೂ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಆ ಎಲ್ಲ ‘ಒಳ್ಳೆಯ’ಗಳು ಸಂಘರ್ಷದ ವ್ಯಾಪ್ತಿಯಲ್ಲಿ ಬಂದಾಗ ಮಾತ್ರ ಕೆಲಸ ಮಾಡುತ್ತವೆ ಇಲ್ಲವಾದರೆ ಅವುಗಳು ಒಳ್ಳೆಯ ಸೀನ್‍ಗಳಾಗೇ ಉಳಿದು ಚಿತ್ರಕ್ಕೆ ಯಾವ ಸಹಾಯವನ್ನೂ ಮಾಡುವುದಿಲ್ಲ.

ಒಂದು ಕಾದಂಬರಿಯಲ್ಲಿ ಪಾತ್ರದ, ಆ ಪಾತ್ರಗಳು ಜೀವಿಸುತ್ತಿರುವ ಸಮಾಜದ ಬಗ್ಗೆ ನೂರಾರು ಪುಟಗಳನ್ನು ಬರೆಯಬಹುದು; ಆ ಪಾತ್ರದ ತಲೆಯೊಳಗೆ ಹೊಕ್ಕಿ ಅಲ್ಲಿ ಆಗುತ್ತಿರುವ ತಲ್ಲಣಗಳ ಬಗ್ಗೆ, ಕನಸು, ನಿರಾಶೆಗಳ ಬಗ್ಗೆಯೂ ಬರೆಯಬಹುದು. ಆದರೆ ಸಿನೆಮಾಗೆ ಆ ಸ್ವಾತಂತ್ರವಿಲ್ಲ. ಇದು ಸಿನೆಮಾದ ಒಂದು ಮಿತಿ. ಈ ಮಿತಿಗಳನ್ನು ಮೀರುತ್ತ, ಆ ತಲ್ಲಣಗಳನ್ನು ದೃಶ್ಯರೂಪಕ್ಕೆ ತರುವಲ್ಲಿ ಅನೇಕ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಆದರೂ ಅಲ್ಲೊಂದು ಸಂಘರ್ಷ ಅತಿಗಿರುತ್ತದೆ.

ಇನ್ನು ಸಂಘರ್ಷಗಳ ಸ್ವರೂಪಗಳನ್ನು ನೋಡುವ. ಮೊದಲನೇಯದು, ನಮಗೆ ಹೆಚ್ಚಾಗಿ ಕಾಣಿಸುವ ಸಂಘರ್ಷವಾದ ಬಾಹ್ಯ ಕಾರಣಗಳಿಂದ ಉಂಟಾಗುವ ಸಂಘರ್ಷ. ಅಂದರೆ, ನಮ್ಮ ನಾಯಕ/ಕಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿರುವಾಗ ಆ ಗುರಿಗೆ ಅಡ್ಡಬರುವ ಅಡೆತಡೆಗಳು ಮೂಲತಃವಾಗಿ ಆ ನಾಯಕಿಯ ಪಾತ್ರದ ಹೊರಗಿರುತ್ತವೆ. ಉದಾಹರಣೆಗೆ, ಆ ಹುಡುಗ ತನಗಿಷ್ಟವಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುವ ಗುರಿಯನ್ನಿಟ್ಟುಕೊಂಡಿರುವಾಗ ಅದಕ್ಕೆ ಹುಡುಗಿಯ ಅಪ್ಪ ವಿರೋಧ ಒಡ್ಡುತ್ತಾನೆ; ಒಂದು ಹಳ್ಳಿಯಲ್ಲಿ ನಾಯಕಿ ಬಡ ಮಕ್ಕಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸುವ ಗುರಿಯನ್ನಿಟ್ಟುಕೊಂಡಿದ್ದಾಳೆ ಆದರೆ ಅಲ್ಲಿ ಖಾಸಗಿ ಶಾಲೆಯನ್ನು ನಡೆಸುವ ಪಟ್ಟಭದ್ರ ಹಿತಾಸಕ್ತಿಗಳು ಇವಳು ಶಾಲೆ ಪ್ರಾರಂಭಿಸಲು ಬಿಡುವುದಿಲ್ಲ.

