Homeಅಂತರಾಷ್ಟ್ರೀಯಪ್ಯಾಲಿಸ್ಟೀನಿಯಲ್ಲಿ ನಡೆಯುತ್ತಿರುವುದೇನು? ನಿಮಗಿದು ತಿಳಿದಿರಬೇಕಾದ ವಿಷಯ

ಪ್ಯಾಲಿಸ್ಟೀನಿಯಲ್ಲಿ ನಡೆಯುತ್ತಿರುವುದೇನು? ನಿಮಗಿದು ತಿಳಿದಿರಬೇಕಾದ ವಿಷಯ

ನೂರಾರು ಕಲಾವಿದರು, ಸಂಗೀತಕಾರರು ಮತ್ತು ಚಲನಚಿತ್ರ ನಿರ್ದೇಶಕರು ಇಸ್ರೇಲಿನಲ್ಲಿ ತಮ್ಮ ಕೃತಿಯನ್ನು ಪ್ರದರ್ಶಿಸಲು ನಿರಾಕರಿಸಿದ್ದಾರೆ. ಅದರಲ್ಲೂ ರೋಜರ್ ವಾಟರ್ಸ್, ಮೀರಾ ನಾಯರ್, ಕೆನ್ ಲೋಚ್ ಮತ್ತಿತರರು ಸಾಂಸ್ಕೃತಿಕ ಬಹಿಷ್ಕಾರದ ಕರೆಯ ಮುಂಚೂಣಿಯಲ್ಲಿದ್ದಾರೆ

- Advertisement -
- Advertisement -

| ಅಪೂರ್ವ |

ಮೇ15 ರಂದು `ನಕ್ಬಾ’ಗೆ (ಅರೇಬಿಕ್‍ನಲ್ಲಿ ವಿನಾಶ) 71 ವರ್ಷಗಳಾದವು. ಏಳು ದಶಕಗಳ ಹಿಂದೆ, ಝೂನಿಸ್ಟ್ ಸೈನ್ಯವು 500 ಪ್ಯಾಲೆಸ್ಟೇನಿಯನ್ ಹಳ್ಳಿಗಳನ್ನು, 11 ನಗರಗಳನ್ನು ನಾಶಮಾಡಿತು, ಹಾಗೂ 3,00,000 ಮುಸ್ಲಿಮರನ್ನು ಬಲವಂತದಿಂದ ಹೊರದಬ್ಬಿ ಇಸ್ರೇಲ್ ರಾಷ್ಟ್ರವನ್ನು ಸ್ಥಾಪಿಸಲಾಯಿತು. ಅದಾದ ಒಂದೇ ವರ್ಷದಲ್ಲಿ ಜನಾಂಗೀಯ ಶುದ್ಧೀಕರಣ ಮಾಡಿ ಪ್ಯಾಲೆಸ್ಟೇನ್ ಭೂಮಿಯ 78% ಭಾಗವನ್ನು ಆಕ್ರಮಿಸಲಾಯಿತು. ಹಾಗೂ 8,00,000 ಜನರನ್ನು ಹೊರದಬ್ಬಲಾಯಿತು. ಇಂದು 70 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೀನಿನ ನಿರಾಶ್ರಿತರು ವಿಶ್ವಾದ್ಯಂತ ಇದ್ದಾರೆ. ಅವರಿಗೆ ತಮ್ಮ ಮಣ್ಣಿಗೆ ಮರಳುವ ಮೂಲಭೂತ ಹಕ್ಕನ್ನು ನಿರಾಕರಿಸಲಾಗಿದೆ. ಅವರಲ್ಲಿ ಹೆಚ್ಚಿನವರಿಗೆ ತಮ್ಮ ತಾಯ್ನಾಡನ್ನು ನೋಡಲು ತಾತ್ಕಾಲಿಕವಾಗಿಯೂ ಅವಕಾಶವಿಲ್ಲ. ಪ್ಯಾಲಿಸ್ಟೀನ್ ಜನರಿಗೆ ನಕ್ಬಾ 1948ರಲ್ಲಿ ಮುಗಿಯಲಿಲ್ಲ; ಇನ್ನೂ ಮುಂದುವರೆಯುತ್ತಲೇ ಇದೆ.

