Homeಮುಖಪುಟಸುಧಾಕರ್‌ v/s ಶ್ರೀರಾಮುಲು : ಕೊರೋನಾ ಎಮರ್ಜೆನ್ಸಿ ನಡುವೆ ಸ್ವಪ್ರತಿಷ್ಠೆಯೇ ಹೆಚ್ಚಾಯ್ತಾ ಸಚಿವರಿಗೆ?

ಸುಧಾಕರ್‌ v/s ಶ್ರೀರಾಮುಲು : ಕೊರೋನಾ ಎಮರ್ಜೆನ್ಸಿ ನಡುವೆ ಸ್ವಪ್ರತಿಷ್ಠೆಯೇ ಹೆಚ್ಚಾಯ್ತಾ ಸಚಿವರಿಗೆ?

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಾವಿರಾರು ಕೋಟಿ ರೂ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಳ್ಳುವ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರ ಡಾ|ಕೆ. ಸುಧಾಕರ್ ಅವರಿಗೆ ನೀಡಿದೆ ಎನ್ನಲಾಗುತ್ತಿದೆ.

- Advertisement -
- Advertisement -

ಇಡೀ ವಿಶ್ವದ ಎದುರು ಕೊರೋನಾ ಎಂಬ ಮಾರಣಾಂತಿಕ ವೈರಸ್ ಸೃಷ್ಟಿಸಿರುವ ಮೃತ್ಯಕೂಪ ಊಹೆಗೂ ನಿಲುಕದಷ್ಟು ದೊಡ್ಡದಾಗಿ ಬೆಳೆದಿದೆ. ಚೀನಾ ದೇಶದ ವುಹಾನ್ ಎಂಬ ಪಟ್ಟಣದ ಮಾಂಸದ ಅಂಗಡಿಯೊಂದರ ಬಳಿ ಸೃಷ್ಟಿಯಾದ ಈ ವೈರಸ್ ಜಗತ್ತಿನಾದ್ಯಂತ ಸುಮಾರು 35,000 ಸಾವಿರ ಜೀವಗಳನ್ನು ಆಹುತಿ ತೆಗೆದುಕೊಂಡಿದೆ, 7 ಲಕ್ಷ ಜನರಿಗೆ ಈ ಸೋಂಕು ವ್ಯಾಪಿಸಿದೆ ಹಾಗೂ 186 ರಾಷ್ಟ್ರಗಳಿಗೆ ಸಾವಿನ ಬೆದರಿಕೆ ಒಡ್ಡಿದೆ ಎಂದರೆ ಈ ವೈರಸ್ ಹುಟ್ಟುಹಾಕಿರುವ ಭೀತಿಯನ್ನು ನೀವೆ ಊಹಿಸಬಹುದು.

ಈ ಹಿಂದೆಯೂ ಜಗತ್ತು ಇದ್ದಕಿಂತ ಮಾರಣಾಂತಿಕ ವೈರಸ್‌ ಅನ್ನು ಕಂಡಿದೆ. ಆದರೆ, ಜಗತ್ತನ್ನು ಈ ಪರಿ ಬಿಡದಂತೆ ಕಾಡಿದ ಮತ್ತೊಂದು ವೈರಸ್ ಇರಲಿಕ್ಕಿಲ್ಲ ಎನ್ನುತ್ತಿದೆ ವೈಜ್ಞಾನಿಕ ಜಗತ್ತು.

ಜನವರಿ ತಿಂಗಳಲ್ಲೇ ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೋನಾ ವೈರಸ್ ಹಾವಳಿ ಭಾರತಕ್ಕೆ ಅಷ್ಟಾಗಿ ಬರಲು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ಅಸಡ್ಡೆ ತೋರಿದ್ದವು. ಆದರೆ, ಊರ ಸುಟ್ಟ ಕಿಡಿ ಇಂದು ಮನೆಗೂ ವ್ಯಾಪಿಸಿದೆ.

