Homeಮುಖಪುಟಸಾಂಕ್ರಾಮಿಕ ಪಿಡುಗಿನ ನಿಯಂತ್ರಣದ ಸಂದರ್ಭದ ಕಣ್ಗಾವಲು ಮತ್ತು ಪ್ರಭುತ್ವದ ಬೇಹುಗಾರಿಕೆ

ಸಾಂಕ್ರಾಮಿಕ ಪಿಡುಗಿನ ನಿಯಂತ್ರಣದ ಸಂದರ್ಭದ ಕಣ್ಗಾವಲು ಮತ್ತು ಪ್ರಭುತ್ವದ ಬೇಹುಗಾರಿಕೆ

- Advertisement -
- Advertisement -

ನಾಗಾಲೋಟದಲ್ಲಿ ಓಡುತ್ತಿದ್ದ ಜನರ ಜೀವನಕ್ಕೆ ಇದ್ದಕ್ಕಿದ್ದ ಹಾಗೆ ಬ್ರೇಕ್ ಬಿದ್ದಿದೆ. ಇವತ್ತು ಜಗತ್ತಿನ ಮಾನವಕುಲ ಅದರಲ್ಲೂ ನಮ್ಮ ಪೀಳಿಗೆಯವರು ಹಿಂದೆಂದೂ ಕಂಡಿರದ ಸಾಂಕ್ರಾಮಿಕ ಪಿಡುಗಿಗೆ ಮತ್ತದರ ಪರಿಣಾಮಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಅನಿರೀಕ್ಷಿತವಾಗಿ ಎದುರಾದ ಈ ಆಘಾತಕ್ಕೆ ವಿಶ್ವದೆಲ್ಲೆಡೆ ದೇಶಗಳು ಸ್ತಬ್ಧವಾಗಿವೆ. ಪ್ರತಿಯೊಂದು ದೇಶ ತನ್ನಲ್ಲಿರುವ ವ್ಯವಸ್ಥೆಗಳೊಂದಿಗೆ ಈ ಪಿಡುಗಿನ ವಿರುದ್ಧ ಸೆಣಸಿ ಹರಸಾಹಸ ಪಡುತ್ತಿವೆ. ಅದರಲ್ಲೂ ಭಾರತದಂತಹ ದೇಶಕ್ಕೆ ಇದೊಂದು ದೊಡ್ಡ ಸವಾಲೇ ಸರಿ. ವ್ಯಕ್ತಿಗತ ನೆಲೆಯಲ್ಲಿ ಭಾರತದ ಅನೇಕರು ಜಗತ್ತಿನ ಶ್ರೇಷ್ಠ ವೈದ್ಯರೆಂದು ಹೆಸರು ಪಡೆದಿದ್ದರೂ, ಸಾಮುದಾಯಿಕ ನೆಲೆಯಲ್ಲಿ ಒಳ್ಳೆಯ ವೈದ್ಯಕೀಯ ಸೌಲಭ್ಯಗಳನ್ನು, ತನ್ನೆಲ್ಲ ನಾಗರಿಕರಿಗೆ ಒದಗಿಸುವುದರಲ್ಲಿ ಜಗತ್ತಿನ ಮುಂದುವರೆದ ದೇಶಗಳಿಗೆ ಹೋಲಿಸಿದರೆ ಬಹಳಷ್ಟು ಹಿಂದೆಬಿದ್ದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಅತಿ ವೇಗವಾಗಿ ಹಬ್ಬುತ್ತಿರುವ ಈ ಕೋವಿಡ್-19 ಎಂಬ ಸಾಂಕ್ರಾಮಿಕ ಪಿಡುಗನ್ನು ಪತ್ತೆ ಹಚ್ಚಿ ತಡೆಗಟ್ಟುವುದು ಅತ್ಯಂತ ಕಷ್ಟಕರ ಹಾಗೂ ಸವಾಲಿನ ಕೆಲಸ. ಮುಂದಿನ ಕೆಲವು ದಿನಗಳಲ್ಲಿ ವಿಶ್ವದಾದ್ಯಂತ ದೇಶಗಳು ಯಾವ ರೀತಿ, ಎಷ್ಟು ವೇಗವಾಗಿ ಸ್ಪಂದಿಸಿ ಈ ಪಿಡುಗಿನ ನಿರ್ಮೂಲನೆಗೆ ಕ್ರಮ ಕೈಗೊಳ್ಳುತ್ತವೆ ಎನ್ನುವುದರ ಮೇಲೆ ಜಾಗತಿಕ ಅಭಿವೃದ್ಧಿ ಮತ್ತು ಬದುಕು ನಿಂತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಗತ್ತು ಈವರೆಗೂ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದ ಕೆಲವು ನಿರ್ಧಾರಗಳನ್ನು ಮುಲಾಜಿಲ್ಲದೆ ತೆಗೆದುಕೊಳ್ಳುತ್ತಿದೆ. ತಂತ್ರಜ್ಞಾನ ಬಹಳ ಮುಂದುವರೆದ ಜಗತ್ತಿನಲ್ಲಿ ಈ ಪಿಡುಗಿನಿಂದ ಜಗತ್ತನ್ನು ಪಾರುಮಾಡಲು ಅದೇ ಪ್ರಬಲ ಅಸ್ತ್ರವಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ಸೋಂಕು ಹರಡುತ್ತಿರುವ ಮಾದರಿಯನ್ನು ತಿಳಿಯಲು, ಪ್ರತಿಯೊಬ್ಬರನ್ನು ಹದ್ದಿನ ಕಣ್ಣಿನಿಂದ ಕಾಯಬೇಕಾದ ಸನ್ನಿವೇಶ ಬಂದಿದೆ. ಸಾಂಕ್ರಾಮಿಕ ತಡೆಯಲು ಹಾಕಿರುವ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕಾಗಿದೆ. ಈ ಹಿಂದೆ ಸಾಕಷ್ಟು ಸಾಂಕ್ರಾಮಿಕಗಳು ಮನುಕುಲದ ಅವಸಾನಕ್ಕೆ ಕಾರಣವಾಗಿದ್ದರೂ, ಆಗೆಲ್ಲ ಸಂಕಷ್ಟದಿಂದ ರಕ್ಷಿಸಿಕೊಳ್ಳಲು ಇಂದಿನಂತೆ ಮುಂದುವರೆದ ತಂತ್ರಜ್ಞಾನಗಳಿರಲಿಲ್ಲ. ಇವತ್ತು ಜಗತ್ತಿನ ಹಲವು ದೇಶಗಳಿಗೆ ತನ್ನ ಪ್ರಜೆಗಳನ್ನು ‘ತಂತ್ರಜ್ಞಾನ ಕಣ್ಗಾವಲಿನಿಂದ” (surveillance) ಕಾಯುತ್ತ, ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಇದು ಮೊದಲು ಪ್ರಯೋಗವಾಗಿರುವುದು, ಕೋವಿಡ್-19 ಮೊದಲು ಕಾಣಿಸಿಕೊಂಡ ಚೈನಾದಲ್ಲಿ.