ಇಸ್ರೇಲಿನ ವರ್ಣಭೇದ ನೀತಿ, ಸೆಟ್ಲರ್ ವಸಾಹತುಶಾಹಿ ಮತ್ತು ಸ್ವಾಧೀನ

ಈ ಮೇಲಿನ ಚಿತ್ರ ಇಸ್ರೇಲಿನ ಮಿಲಿಟರಿ ಆಕ್ರಮಣವು ಪ್ಯಾಲೆಸ್ಟೀನ್ ಪ್ರದೇಶಕ್ಕೆ ಮಾಡಿದ ಬದಲಾವಣೆಗಳನ್ನು ತಿಳಿಸುತ್ತದೆ. ಇಂದು ಪ್ಯಾಲೆಸ್ಟೇನಿನ ಜನರು ವರ್ಣಭೇದ ನೀತಿಯುಳ್ಳ ಆಳ್ವಿಕೆಯಲ್ಲಿ ಜೀವಿಸುತ್ತಿದ್ದಾರೆ; ಕಳೆದ ವರ್ಷ ಅಲ್ಲಿ ಯಹೂದಿ ರಾಷ್ಟ್ರ ಆಡಳಿತ ನೀತಿಯನ್ನು ಜಾರಿಗೊಳಿಸಲಾಯಿತು. ಅದರಿಂದ ಇಸ್ರೇಲಿನ ವರ್ಣಭೇದ ನೀತಿಗೆ ಸಂವಿಧಾನಾತ್ಮಕ ಸ್ಟೇಟಸ್ ಬಂದಂತಾಯಿತು. ಇದಕ್ಕಿಂತ ಮುನ್ನವೂ ಪ್ಯಾಲೆಸ್ಟೀನಿನ ಜನರ ವಿರುದ್ಧ 60ಕ್ಕೂ ಹೆಚ್ಚು ತಾರತಮ್ಯದಿಂದ ತುಂಬಿದ ನೀತಿಗಳಿದ್ದವು, ಈಗ ಅವುಗಳಿಗೂ ಸಂವಿಧಾನಾತ್ಮಕ ಸ್ಟೇಟಸ್ ಸಿಕ್ಕಿದೆ. ಇವುಗಳು ವಿವಾಹಕ್ಕೆ, ವಸತಿ, ಆರೋಗ್ಯ ಸೇವೆ, ಶಿಕ್ಷಣ ಮತ್ತು ಜೀವನದ ಇತರ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟಂತೆ ತಾರತಮ್ಯದ ನೀತಿಗಳು ಜಾರಿಯಲ್ಲಿದ್ದವು. ಪೂರ್ವ ಜೆರುಸಲೆಮ್‍ನಲ್ಲಿ ಈ ವರ್ಣಭೇದ ನೀತಿ ಇನ್ನೂ ಕರಾಳವಾಗಿದೆ.

ಇತರ ಪಶ್ಚಿಮ ಪ್ರದೇಶಗಳೊಂದಿಗೆ ಪೂರ್ವ ಜೆರುಸಲೆಮ್ 1967ರಲ್ಲಿ ಆಕ್ರಮಣಕ್ಕೊಳಗಾಯಿತು. ಜೆರುಸಲೇಮ್ ಒಂದು ವಿಶಿಷ್ಟ ಅಂತರ್‍ರಾಷ್ಟ್ರೀಯ ಸ್ಟೇಟಸ್ ಹೊಂದಿದೆ, ಅದರನುಗುಣವಾಗಿ ಯಾವ ದೇಶವೂ ಆ ಪ್ರದೇಶವನ್ನು ಆಳ್ವಿಕೆಗೆ ಒಳಪಡಿಸಲಾಗುವುದಿಲ್ಲ. ಆದಾಗ್ಯೂ ಡಿಸೆಂಬರ್ 2017ರಲ್ಲಿ ವಿಶ್ವಸಂಸ್ಥೆಯು ತನ್ನ ರಾಯಭಾರಿ ಕಛೇರಿಯನ್ನು ಜೆರುಸಲೇಮ್‍ಗೆ ಸ್ಥಳಾಂತರಿಸಿತು, ಅಂತರರಾಷ್ಟ್ರೀಯ ನೀತಿಯನ್ನು ಸ್ಪಷ್ಟವಾಗಿ ಉಪೇಕ್ಷಿಸಿ ಹಾಗೂ ಪ್ರಚೋದನೆ ಮಾಡಲೆಂದೆ ಈ ಕ್ರಮವನ್ನು ಕೈಗೊಂಡಂತಿದೆ. ಪೂರ್ವ ಜೆರುಸಲೆಮ್‍ನ ಪ್ಯಾಲೆಸ್ಟೀನಿಯನ್ನರು ಅತ್ಯಂತ ಕರಾಳ ವರ್ಣಭೇದ ನೀತಿಯ ಅಳ್ವಿಕೆಯಲ್ಲಿ ಜೀವಿಸುತ್ತಿದ್ದಾರೆ ಹಾಗೂ ಅವರಿಗೆ `ರೆಸಿಡೆಂಟ್ಸ್’ `ನಿವಾಸಿ’ಯ ದರ್ಜೆ ಮಾತ್ರ ಹೊಂದಿದ್ದಾರೆ. ಅವರನ್ನು ಇಸ್ರೇಲಿ ಯಹೂದಿ ಪಡೆಗಳು ವ್ಯವಸ್ಥಿತವಾಗಿ ಒಕ್ಕಲೆಬ್ಬಿಸುತ್ತಾರೆ. ಇದನ್ನು ಜೆರುಸಲೆಮ್‍ನ ಯಹೂದೀಕರಣದ ಯೋಜನೆಯಡಿ ಮಾಡಲಾಗುತ್ತಿದೆ.