ಅಧಿಕಾರಸ್ಥರ ಅಸಡ್ಡೆಗೆ ಭಾರತದಲ್ಲೂ ಕೊರೋನಾ ಸುಮಾರು 50 ಜನರನ್ನು ಬಲಿ ಪಡೆದಿದೆ. ಮೊದಲ ಕೊರೋನಾ ಸಾವು ಕರ್ನಾಟಕದಲ್ಲೇ ದಾಖಲಾಗಿತ್ತು ಎಂಬುದು ಉಲ್ಲೇಖಾರ್ಹ. ಇನ್ನೂ ಸುಮಾರು 2000ಕ್ಕೂ ಹೆಚ್ಚು ಜನರಿಗೆ ಈ ಸೋಂಕು ಹರಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಘೋಷಿಸಲಾದ ಲಾಕ್ಡೌನ್ ನಡುವೆಯೂ ದೇಶದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದರೆ ಪರಿಸ್ಥಿತಿಯನ್ನು ಊಹಿಸಬಹುದು.
ಇಂತಹ ಸಂದರ್ಭದಲ್ಲಿ ಆಡಳಿತರೂಢ ಪಕ್ಷದವರು ತುಸು ಹೆಚ್ಚೇ ಎಂಬಂತೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿಟ್ಟು ಜನರನ್ನು ಈ ಮಹಾಮಾರಿಯಿಂದ ಕಾಪಾಡಬೇಕಾದ ತುರ್ತು ಅಗತ್ಯವಿದೆ. ಆದರೆ, ಜನ ಜೀವ ಭಯದಲ್ಲಿ ದಿನದೂಡುತ್ತಿರುವ ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ರಾಜ್ಯದ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಇಬ್ಬರು ಸಚಿವರುಗಳ ತಮ್ಮ ಸ್ವ ಪ್ರತಿಷ್ಠೆಗಾಗಿ ಬೀದಿಕಾಳಗಕ್ಕಿಳಿದಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಅಪಕ್ವತೆಯನ್ನು ಬಟಾಬಯಲು ಮಾಡಿದ್ದಾರೆ.

ಶ್ರೀರಾಮುಲು v/s ಸುಧಾಕರ್ ಅಧಿಕಾರದ ಕಿತ್ತಾಟ

ಮಾರ್ಚ್ ಮೊದಲ ವಾರದವರೆಗೆ ರಾಜ್ಯದಲ್ಲಿ ಎಲ್ಲವೂ ಸರಿಯಾಗೇ ಇತ್ತು. ಚೀನಾ, ಸ್ಪೈನ್ ಇಟಲಿಯಲ್ಲಿ ಸಾಲು ಸಾಲು ಜನರ ಹೆಣ ಬೀಳಿಸಿದ್ದ ಕೊರೋನಾ ಭಾರತದಲ್ಲಿ ಆಗಿನ್ನು ತನ್ನ ಖಾತೆಯನ್ನು ತೆರೆದಿರಲಿಲ್ಲ. ಹೀಗಾಗಿ ರಾಜ್ಯ ಮತ್ತು ರಾಷ್ಟ್ರ ತಣ್ಣಗೇ ಇತ್ತು. ಆರೋಗ್ಯ ಸಚಿವ ಶ್ರೀರಾಮುಲು ಸಹ ತನ್ನ ಮಗಳ ಮದುವೆಯಲ್ಲಿ ತಲ್ಲೀನರಾಗಿದ್ದರು.

ಆದರೆ, ಮಾರ್ಚ್ 12 ರಂದು ಕಲಬುರ್ಗಿಯಲ್ಲಿ 76 ವರ್ಷದ ವೃದ್ಧ ಕೊರೋನಾಗೆ ದೇಶದಲ್ಲೇ ಮೊದಲ ವ್ಯಕ್ತಿಯಾಗಿ ಸಾವಿಗೀಡಾಗುತ್ತಿದ್ದಂತೆ ರಾಜ್ಯ ಮಾತ್ರವಲ್ಲ ಇಡೀ ದೇಶ ಎಚ್ಚೆತ್ತಿತ್ತು. ಆಗಿನ್ನೂ ನಿದ್ದೆಯಿಂದ ಎದ್ದಿದ್ದ ಎರಡೂ ಸರ್ಕಾರಗಳು ಕೊರೋನಾ ಹರಡದಂತೆ ತಡೆಯಲು ನಾನಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದವು. ಆದರೆ, ಆಗಲೂ ಸಹ ಸಚಿವ ಶ್ರೀರಾಮುಲು ಮಾತ್ರ ಇನ್ನೂ ಎಚ್ಚೆತ್ತಿರಲಿಲ್ಲ.