ಇದನ್ನು ಓದಿ: ಕೊರೊನಾ ತರದಿರಲಿ ಸರ್ವಾಧಿಕಾರತ್ವದ ಮೋಹ

ಏನಿದು “ತಂತ್ರಜ್ಞಾನ ಕಣ್ಗಾವಲು” ಎಂದರೆ, ಇವತ್ತು ಜಗತ್ತಿನ ಎಲ್ಲ ದೇಶದ ಬಹುತೇಕ ನಾಗರಿಕರಲ್ಲಿ ಬಹು ದೊಡ್ಡಮಟ್ಟದಲ್ಲಿ ಸ್ಮಾರ್ಟ್ ಫೋನ್ ನುಸುಳಿದೆ. ಜನ ಬಳಸುವ ಈ ಫೋನ್‌ಗಳನ್ನು ಜಾಗರೂಕತೆಯಿಂದ ಗಮನಿಸುತ್ತ, ಮುಖ ಗುರುತಿಸುವ ಕ್ಯಾಮರಾಗಳು ಮತ್ತು ಆಪ್‌ಗಳನ್ನು ಬಳಸಲು ಜನರನ್ನು ಪ್ರೇರೇಪಿಸಿ ಆ ಮೂಲಕ ಮನುಷ್ಯನ ದೇಹದ ಉಷ್ಣತೆ ಮತ್ತಿತರ ವೈದ್ಯಕೀಯ ಮಾಹಿತಿಗಳನ್ನು ಕಲೆ ಹಾಕಬಹುದು. ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ಜನರ ಚಲನವಲನ ಅವರು ಸಂಪರ್ಕಿಸುವ ವ್ಯಕ್ತಿಗಳ ಮಾಹಿತಿಗಳನ್ನು ಪತ್ತೆ ಹಚ್ಚಬಹುದು. ಇವೆ ಈ “ತಂತ್ರಜ್ಞಾನ ಕಣ್ಗಾವಲಿನ” ಪ್ರಮುಖ ಕೆಲಸ. ಇದನ್ನು ಸಮರ್ಪಕವಾಗಿ ಬಳಸಿ, ಜನರ ಚಲನವಲನಗಳನ್ನು ನಿಯಂತ್ರಿಸಿ ಸಾಂಕ್ರಾಮಿಕವನ್ನು ಹರಡದಂತೆ ಮಾಡಿ, ಪಿಡುಗನ್ನು ತೊಲಗಿಸಬಹುದು. ಚೈನಾ ಈ ಮಾದರಿಯನ್ನು ಬಳಸಿ ಬಹಳ ಪರಿಣಾಮಕಾರಿಯಾಗಿ ಕೊರೊನ ವೈರಸ್ ತಮ್ಮ ದೇಶದಲ್ಲಿ ಹರಡುವುದನ್ನು ನಿಯಂತ್ರಿಸಿದೆ.

