ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗಕ್ಕೆ ನೇಮಕಗೊಂಡಿದ್ದ ಉಪ ಪ್ರಾಧ್ಯಾಪಕ ಫಿರೋಜ್ ಖಾನ್ ಅವರಿಗೆ ಬೆಂಬಲ ಸೂಚಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಫಿರೋಜ್ ಮುಸ್ಲಿಂ ಧರ್ಮದವರು ಎನ್ನುವ ಕಾರಣಕ್ಕೆ ಸಂಸ್ಕೃತ ವಿಭಾಗದ 30 ವಿದ್ಯಾರ್ಥಿಗಳು ಫಿರೋಜ್ ಖಾನ್ ಅವರಿಂದ ಪಾಠ ಕೇಳಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಧರ್ಮ ತಾರತಮ್ಯವನ್ನು ಖಂಡಿಸಿ, ಫಿರೋಜ್ ಖಾನ್ ಅವರನ್ನು ವಿದ್ಯಾರ್ಥಿಗಳು ಸ್ವೀಕರಿಸಬೇಕು. ಮತ್ತೆ ನೇಮಕ ಮಾಡಿಕೊಳ್ಳಬೇಕು ಎಂದು ನೂರಾರು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಜಂಟಿ ಕ್ರಿಯಾ ಸಮಿತಿ ಬ್ಯಾನರ್ ಅಡಿಯಲ್ಲಿ, ಎಬಿವಿಪಿ ವಿದ್ಯಾರ್ಥಿ ಸಂಘಟನೆಯನ್ನು ಹೊರತುಪಡಿಸಿ, ಉಳಿದ ವಿದ್ಯಾರ್ಥಿಗಳ ಗುಂಪು ಫಿರೋಜ್ ಖಾನ್ ಅವರಿಗೆ ಬೆಂಬಲ ಸೂಚಿಸಿತು. ಕೈಯಲ್ಲಿ ಫಿರೋಜ್ ಖಾನ್ ಪರ ಭಿತ್ತಿಪತ್ರ, ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ನವೆಂಬರ್ 5ರಂದು ಫಿರೋಜ್ ಖಾನ್, ಸಂಸ್ಕೃತ ವಿದ್ಯಾಧರ್ಮ ವಿಜ್ಞಾನ ವಿಭಾಗದ ಇಲಾಖೆಯ ಉಪ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಂಡಿದ್ದರು. ಆದರೆ ಸಂಸ್ಕೃತ ವಿಭಾಗ ವಿದ್ಯಾರ್ಥಿಗಳು ಫಿರೋಜ್, ಮುಸ್ಲಿಂ ಎಂಬ ಕಾರಣದಿಂದ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕ್ರಮವನ್ನು ಖಂಡಿಸಿ, ಇತರೆ ವಿದ್ಯಾರ್ಥಿಗಳು ಖಂಡಿಸಿದ್ದಾರೆ.
ಲಂಕಾ ಗೇಟ್‌ನಿಂದ ರವಿದಾಸ್ ಗೇಟ್‌ವರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ’ನಾವು ನಿಮ್ಮೊಂದಿಗೆ ಇದ್ದೇವೆ. ಭಾಷೆಗೆ ಧರ್ಮದ ನಂಟಿಲ್ಲ’. ಯಾರು ಬೇಕಾದರೂ ಯಾವ ಭಾಷೆಯನ್ನಾದರೂ ಕಲಿಯಬಹುದು ಮತ್ತು ಕಲಿಸಬಹುದು ಎಂದು ಘೋಷಣೆ ಕೂಗುತ್ತ, ಬ್ಯಾನರ್ ಹಿಡಿದು, ಫಿರೋಜ್ ಖಾನ್ ಅವರಿಗೆ ಬೆಂಬಲ ಸೂಚಿಸಿದರು.

ಧರ್ಮ ಮತ್ತು ಜಾತಿ ಆಧಾರಿಸಿ ವಿಶ್ವವಿದ್ಯಾಲಯಗಳಲ್ಲಿ ತಾರತಮ್ಯ ಮಾಡುವುದು ಅಸಾಂವಿಧಾನಿಕ ಕ್ರಮ. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸಂಸ್ಥಾಪಕ ಮದನ್ ಮೋಹನ್ ಮಾಳವಿಯಾ ಸಹ ಭಾರತ ಕೇವಲ ಹಿಂದೂಗಳದ್ದಲ್ಲ ಇಲ್ಲಿ ಮುಸ್ಲಿಂ, ಸಿಖ್ಖ್, ಕ್ರಿಶ್ಚಿಯನ್, ಜೈನ್ ಅವರನ್ನೂ ಒಳಗೊಂಡಿದ್ದು, ಎಲ್ಲರ ಭಾರತ ಎಂದಿದ್ದರು ಎಂದು ರಾಜ್ ಅಭಿಶೇಕ್ ಹೇಳಿದರು.
ಇದನ್ನೂ ಓದಿ: ಸಂಸ್ಕೃತ ಪ್ರಾಧ್ಯಾಪಕ ಫಿರೋಜ್ ಖಾನ್ ನೇಮಕಕ್ಕೆ ವಿರೋಧ: ವಿದ್ಯಾರ್ಥಿಗಳ ನಡೆಗೆ ಬಿಜೆಪಿಯ ಪರೇಶ್ ಖಂಡನೆ
ಖಾನ್ ಅವರು ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗಿಲ್ಲ. ನವೆಂಬರ್ 7ರಿಂದಲೇ ವಿಭಾಗದ ಗೇಟ್ ಬಂದ್ ಮಾಡಲಾಗಿದೆ. ವಿಭಾಗದ ಡೀನ್ ಮಾತನಾಡಿ, ಯಾರೂ ಪ್ರತಿಭಟನೆಯಲ್ಲಿ ಭಾಗಿಯಾಗಬೇಡಿ. ತರಗತಿಗಳನ್ನು ತೆಗೆದುಕೊಳ್ಳಿ, ಪರೀಕ್ಷೆ ಸಮಯ ಹತ್ತಿರವಾಗುತ್ತಿದೆ ಎಂದು ಮನವಿ ಮಾಡಿದ್ದಾರೆ. ಆದರೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಲಾವಿ ತಿಳಿಸಿದ್ದಾರೆ.