ಮಗಳ ಮದುವೆ ಮೂಡ್‌ನಲ್ಲೇ ಇದ್ದ ಆರೋಗ್ಯ ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆದು ಕೆಲ ಸಭೆ ನಡೆಸಿ ಸೂಚನೆ ನೀಡುವ ಗಿಮಿಕ್ ಮಾಡಿದರಾದರೂ ಸರಿಯಾದ ಅಂಕಿಅಂಶಗಳಿಲ್ಲದೆ ಸುದ್ದಿಗೋಷ್ಠಿಗಳಲ್ಲಿ ಪೇಚಿಗೆ ಸಿಲುಕಿ ಆಡಳಿತ ಸರ್ಕಾರವನ್ನೂ ಮುಜುಗರಕ್ಕೆ ಒಳಪಡಿಸಿದ್ದ ಘಟನೆಗಳು ನಡೆದಿದ್ದವು. ಅಲ್ಲದೆ, ಗಂಭೀರ ವಿಚಾರದ ಕುರಿತ ಶ್ರೀರಾಮುಲು ಅವರ ಈ ಮಟ್ಟದ ಅಸಡ್ಡೆ ಸ್ವತಃ ಸಿಎಂ ಯಡಿಯೂರಪ್ಪ ಅವರ ಕೆಂಗಣ್ಣಿಗೂ ಗುರಿಯಾಗಿತ್ತು.

ಆದರೆ, ಇಂತಹದ್ದೇ ಸಂದರ್ಭಕ್ಕೆ ಕಾದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ. ಸುಧಾಕರ್ ಸಚಿವ ಶ್ರೀರಾಮುಲು ಅವರ ಅನುಪಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರದಲ್ಲಿ ತನ್ನ ಮೂಗು ತೂರಿಸಿದ್ದರು. ಅಷ್ಟೇ ಅಲ್ಲ ರಾಜ್ಯದ ಉದ್ದಗಲಕ್ಕೂ ಓಡಾಡುವ ಮೂಲಕ ತಾನೇ ಆರೋಗ್ಯ ಸಚಿವ ಎಂಬಂತೆ ಮಾಧ್ಯಮಗಳ ಎದುರು ಸಾಕಷ್ಟು ಸ್ಕೋಪ್ ಸಹ ತೆಗೆದುಕೊಂಡಿದ್ದರು. ಈ ಘಟನೆ ಇದೀಗ ಇಬ್ಬರು ಸಚಿವರ ಪ್ರತಿಷ್ಠೆಗೆ ಕಾರಣವಾಗಿದೆ.

ಬಡ್ತಿ ಪಡೆದ ಕೆ. ಸುಧಾಕರ್

ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಮೂಲಕ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದಿದ್ದ ಡಾ|ಕೆ. ಸುಧಾಕರ್ ಅವರಿಗೆ ಕೊರೋನಾ ಕುರಿತ ಶ್ರೀರಾಮಲು ಅವರ ಅಸಡ್ಡೆ ಲಾಭವಾಯಿತು ಮತ್ತು ಜನರ-ಮಾಧ್ಯಮದ ಎದುರು ಒಳ್ಳೆಯ ಹೆಸರು ಗಳಿಸಲೂ ಅನುಕೂಲವಾಯಿತು.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದಂತೆ ರಾಜ್ಯದ ಉದ್ದಗಲಕ್ಕೂ ಓಡಾಡಿದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಎಲ್ಲಾ ಜಿಲ್ಲೆಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಲು ಆರಂಭಿಸಿದರು. ಪ್ರತಿದಿನ ಸಂಜೆ ಪತ್ರಿಕಾಗೋಷ್ಠಿ ನಡೆಸಲು ಮುಂದಾದರು. ಒಂದರ್ಥದಲ್ಲಿ ತಾವೇ ಆರೋಗ್ಯ ಇಲಾಖೆ ಸಚಿವ ಎಂಬಂತೆ ಬಿಂಬಿತವಾಗಲಾರಂಭಿಸಿದರು.