ಈಗ ಈ ಪ್ರಮುಖ ಪಾತ್ರಧಾರಿಗಳು ತಮ್ಮ ಎದುರಿನ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಸಂಘರ್ಷ. ಇಲ್ಲಿ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಮುಖ್ಯ ಅಥವಾ ಬಡಮಕ್ಕಳಿಗಾಗಿ ಶಾಲೆಗಳನ್ನು ಪ್ರಾರಂಭಿಸುವುದು ಎಷ್ಟು ಒಳ್ಳೆಯ ಕೆಲಸ ಎನ್ನುವುದರ ಬಗ್ಗೆ ಲೆಕ್ಷರ್ ಕೊಡಲು ಅವಕಾಶವಿರುವುದಿಲ್ಲ. ಆಯಾ ಸಂಘರ್ಷಗಳ ವ್ಯಾಪ್ತಿಯಲ್ಲೇ ಈ ಸಂಗತಿಗಳು ಹೊರಬರಬೇಕು.

1998 ರಲ್ಲಿ ತೆರೆಕಂಡ ಸತ್ಯಾ ಚಿತ್ರದಲ್ಲಿ ಒಂದು ಪಾತ್ರ ಜೋಕ್ ಹೇಳುವ ಸನ್ನಿವೇಶವಿದೆ. ಒಂದು ಕನ್‍ಸ್ಟ್ರಕ್ಷನ್ ಆಗುತ್ತಿರುವ ಕಟ್ಟಡದಲ್ಲಿ ಕುಳಿತಾಗ ಸ್ನೇಹಲ್ ದಾಬಿಯ ಪಾತ್ರ ಒಂದು ತರಲೆ ಜೋಕ್ ಹೇಳಲಾರಂಭಿಸುತ್ತಾನೆ. ಆ ಜೋಕ್‍ಗೆ ಪ್ರೇಕ್ಷಕರು ನಗಬೇಕು ಎನ್ನುವಷ್ಟರಲ್ಲಿ ಗುಂಡಿನ ಸುರಿಮಳೆಯಾಗಿ ಅಲ್ಲಿಯ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಆ ಸೀನ್ ಜೋಕ್ ಹೇಳಲಂತೂ ಇದ್ದೇ ಇಲ್ಲ, ಜೋಕ್ ಮುಂದುವರೆಯುತ್ತಿದ್ದಾಗಲೂ ಏನೋ ಆಗುವುದು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಲಿರುತ್ತದೆ. ಗಟ್ಟಿಯಾದ ಸ್ಟ್ರಕ್ಷರ್ ಮತ್ತು ಸಂಘರ್ಷವನ್ನಿಟ್ಟುಕೊಂಡೇ ಲಘು ಸನ್ನಿವೇಶಗಳನ್ನೂ ತೋರಿಸುವುದಕ್ಕೆ ಸತ್ಯಾ ಸಿನೆಮಾ ಒಳ್ಳೆಯ ಉದಾಹರಣೆ.

ಎರಡನೇಯದ್ದು ಆಂತರಿಕ ಸಂಘರ್ಷ. ಒಬ್ಬ ವ್ಯಕ್ತಿಗೆ ಬಾಕ್ಸಿಂಗ್ ಚಾಂಪಿಯನ್‍ಷಿಪ್ ಗೆಲ್ಲಬೇಕಿದೆ, ಒಬ್ಬನಿಗೆ ತಾನು ದುರ್ಬಲ ಎನ್ನುವ ಕೀಳರಿಮೆಯಿದೆ, ಇನ್ನೊಬ್ಬನಿಗೆ ತನ್ನನ್ನು ಯಾರೂ ಇಷ್ಟಪಡಲಾರರು ಎನ್ನುವ ಭಾವನೆಯಿದೆ, ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಒಬ್ಬ ಬಾಲಕಿಯು ಯಾವುದೇ ಸಂಬಂಧವನ್ನು ನಿಭಾಯಿಸಲು ಅಸಮರ್ಥಳಾಗಿದ್ದಾಳೆ. ಈಗ ಇವುಗಳನ್ನು ಎದುರಿಸಬೇಕಿದೆ. ಇಲ್ಲಿಯ ಆಯಾ ನಾಯಕ/ಕಿಗೆ ಇರುವ ಅಡೆತಡೆಗಳು ತನ್ನೊಳಗೇ ಹುದುಗಿವೆ. ತನ್ನೊಳಗೇ ಹುದುಗಿರುವ ಶತ್ರುವನ್ನು ಎದುರಿಸುವುದನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದು ಕಷ್ಟ ಎನಿಸಬಹುದು. ಆದರೆ ಅನಿಸಿದಷ್ಟು ಕಷ್ಟವಲ್ಲ. ಅಲ್ಲಿಯೂ ಬಾಹ್ಯ ಸಂಗತಿಗಳಿವೆ.