ಆಕ್ರಮಿತ ಪಶ್ಚಿಮದ (ವೆಸ್ಟ್ ಬ್ಯಾಂಕ್) ಪ್ರದೇಶದಲ್ಲಿ ಪ್ಯಾಲೆಸ್ಟೇನಿಯನ್ನರು ಅಕ್ರಮ ವಲಸಿಗರಿಂದ ಮತ್ತು ಇಸ್ರೇಲಿ ಪಡೆಗಳಿಂದ ಪ್ರತಿನಿತ್ಯ ಗನ್ನುಗಳೊಂದಿಗೆ ಚೆಕ್‍ಪಾಯಿಂಟ್‍ಗಳನ್ನು, ಮನೆಗಳನ್ನು ಧ್ವಂಸಗೊಳಿಸುವುದನ್ನು ಮತ್ತು ಹಿಂಸೆಯನ್ನು ಎದುರಿಸಬೇಕಾಗುತ್ತದೆ. ವೆಸ್ಟ್ ಬ್ಯಾಂಕ್‍ನಲ್ಲಿಯ 60% ಕ್ಕೂ ಹೆಚ್ಚಿನ ಪ್ರದೇಶವು ಇಸ್ರೇಲಿ ಸೈನ್ಯದ ನೇರ ಆಳ್ವಿಕೆಯ ಅಡಿಯಲ್ಲಿದೆ. ಇದರಲ್ಲಿ ಹೆಚ್ಚಿನ ಪ್ರದೇಶವು ಕೃಷಿ ಭೂಮಿಯಾಗಿದ್ದು, ಪ್ಯಾಲೆಸ್ಟೇನಿಯನ್ನರಿಗೆ ಹಿಂಸೆಯ ಭಯವಿಲ್ಲದೇ (ಹಿಂಸೆಯಿಲ್ಲದೇ) ಅಲ್ಲಿ ಹೋಗಲು ಅವಕಾಶವಿಲ್ಲ. ಅಕ್ರಮ ಇಸ್ರೇಲೀ ಸೆಟಲ್‍ಮೆಂಟ್‍ಗಳು ಹೆಚ್ಚಳವಾಗುತ್ತ ಇಸ್ರೇಲಿನ `ಫ್ಯಾಕ್ಟ್ಸ್ ಆನ್ ದಿ ಗ್ರೌಂಡ್’ ಎನ್ನುವ ತಂತ್ರದ ಭಾಗವಾಗಿ `ಯಹೂದಿಗಳಿಗೆ ಮಾತ್ರ’ ರಸ್ತೆಗಳು ಹೆಚ್ಚುತ್ತಿವೆ ಹಾಗೂ ಪ್ಯಾಲೆಸ್ಟೀನಿಯನ್ನರಿಗೆ ಮೂಲ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ.

