ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೃಷಿ ತ್ಯಾಜ್ಯ ಸುಡುವ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಒಂದು ವರ್ಷದವರೆಗೆ ಆರ್ಥಿಕ ಸಹಾಯವನ್ನು ಸ್ಥಗಿತಗೊಳಿಸುವ ಮೂಲಕ ದಂಡ ವಿಧಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (ಪಿಎಂ-ಕಿಸಾನ್ ಎಂದು ಕರೆಯಲ್ಪಡುವ) ರೈತರು ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6,000 ರೂ.ಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಇದನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಮಧ್ಯಪ್ರದೇಶದ ಅರ್ಹ ರೈತರು ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 6,000 ರೂ.ಗಳು ಮತ್ತು ರಾಜ್ಯ ಸರ್ಕಾರದಿಂದ 6,000 ಸೇರಿ 12,000 ರೂ.ಗಳನ್ನು ಪಡೆಯುತ್ತಾರೆ.
ಕೃಷಿ ತ್ಯಾಜ್ಯ ಸುಡುವ ಚಟುವಟಿಕೆಯಲ್ಲಿ ತೊಡಗಿರುವ ರೈತರಿಂದ ಕೃಷಿ ಉತ್ಪನ್ನಗಳನ್ನು ಒಂದು ವರ್ಷದವರೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದಿಲ್ಲ ಎಂದು ರಾಜ್ಯ ಸಚಿವ ಸಂಪುಟ ಇದೇ ವೇಳೆ ಹೇಳಿದೆ. “ಮಾಲಿನ್ಯಕ್ಕೆ ಕಾರಣವಾಗುವ ಕೃಷಿ ತ್ಯಾಜ್ಯವನ್ನು ಸುಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗಿಯ ಹೇಳಿದ್ದನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ರೈತರ ಮೇಲೆ ದಂಡ ವಿಧಿಸಲು ರಾಜ್ಯ ಸರ್ಕಾರ ಬಯಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. “ಆದರೆ ನಮ್ಮ ರೈತ ಸಹೋದರರು ಸಣ್ಣ ಲಾಭಕ್ಕಾಗಿ ದೊಡ್ಡ ನಷ್ಟವನ್ನುಂಟು ಮಾಡಬಾರದು. ಪರಿಸರದ ಮೇಲೆ ದುಷ್ಪರಿಣಾಮ ಬೀರಿದರೆ ಅವರ ಸ್ವಂತ ಮಕ್ಕಳು ಸಹ ಅದರಿಂದ ಬಳಲುತ್ತಾರೆ” ಎಂದು ಅವರು ಹೇಳಿದ್ದಾರೆ.
ಅನೇಕ ರೈತರು ತಮ್ಮ ಹೊಲಗಳನ್ನು ಮತ್ತೊಂದು ಬೆಲೆಗೆ ಸಿದ್ದವಾಗಿಸಲು ಅನಗತ್ಯ ಕೃಷಿ ತ್ಯಾಜ್ಯವನ್ನು ಸಾಮೂಹಿಕವಾಗಿ ಸುಡುತ್ತಾರೆ. ಭಾರಿ ಪ್ರಮಾಣದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ ತಾಪಮಾನ ಕಡಿಮೆಯಾಗುವುದು ಮತ್ತು ಗಾಳಿಯ ವೇಗ ಕಡಿಮೆಯಾಗುವುದರ ಜೊತೆಗೆ, ಉತ್ತರ ಭಾರತದಲ್ಲಿ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿ ಯೂಟರ್ನ್ | ಮಾವೋವಾದಿ ಚಿಂತನೆಗೆ ಮನಸೋತು ನಗರ ನಕ್ಸಲ್ ಆದರೆ ಪ್ರಧಾನಿ ಮೋದಿ?
ಬಿಜೆಪಿ ಯೂಟರ್ನ್ | ಮಾವೋವಾದಿ ಚಿಂತನೆಗೆ ಮನಸೋತು ನಗರ ನಕ್ಸಲ್ ಆದರೆ ಪ್ರಧಾನಿ ಮೋದಿ?