ಸಚಿವ ಸುಧಾಕರ್ ಅವರ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೂ ಬಂದು ಮೆಚ್ಚುಗೆಗೂ ಪಾತ್ರವಾಗಿತ್ತು. ಮಾಧ್ಯಮಗಳೂ ಸಹ ಸುಧಾಕರ್ ಕೆಲಸಕ್ಕೆ ಮೆಚ್ಚುಗೆಯನ್ನು ತೋರಿದ್ದವು. ಇಷ್ಟು ಸಾಕಿತ್ತು ಶ್ರೀರಾಮುಲು ಕಣ್ಣು ಕೆಂಪಾಗಿಸಲು.

ಕೊರೋನಾ ಟಾಸ್ಕ್ ಫೋರ್ಸ್‌ ಬಯಲು ಮಾಡಿತು ಇವರ ಒಣ ಜಗಳ

ಕೊರೋನಾ ವಿಚಾರದಲ್ಲಿ ಸಚಿವ ಸುಧಾಕರ್ ಅವರ ಕೆಲಸಕ್ಕೆ ಮಣೆ ಹಾಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಇಲಾಖೆಯಲ್ಲಿ ಅವರಿಗೂ ಅಧಿಕಾರವನ್ನು ಹಂಚಿಕೆ ಮಾಡಿದ್ದರು. ಅಲ್ಲದೆ, ಕೊರೋನಾ ನಿಯಂತ್ರಣಕ್ಕೆ ರಚಿಸಲಾಗಿದ್ದ “ಕೊರೋನಾ ಟಾಸ್ಕ್ ಫೋರ್ಸ್‌” ಜವಾಬ್ದಾರಿಯನ್ನು ಸುಧಾಕರ್‌ಗೆ ನೀಡಲಾಯಿತು. ಟಾಸ್ಕ್ ಫೋರ್ಸ್‌ ಬೆಂಗಳೂರು ಜವಾಬ್ದಾರಿಯನ್ನು ಸುಧಾಕರ್‌ಗೂ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲುಗೂ ಹಂಚಿಕೆ ಮಾಡಲಾಗಿತ್ತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸರಿ ಸಮಾನವಾಗಿ ಅಧಿಕಾರ ಹಂಚಿದ್ದಕ್ಕೆ ರಾಮುಲು ಸಿಎಂ ಬಿಎಸ್‌ವೈ ಬಳಿ ಗರಂ ಆಗಿದ್ದರು. ಸುಧಾಕರ್‌ಗೆ ನನ್ನ ಇಲಾಖೆಯಲ್ಲಿ ಸರಿಸಮಾನ ಅಧಿಕಾರ ನೀಡಿರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ಟಾಸ್ಕ್ ಫೋರ್ಸ್‌ ಕುರಿತ ಆದೇಶವನ್ನು ಮಾರ್ಪಾಡು ಮಾಡುವಂತೆ ಸಿಎಂಗೆ ಶ್ರೀರಾಮುಲು ಒತ್ತಡ ಹಾಕಿದ್ದರು.