2004ರ ಅಡ್ವೈಸರಿ ಒಪಿನಿಯನ್ ಅನುಗುಣವಾಗಿ ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಅಂತರರಾಷ್ಟ್ರೀಯ ನ್ಯಾಯದ ನ್ಯಾಯಾಲಯವು ಹೇಳಿದ್ದರೂ ಅಪಾರ್ಥೀಡ್ ಗೋಡೆಯು ವೆಸ್ಟ್ ಬ್ಯಾಂಕ್‍ನುದ್ದಕ್ಕೂ ಹಾದುಹೋಗುತ್ತದೆ. ಇದು ಅಲ್ಲಿಯ ಪ್ರದೇಶವನ್ನು ವಿಘಟಿಸಿ, ಬಂತುಸ್ತಾನ್‍ಗಳನ್ನು ಸೃಷ್ಟಿಸಿದೆ.

ಗಾಝಾ ಸ್ಟ್ರಿಪ್ ಎನ್ನುವ ಪ್ರದೇಶವು ಒಂದು ದಶಕಕ್ಕಿಂತಲೂ ಹೆಚ್ಚಿನ ಸಮಯದಿಂದ ಆಕ್ರಮಕ್ಕೊಳಗಾಗಿದೆ. 2020ರ ವರಗೆ ಈ ಪ್ರದೇಶ ವಾಸಯೋಗ್ಯವಾಗಿರುವುದಿಲ್ಲ ಎನ್ನಲಾಗಿದೆ. ಇಲ್ಲಿಯ ದಿಗ್ಬಂಧನದಿಂದ ಇದು ಈಗಾಗಲೇ ವಿಶ್ವದ ಅತಿದೊಡ್ಡ ಬಯಲು ಬಂಧೀಖಾನೆಯಾಗಿ ಮಾರ್ಪಟ್ಟಿದೆ. ಇಲ್ಲಿಯ 20 ಲಕ್ಷ ಜನರು, ಬದುಕುಳಿಯಲೇ ನಿರಂತರ ಹೋರಾಟ ಮಾಡುತ್ತಿದ್ದಾರೆ. ಒಂದು ದಶಕದಲ್ಲಿ ಎರಡು ಹತ್ಯಾಕಾಂಡಗಳನ್ನು ಈ ಪ್ರದೇಶ ಕಂಡಿದೆ. ಹಾಗೂ ಗ್ರೇಟ್ ರಿಟರ್ನ್ ಮಾರ್ಚ್‍ನಲ್ಲಿ ಇತ್ತೀಚಿಗೆ ಹಲವಾರು ಪ್ರತಿಭಟನಾಕಾರರ ಕೊಲೆ ಮಾಡಿ, ಅನೇಕರನ್ನು ಗಾಯಗೊಳಿಸಲಾಯಿತು. ತಮ್ಮ ಮನೆಗಳಿಗೆ ಮರಳುವ ವಿಶ್ವಸಂಸ್ಥೆಯೇ ಅನುಮೋದಿಸಿದ ಹಕ್ಕನ್ನು ಪ್ರತಿಪಾದಿಸಿ ಪ್ಯಾಲೆಸ್ಟಿನಿಯನ್ನರು ಗ್ರೇಟ್ ರಿಟರ್ನ್ ಮಾರ್ಚ್‍ನಲ್ಲಿ ಭಾಗವಹಿಸುತ್ತಿದ್ದರು. ಇಸ್ರೇಲಿನ ವಲಸಿಗರ-ವಸಾಹತುಶಾಹಿ, ಸ್ವಾಧೀನದ ಮತ್ತು ವರ್ಣಭೇದ ಆಳ್ವಿಕೆಯು ತನ್ನ ಪ್ರತಿಯೊಂದು ಹೆಜ್ಜೆಗೆ ಪ್ಯಾಲೆಸ್ಟೇನಿನ ಸ್ವಾತಂತ್ರ ಸಂಗ್ರಾಮದೊಂದಿಗೆ ಮುಖಾಮುಖಿಯಾಗುವುದಕ್ಕೆ ಇದೊಂದು ಉದಾಹರಣೆ. ಪ್ಯಾಲೆಸ್ಟೇನಿಯನ್ನರ ಪ್ರತಿರೋಧವು ಇಸ್ರೇಲ್‍ನ ಅಸ್ತಿತ್ವಕ್ಕಿಂತ ಮುಂಚಿತವಾದುದ್ದು.