ನಾಯಕ/ಕಿಯ ದೈನಂದಿನ ದೈಹಿಕ ಕ್ರಿಯೆಗಳಿಂದಲೇ ಆ ಸಂಘರ್ಷ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ. ತನ್ನ ಸಮಸ್ಯೆ ಮತ್ತು ಅದಕ್ಕಿರುವ ಉತ್ತರಗಳೂ ದೈನಂದಿನ ಕ್ರಿಯೆಗಳಿಂದ ಸ್ಪಷ್ಟವಾಗುವ ಹಾಗೆ ಚಿತ್ರಕಥೆಯನ್ನು ಹೆಣೆಯಬೇಕಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಎರಡೂ ಬಗೆಯ ಸಂಘರ್ಷಗಳು ಎಲ್ಲಾ ಹಂತಗಳಲ್ಲಿ ಪ್ರತ್ಯೇಕವಾಗಿರಬೇಕಿಲ್ಲ. ಬಾಹ್ಯ ಸಂಘರ್ಷದಲ್ಲಿ ಆಂತರಿಕ ಸಂಘರ್ಷವಿದ್ದರೆ, ಆಂತರಿಕ ಸಂಘರ್ಷದ ಕಥೆಗಳಲ್ಲಿ ಬಾಹ್ಯ ಸಂಗತಿಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಚಿತ್ರಕಥೆ ಬರೆಯುವ ರೂಢಿಸಮ್ಮತ ಕಲಿಕೆಯಲ್ಲಿ ನಾಯಕಿ/ಕ ತನ್ನ ಗುರಿಯನ್ನು ತಲುಪಲು ಹರಸಾಹಸ ಪಡುತ್ತಾಳೆ/ನೆ; ಅವಳಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ; ಚಿತ್ರದಲ್ಲಿ ಆಗುವ ಹೆಚ್ಚಿನ ಘಟನೆಗಳನ್ನು ನಾಯಕಿಯೇ ಮೊದಲು ಮಾಡುತ್ತಾಳೆ ಅದರಿಂದ ಪ್ರೇಕ್ಷಕ ತನ್ನನ್ನು ಆ ನಾಯಕಿಯಲ್ಲಿ ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆ. ಆದರೆ ಇವ್ಯಾವೂ ಅನಿವಾರ್ಯವಲ್ಲ. ಅನೇಕ ಕಥೆಗಳಲ್ಲಿ ನಾಯಕಿಗೆ ತನ್ನ ಗುರಿಯ ಅರಿವು ಇರುವುದಿಲ್ಲ. ಪರಿಸ್ಥಿತಿಯ ಕೂಸು ಆ ನಾಯಕಿ. ಅದರರ್ಥ ಅಲ್ಲಿ ಸಂಘರ್ಷ ತಪ್ಪಿಲ್ಲ.

