Homeಕರ್ನಾಟಕ‘ಪಠ್ಯಪುಸ್ತಕಗಳ ಬ್ರಾಹ್ಮಣೀಕರಣ’ ವಿರುದ್ಧ ‘ಮುಂದಿನ ನಡೆ ಬಗ್ಗೆ’ ಶನಿವಾರ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಭೆ

‘ಪಠ್ಯಪುಸ್ತಕಗಳ ಬ್ರಾಹ್ಮಣೀಕರಣ’ ವಿರುದ್ಧ ‘ಮುಂದಿನ ನಡೆ ಬಗ್ಗೆ’ ಶನಿವಾರ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಭೆ

ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಪಠ್ಯಪುಸ್ತಕಗಳ ಬ್ರಾಹ್ಮಣೀಕರದ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದು ಹಲವಾರು ಪೋಸ್ಟರ್‌ಗಳು ಹರಿದಾಡುತ್ತಿದೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ.

- Advertisement -
- Advertisement -

ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು, ನಾಡಿನ ಹಲವು ಚಿಂತಕರು ಮತ್ತು ಮಹಾತ್ಮರ ಪಾಠಗಳನ್ನು ಶಾಲಾ ಪಠ್ಯದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಸಮಾನ ಮನಸ್ಕರು ಬೆಂಗಳೂರಿನ ಗಾಂಧಿಭವನದಲ್ಲಿ ಶನಿವಾರದಂದು ಸಭೆಯೊಂದನ್ನು ಆಯೋಜಿಸಿದ್ದು, ‘ಪಠ್ಯಪುಸ್ತಕಗಳ ಬ್ರಾಹ್ಮಣೀಕರಣ’ ವಿಷಯದಲ್ಲಿ ‘ನಮ್ಮ ಮುಂದಿನ ನಡೆ ಏನಾಗಿರಬೇಕು?’ ಎಂಬ ವಿಚಾರದಲ್ಲಿ ಚರ್ಚೆ ನಡೆಸಲಿದ್ದಾರೆ.

ರಾಜ್ಯ ಸರ್ಕಾರ 2022-23ರ ಸಾಲಿನ ಶಾಲಾ ಪಠ್ಯಪುಸ್ತಕವನ್ನು ಆರೆಸ್ಸೆಸ್‌ ಮತ್ತು ಬಿಜೆಪಿ ಪರ ಒಲವಿರುವ ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಪರಿಷ್ಕರಿಸಿದೆ. ಈ ವೇಳೆ ಸಮಿತಿಯು ನಾಡಿನ ಖ್ಯಾತ ಸಾಹಿತಿಗಳಾದ ಪಿ.ಲಂಕೇಶ್‌, ಸಾರಾ ಅಬೂಬಕ್ಕರ್‌, ಡಾ.ಜಿ.ರಾಮಕೃಷ್ಣ ಅವರ ಬರಹಗಳು ಸೇರಿದಂತೆ, ಸಮಾಜ ಸುಧಾರಕ ನಾರಾಯಣ ಗುರು, ಕ್ರಾಂತಿಕಾರಿ ನಾಯಕ ಭಗತ್‌‌ಸಿಂಗ್‌, ಸಾಮಾಜಿಕ ನ್ಯಾಯದ ಹರಿಕಾರ ಪೆರಿಯಾರ್‌‌ ಸೇರಿದಂತೆ ಹಲವಾರು ಮಹಾತ್ಮರ ಪರಿಚಯಿಸುವ ಪಠ್ಯಗಳನ್ನು ಕೈಬಿಟ್ಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ರಾಜ್ಯದ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಸಮಾನ ಮನಸ್ಕರು ಬೆಂಗಳೂರಿನ ಗಾಂಧಿ ಭವನದಲ್ಲಿ ಸೇರಿ, ‘ಪಠ್ಯಪುಸ್ತಕಗಳ ಬ್ರಾಹ್ಮಣೀಕರಣ’ದ ವಿರುದ್ಧ, ‘‘ನಮ್ಮ ಮುಂದಿನ ನಡೆ ಏನಾಗಿರ ಬೇಕು” ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ‘ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು’: ನೂತನ ಪಠ್ಯದಲ್ಲಿ ಹೆಣ್ಣನ್ನು ಕೀಳಾಗಿ ಬಿಂಬಿಸಿರುವ ಬನ್ನಂಜೆ ಗೋವಿಂದಾಚಾರ್ಯ

ಸಭೆಯು ಮೇ 21ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ. ರಾಜ್ಯದ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸರ್ಕಾರವು ಕೈ ಬಿಟ್ಟಿರುವ ಪಾಠಗಳ ಜಾಗಕ್ಕೆ ಆರೆಸ್ಸೆಸ್‌ ನಾಯಕ ಹೆಡಗೆವಾರ್‌ ಅವರು ‘ಭಗವಾಧ್ವಜ ನಮ್ಮ ಆದರ್ಶವಾಗಬೇಕು’ ಎಂಬ ಭಾಷಣ ಹಾಗೂ ಬನ್ನಂಜೆ ಗೋವಿಂದಾಚಾರ್ಯ ಮತ್ತು ಆರ್‌.ಗಣೇಶ್‌ ಅವರ ವೈದಿಕ ಸಂಸ್ಕೃತಿಯ ವೈಭವೀಕರಣ, ಸ್ತ್ರೀದ್ವೇಷಿ ಬರಹಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗಿದೆ.

ಸರ್ಕಾರವು ಶಾಲಾ ಪಠ್ಯಗಳನ್ನು ರಾಜಕೀಯ ಪಕ್ಷಗಳ ಪುಸ್ತಕವನ್ನಾಗಿ ಮಾಡುತ್ತಿರುವುದರ ವಿರುದ್ದ ರಾಜ್ಯದಾದ್ಯಂತ ಈಗಾಗಲೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಲವಾರು ಶಿಕ್ಷಣ ತಜ್ಞರು, ಅಧ್ಯಾಪಕರು, ಪಠ್ಯಗಳನ್ನು ಪರಿಷ್ಕರಣೆ ಮಾಡಿರುವ ರೋಹಿತ್ ಚಕ್ರತೀರ್ಥ ಅವರ ಅರ್ಹತೆಗಳ ಬಗ್ಗೆ ಕೂಡಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಪಠ್ಯಪುಸ್ತಕಗಳ ಬ್ರಾಹ್ಮಣೀಕರದ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದು ಹಲವಾರು ಪೋಸ್ಟರ್‌ಗಳು ಹರಿದಾಡುತ್ತಿದೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮುಗ್ಧ ಮಕ್ಕಳ ಕಲಿಕೆಯ ಪಠ್ಯ ಪುಸ್ತಕಗಳ ಕೇಸರಿಕರಣ, ಕ್ಷುದ್ರ ಮತ್ತು ಕ್ಷುಲ್ಲಕ! ಅಂಧಭಕ್ತರ ಆರ್ಭಟ ಈ ಮಟ್ಟದ ದುರ್ಗತಿಗೆ ಇಳಿದಿದೆ! ನಾಡಿನ ಸಮಸ್ತರೂ ಇದರ ವಿರುದ್ಧ ಧ್ವನಿ ಎತ್ತಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...