ಪ್ಯಾಲೆಸ್ಟೇನಿಯನ್ನರ ಜನಪ್ರಿಯ ಪ್ರತಿರೋಧ
ಪ್ಯಾಲೆಸ್ಟೇನ್‍ನಲ್ಲಿ ಪ್ರತಿರೋಧವು ಜೀವನದ ಒಂದು ಅಂಗವಾಗಿದೆ. ಮೊದಲ ಮಹಾಯುದ್ಧದ ನಂತರ ಪ್ಯಾಲೆಸ್ಟೇನ್ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಸ್ವಾತಂತ್ರದ ಬೇಡಿಕೆಯೊಂದಿಗೆ ಮುಕ್ತ ಯಹೂದಿ ವಲಸೆ ಮತ್ತು ಭೂಖರೀದಿಯನ್ನು ಕೊನೆಗಾಣಿಸಲು 1936 ರಿಂದ 1939ರ ತನಕ ಪ್ಯಾಲೆಸ್ಟೇನಿಯನ್ನರು ದಿ ಗ್ರೇಟ್ ರಿವೋಲ್ಟ್ ಆಯೋಜಿಸಿದರು. ಇದು ಸಾರ್ವಜನಿಕರ ಮುಷ್ಕರ ಮತ್ತು ರೈತಾಪಿ ಜನರ ಬಂಡಾಯವನ್ನು ಒಳಗೊಂಡಿತ್ತು. ಇದರ ನಂತರ ಪ್ಯಾಲೆಸ್ಟೇನ್‍ನ ವಿಭಜನೆ ಮತ್ತು ಪ್ಯಾಲೆಸ್ಟೇನಿಯನ್ನರ ಒತ್ತಾಯಪೂರ್ವಕ ಸ್ಥಳಾಂತರ ಆಯಿತು.

1960ರ ದಶಕದಲ್ಲಿ ಪ್ಯಾಲೆಸ್ಟೇನ್ ಲಿಬರೇಷನ್ ಆರ್ಗನೈಜೇಷನ್ ಸಂಘಟನೆಯು ಅಲ್ಲಿಯ ರಾಜಕೀಯ ಸಂಘಟನೆಯ ನಾಯಕತ್ವ ವಹಿಸಿಕೊಂಡಿತು. 80ರ ದಶಕದ ಕೊನೆಯಲ್ಲಿ ಪ್ಯಾಲೆಸ್ಟೇನಿಯನ್ನರ ಪ್ರತಿರೋಧವು ಇಂತಿಫದಾದ(ಬಂಡಾಯ) ಸ್ವರೂಪ ಪಡೆದುಕೊಂಡಿತು. ಆಗ ಆರು ವರ್ಷಗಳ ಕಾಲ ಇಸ್ರೇಲಿನ ಆಕ್ರಮಣದ ವಿರುದ್ಧ ಸಾರ್ವಜನಿಕರ ಪ್ರತಿಭಟನೆಗಳು, ಮುಷ್ಕರಗಳು, ಅಸಹಕಾರ ಚಳವಳಿಗಳು ಅವ್ಯಾಹತವಾಗಿ ನಡೆದವು. ಕ್ಯಾಂಪ್ ಡೇವಿಡ್ ಒಪ್ಪಂದ ವಿಫಲವಾದ ನಂತರ ಹಾಗೂ ಪ್ಯಾಲೆಸ್ಟೇನಿಯನ್ನರ ರಾಷ್ಟ್ರದ ಸ್ಥಾನಮಾನ ನೀಡುವುದನ್ನು ಮುಂದೂಡಿದಾಗ 2000 ದಿಂದ 2005ರ ವರೆಗೆ ಪ್ಯಾಲೆಸ್ಟೇನಿಯನ್ನರು ಎರಡನೇ ಇನ್‍ತಿಫದಾ (ಬಂಡಾಯ) ಆಯೋಜಿಸಿದರು.