ತನಗರಿವಿಲ್ಲದೇ ಆ ನಾಯಕಿ ಹೋರಾಟದ ಪಯಣವನ್ನು ಕ್ರಮಿಸುತ್ತಾಳೆ. ಕೆಲವು ಚಿತ್ರಗಳಲ್ಲಿ ನಾಯಕಿಯ ಹೋರಾಟ, ಸಂಘರ್ಷ ಸ್ಪಷ್ಟವಾಗಿ ಕಂಡುಬರುವುದಿಲ್ಲ. ಮತ್ತು ಆ ಸಂಘರ್ಷ ಅವಳದ್ದೇ ಆಗಿರಬೇಕೆನ್ನುವ ನಿಯಮವೂ ಇಲ್ಲ. ಅಲೆಕ್ಸಾಂಡರ್ ಪೇನ್‍ನ ಮೊದಲ ಚಿತ್ರ ಸಿಟಿಝನ್ ರೂತ್‍ನಲ್ಲಿ ನಾಯಕಿ ರೂತ್ ಗರ್ಭಿಣಿ. ರಸ್ತೆಯಲ್ಲಿ ಬದುಕುತ್ತಿರುವ ಅವಳಿಗೆ ಮಗುವನ್ನು ಉಳಿಸಿಕೊಳ್ಳಬೇಕೇ, ಗರ್ಭಪಾತ ಮಾಡಿಸಿಕೊಳ್ಳಬೇಕೇ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ತನ್ನ ಹೊರಗಿನ ಪರಿಸ್ಥಿತಿ ಬದಲಾದಂತೆ ತನಗೆ ಸೂಕ್ತವೆನಿಸಿದ ಹಾಗೆ ಅವಳು ಪ್ರತಿಕ್ರಿಯಿಸುತ್ತಾಳೆ. ಅಬೌಟ್ ಶ್ಮಿತ್ ಚಿತ್ರದಲ್ಲಿ ನಾಯಕ ಶ್ಮಿತ್ ಈಗ ತಾನೆ ನಿವೃತ್ತಿ ಹೊಂದಿದ್ದಾನೆ. ಮುಂದೇನು ಮಾಡಬೇಕೆನ್ನುವುದು ತಿಳಿಯದು. ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಲೇ ಅವನು ತನ್ನ ಬಗ್ಗೆ ಕಂಡುಕೊಳ್ಳುತ್ತಾನೆ. ಆದರೆ ಅದರಲ್ಲೂ ಸಂಘರ್ಷವಿದೆ.

ಯಾವುದೇ ಸಂಘರ್ಷದಲ್ಲಿ ನಾಯಕಿ ಸರಿ ಎನಿಸುವ ದಾರಿಯಲ್ಲಿದ್ದು, ಆ ನಾಯಕಿಯ ವಿರುದ್ಧದ ಶಕ್ತಿಗಳು ತಪ್ಪಾದ ದಾರಿಯಲ್ಲೇ ಇರಬೇಕು ಎನ್ನುವ ಅನಿವಾರ್ಯವೂ ಇಲ್ಲ. ನಾಯಕಿಯೊಂದಿಗೆ ಅವಳ ಶತ್ರುಗಳೂ ಪರಿಸ್ಥಿತಿಯ ಕೂಸುಗಳೇ. ಆ ಶಕ್ತಿಗಳಿಗೂ ತಮ್ಮದೇ ಆದ ಕಾರಣಗಳಿರುತ್ತವೆ. ಅದೇ ಕಾರಣಕ್ಕೆ ಅನೇಕ ಸಲ ಖಳನಾಯಕರ ಪಾತ್ರಗಳೂ ನಮಗೆ ಇಷ್ಟವಾಗುತ್ತವೆ.
ನಾಯಕಿಯ ಈ ಸಂಘರ್ಷದಲ್ಲಿ ಯಾರು ಗೆಲ್ಲಬೇಕು ಎನ್ನುವುದು ಅಷ್ಟು ಮುಖ್ಯವಲ್ಲ. ನಾಯಕಿ ತನ್ನ ಗುರಿ ಮುಟ್ಟುವಲ್ಲಿ ವಿಫಲವಾದರೂ ಸಂಘರ್ಷ ನಿರಂತರವಾಗಿರುವುದರಿಂದ ಚಿತ್ರ ಗೆಲ್ಲುತ್ತದೆ. ಆ ಚಿತ್ರದ ಆಶಯ ಮುಟ್ಟುತ್ತದೆ. ಆದರೆ ಆ ಸೋಲು ಗೆಲುವಿನ ದಡಕ್ಕೆ ಮುಟ್ಟಿಸುವುದು ಚಿತ್ರದ ಕರ್ತವ್ಯ. ಸಿನೆಮಾದ ಅಂತ್ಯದಲ್ಲಿ ಆ ಸಂಘರ್ಷ ಮುಕ್ತಾಯವಾಗುತ್ತದೆ ಅಥವಾ ಇನ್ನೊಂದು ಸ್ವರೂಪವನ್ನು ಪಡೆದುಕೊಳ್ಳುತ್ತದೆ. ನ್ಯೂಟನ್‍ನ ನಿಯಮದಂತೆ ಪ್ರತೀ ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದಾಗ ಸಂಘರ್ಷ ಎನ್ನುವುದು ನಿರಂತರವಲ್ಲದೇ?

ಇದನ್ನು ಓದಿ: ಸಿನಿಮಾ ಮತ್ತು ಸಂದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...