ಮತ್ತೊಂದೆಡೆ ಈ ಕುರಿತು ಮಾಧ್ಯಮಗಳಿಗೆ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿದ್ದ ಡಾ| ಸುಧಾಕರ್, “ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಬೆಂಗಳೂರಿನ ಜವಾಬ್ದಾರಿಯನ್ನು ನನಗೆ ಹಾಗೂ ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಿ ಸಿಎಂ ಆದೇಶಿಸಿದ್ದಾರೆ.
ಆದರೆ, ಟಾಸ್ಕ್ ಫೋರ್ಸ್ ನಿರ್ವಹಣೆ ಎಂಬುದು ಜವಾಬ್ದಾರಿಯುತ ಕೆಲಸವಾಗಿದ್ದು, ಇದನ್ನು ಒಬ್ಬರೇ ಮಾನಿಟರ್ ಮಾಡುವ ಹಾಗಿರಬೇಕು. ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಇದ್ದರೆ ಅವರು ಉತ್ತರದಾಯಿತ್ವರಾಗಬೇಕು. ಜವಾಬ್ದಾರಿಗಳು ಹರಿದು ಹಂಚಿ ಹೋಗುವುದರಿಂದ ಗೊಂದಲಗಳೇ ಅಧಿಕ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಡೀ ಟಾಸ್ಕ್ ಫೋರ್ಸ್‌ ಅಧಿಕಾರವನ್ನು ತನಗೇ ನೀಡಬೇಕು ಎಂಬಂತೆ ವರ್ತಿಸತೊಡಗಿದರು.

ಇದೀಗ ಈ ಟಾಸ್ಕ್ ಫೋರ್ಸ್‌ ರಾಜ್ಯದಲ್ಲಿ ನಿರ್ವಹಿಸುತ್ತಿರುವ ಕೆಲಸ ಏನು? ಸೋಂಕು ಹರಡದಂತೆ ತಡೆಯುವಲ್ಲಿ ಈ ಫೋರ್ಸ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಅಲ್ಲದೆ, ಕೆಲಸ ಮಾಡುವ ವಿಚಾರದಲ್ಲಿ ಈ ಇಬ್ಬರೂ ಸಚಿವರ ನಡುವೆ ಯಾವುದೇ ತಾಳ ಮೇಳ ಇದ್ದಂತೆಯೂ ಕಾಣಿಸುತ್ತಿಲ್ಲ. ಆದರೆ, ಪಕ್ಷದಲ್ಲಿ ಹಿರಿಯನಾದ ತನನ್ನು ವಲಸೆ ಸಚಿವ ಸುಧಾಕರ್ ಸೈಡ್‌ಲೈನ್ ಮಾಡಿರುವ ಸಿಟ್ಟು ರಾಮುಲು ಅವರ ವರ್ತನೆಯಲ್ಲಿ ಎದ್ದು ಕಾಣಿಸುತ್ತಿದೆ.

ಈ ನಡುವೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಳ್ಳುವ ಜವಾಬ್ದಾರಿಯನ್ನೂ ಸಹ ರಾಜ್ಯ ಸರ್ಕಾರ ಡಾ|ಕೆ. ಸುಧಾಕರ್ ಅವರಿಗೇ ನೀಡಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಎಲ್ಲಾ ಪ್ರಸಂಗಗಳನ್ನೂ ಬಿಜೆಪಿ ನಾಯಕರ ಒಣ ಪ್ರತಿಷ್ಠೆಯ ಕಿತ್ತಾಟವನ್ನು ಬಟಾಬಯಲು ಮಾಡಿದೆ.

ಒಂದೆಡೆ ಕೊರೋನಾ ಒಂದೊಂದೇ ದೇಶಗಳನ್ನು ಅಪೋಷನ ತೆಗೆದುಕೊಳ್ಳುತ್ತಿದೆ. ವಿಶ್ವದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯ ಹೊಂದಿರುವ ಅಮೆರಿಕದಂತಹಾ ಅಮೆರಿಕಾ ಸಹ ಕೊರೋನಾ ಎದುರು ಮಂಡಿಯೂರಿ ಕುಳಿತಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ನಮ್ಮದೇ ರಾಜ್ಯದಲ್ಲಿನ ಇಬ್ಬರು ಸಚಿವರುಗಳು ಅಧಿಕಾರಕ್ಕಾಗಿ ಹೀಗೆ ಕಿತ್ತಾಟ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಇಷ್ಟಕ್ಕೂ ಇದು ಅಧಿಕಾರ ಮುಖ್ಯವೇ? ಅಥವಾ ಜೀವ ಮುಖ್ಯವೇ? ಎಂದು ಯೋಚಿಸಬೇಕಾದ ಸಂದಿಗ್ಧ ಕಾಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...