2004ರಲ್ಲಿ ಪ್ಯಾಲೆಸ್ಟೇನಿನ ಚಿಂತಕರು ಮತ್ತು ಕಲಾವಿದರು ಇಸ್ರೇಲ್‍ನ ಮೇಲೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬಹಿಷ್ಕಾರ ಮಾಡಲು ಕರೆ ನೀಡಿದರು. ಪ್ಯಾಲೆಸ್ಟೇನಿಯನ್ನರ ವಿರುದ್ಧದ ಅಪರಾಧಗಳನ್ನು ಮರೆಮಾಚಲು ಕಲೆಯನ್ನು ಬಳೆಸುಕೊಳ್ಳುವುದರ ವಿರುದ್ಧದ ಕರೆ ಇದಾಗಿತ್ತು. 2005ರಲ್ಲಿ ಪ್ಯಾಲೆಸ್ಟೇನಿನ ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ನಿರಾಶ್ರಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಎಲ್ಲವೂ ಸೇರಿ ಪ್ಯಾಲೆಸ್ಟೇನಿನ ಒಂದು ದೊಡ್ಡ ಒಕ್ಕೂಟ ರಚಿಸಿದರು. ಈ ಒಕ್ಕೂಟವು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚೌಕಟ್ಟಿನ ಒಳಗೆ ಬರುವಂಥ ಬೇಡಿಕೆಗಳನ್ನೇ ಇಟ್ಟುಕೊಂಡು ಇಸ್ರೇಲಿನ ವಿರುದ್ಧ ಬಿಡಿಎಸ್ ಹೋರಾಟ ಅಂದರೆ ಬಾಯ್ಕಾಟ್ (ಬಹಿಷ್ಕಾರ), ಡೈವೆಸ್ಟ್‍ಮೆಂಟ್(ವಿತರಣೆ) ಮತ್ತು ಸ್ಯಾಂಕ್ಷನ್ಸ್‍ಗಳ(ನಿರ್ಬಂಧ) ಚಳವಳಿ ಪ್ರಾರಂಭಿಸಿದರು. ಇಸ್ರೇಲಿನ ಆಕ್ರಮಣವನ್ನು, ವರ್ಣಭೇದ ನೀತಿಯನ್ನು ಕೊನೆಗಾಣಿಸುವುದು ಹಾಗೂ ನಿರಾಶ್ರಿತರು ತಾಯ್ನಾಡಿಗೆ ಮರಳುವ ಹಕ್ಕನ್ನು ಗೌರವಿಸಬೇಕು ಎನ್ನುವ ಬೇಡಿಕೆಗಳನ್ನಿಟ್ಟುಕೊಂಡು ಅನಿರ್ದಿಷ್ಟಾವಧಿ ಚಳವಳಿ ಇದಾಗಿತ್ತು. ದಕ್ಷಿಣ ಆಫ್ರಿಕಾದ ಹೋರಾಟ ಮತ್ತು ಗಾಂಧೀಜಿಯ ಅಸಹಕಾರ ಚಳವಳಿಯಿಂದ ಪ್ರಭಾವಿತಗೊಂಡ ಈ ಅಹಿಂಸಾತ್ಮಕ ಚಳವಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಬೆಂಬಲ ದಿನೇದಿನೇ ಹೆಚ್ಚುತ್ತಿದೆ.

ಈ ಚಳವಳಿ ಪ್ರಾರಂಭವಾದಾಗಿನಿಂದ, ಅನೇಕ ಗೆಲುವುಗಳನ್ನು ಕಂಡಿದೆ. ಪ್ಯಾಲೆಸ್ಟೇನಿಯನ್ನರನ್ನು ಸಂಘಟಿಸಿ, ಪ್ರಚಾರ ಮಾಡಿದ್ದು ಮತ್ತು ವಿಶ್ವದ ಇತರ ಗುಂಪುಗಳಿಂದ ಬಂದ ಬೆಂಬಲದಿಂದ ಇದು ಸಾಧ್ಯವಾಗಿದೆ. ಈ ಚಳವಳಿಯಿಂದಾಗಿ, ಸಾರ್ವಜನಿಕರ ಒತ್ತಡದಿಂದ ಕೋಟ್ಯಾಂತರ ರೂಪಾಯಿಗಳ ನಷ್ಟ ಅನುಭವಿಸಿ, ವೆಯೋಲಾ, ಆರೇಂಜ್ ಮತ್ತು ಇತರ ಕೆಲವು ಕಾರ್ಪೋರೇಟ್ ಕಂಪನಿಗಳು ಇಸ್ರೇಲಿನೊಂದಿಗೆ ತಮ್ಮ ಸಂಬಂಧಗಳನ್ನು ಕಳಚಿಕೊಂಡಿವೆ. ಇಸ್ರೇಲಿನ ಅಪರಾಧಗಳೊಂದಿಗೆ ತಮ್ಮ ಸಹಭಾಗಿತ್ವವನ್ನು ಅಂತ್ಯಗೊಳಿಸಲು ನಿರಾಕರಿಸಿದ ನಿಗಮಗಳೊಂದಿಗೆ ಸ್ಥಳೀಯ ಸಂಸ್ಥೆಗಳು ತಮ್ಮ ಕರಾರುಗಳನ್ನು ಕೊನೆಗಾಣಿಸಿದ್ದೂ ಕಂಡುಬಂದಿವೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಡಬ್ಲಿನ್ ನಗರಸಭೆಯು ಇಸ್ರೇಲಿನೊಂದಿಗೆ ತನ್ನ ಎಲ್ಲ ಸಂಬಂಧಗಳನ್ನು ಕಳಚಿಹಾಕಿದಲ್ಲದೇ, ಇಸ್ರೇಲಿನ ನೀತಿಗಳನ್ನು ಬೆಂಬಲಿಸುವ ಹೆವ್ಲೆಟ್ ಪ್ಯಾಕರ್ಡ್ ಮತ್ತು ಡಿಎಕ್ಸ್‍ಸಿ ಟೆಕ್ನಾಲಜಿ ಎನ್ನುವ ಕಂಪನಿಗಳೊಂದಿಗೂ ತನ್ನ ಸಂಬಂಧಗಳನ್ನು ಕೊನೆಗೊಳಿಸಿತು.

Nakba

ನೂರಾರು ಕಲಾವಿದರು, ಸಂಗೀತಕಾರರು ಮತ್ತು ಚಲನಚಿತ್ರ ನಿರ್ದೇಶಕರು ಇಸ್ರೇಲಿನಲ್ಲಿ ತಮ್ಮ ಕೃತಿಯನ್ನು ಪ್ರದರ್ಶಿಸಲು ನಿರಾಕರಿಸಿದ್ದಾರೆ. ಅದರಲ್ಲೂ ರೋಜರ್ ವಾಟರ್ಸ್, ಮೀರಾ ನಾಯರ್, ಕೆನ್ ಲೋಚ್ ಮತ್ತಿತರರು ಸಾಂಸ್ಕೃತಿಕ ಬಹಿಷ್ಕಾರದ ಕರೆಯ ಮುಂಚೂಣಿಯಲ್ಲಿದ್ದಾರೆ. ಜುಡಿತ್ ಬಟ್ಲರ್, ನೋಬೆಲ್ ಪ್ರಶಸ್ತಿ ವಿಜೇತ ಜಾರ್ಜ್ ಸ್ಮಿತ್‍ನಂತಹ ಚಿಂತಕರು ಪ್ಯಾಲೆಸ್ಟೇನ್‍ನ ನಿಲುವನ್ನು ಗೌರವಿಸಬೇಕೆಂದು ವಿಶ್ವದ ಶೈಕ್ಷಣಿಕ ಸಮುದಾಯಕ್ಕೆ ನೆನಪಿಸುತ್ತಲೇ ಇದ್ದಾರೆ. ಅಮೇರಿಕದಲ್ಲಿ ಈ ವಿಷಯಗಳ ಚರ್ಚೆ ಯುಎಸ್ ಕಾಂಗ್ರೆಸ್‍ತನಕ ಮುಟ್ಟಿದೆ. ಸ್ವಾತಂತ್ರ, ನ್ಯಾಯ ಮತ್ತು ಸಮಾನತೆಯ ಮಹತ್ವವನ್ನು ಅರಿತಿರುವ ವ್ಯಕ್ತಿಗಳ ಅಂತಃಕರಣಕ್ಕೆ ಕರೆ ನೀಡಿದ ಈ ಚಳವಳಿಯಿಂದ ಪ್ಯಾಲೆಸ್ಟೇನ್‍ದೊಂದಿಗೆ ಐಕ್ಯಮತ ಹೇಗೆ ತೋರಿಸಬಹುದು ಎನ್ನುವ ಚಿತ್ರಣವೇ ಬದಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. I’m not in complete agreement with this article! While Israel may be the common enemy of all Arabic countries, ask any Arab n he will spare no words in explaining how these palestinians r a major cunning n narrow minded forces n also a huge financial, social n economic burden in the entire Arab world… although externally they sympathise with them internally r fuming!

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...