ಈ ತಂತ್ರಜ್ಞಾನದ ಅಡಿಯಲ್ಲಿ ಮಾಡುವ ಕಣ್ಗಾವಲಿನ ಬಗ್ಗೆ, ಸರ್ಕಾರಗಳು ಜನರಿಗೆ ಸರಿಯಾದ ಮಾಹಿತಿ ಒದಗಿಸುವುದಿಲ್ಲ. ನಮಗೆ ಗೊತ್ತಾಗದೆ ನಮ್ಮ ದೇಹದಲ್ಲಿ ಆಗುವ ಸಣ್ಣ ಸಣ್ಣ ಬದಲಾವಣೆಗಳನ್ನು ಈ ಬಯೋಮೆಟ್ರಿಕ್ ಕಣ್ಗಾವಲು ಪತ್ತೆಹಚ್ಚುತ್ತದೆ. ವಾಹ್! ತಾಂತ್ರಿಕವಾಗಿ ನಾವೆಷ್ಟು ಮುಂದುವರೆದಿದ್ದೇವೆ ಎಂದೆನಿಸುತ್ತದೆ ಅಲ್ಲವೇ? ಇದೆ ತಂತ್ರಜ್ಞಾನ ನಮ್ಮ ಯೋಚನೆಗಳನ್ನೂ ಗುರುತಿಸಬಲ್ಲದು ಎಂದೆನಿಸಿದರೆ? ನಮ್ಮ ಸಿಟ್ಟು, ಖುಷಿ, ಆಲಸ್ಯ, ಪ್ರೀತಿ, ಅಸಹನೆ ಎಲ್ಲವೂ ಜ್ವರ, ತಲೆನೋವು, ನೆಗಡಿಯಯಂತೆಯೇ ತಂತ್ರಜ್ಞಾನಕ್ಕೆ ಬೇರೆಯಲ್ಲ. ಇವುಗಳನ್ನು ಗುರುತಿಸುವುದರಿಂದ ಆಗುವ ಅಡ್ಡಪರಿಣಾಮಗಳನ್ನು ಯೋಚಿಸಿ. ಉದಾಹರಣೆಗೆ ನಮ್ಮ ಫೋನ್ ಮೂಲಕ ನಾವು ಪದೇ ಪದೇ ಹುಡುಕುವ ವೆಬ್‌ಸೈಟ್‌ಗಳು, ನಾವು ಹೆಚ್ಚು ಬಾರಿ ತಡಕುವ ನ್ಯೂಸ್ ಲಿಂಕ್‌ಗಳು, ವಿಡಿಯೋಗಳು, ಮಾಹಿತಿಗಳು, ನಮ್ಮ ಆಸಕ್ತಿ, ನಮ್ಮ ಯೋಚನೆ, ನಮ್ಮ ಬದುಕು ಮತ್ತು ನಮ್ಮ ಬಗೆಗಿನ ಎಲ್ಲ ಅಂಶಗಳೂ ಈ ಮೂಲಕ ಸರ್ಕಾರದ ಗಮನಕ್ಕೆ ಬರುತ್ತದೆ! ಕೆಮ್ಮನ್ನು ಕಂಡುಹಿಡಿಯುವ ತಂತ್ರಜ್ಞಾನ ನಮ್ಮ ನಗುವನ್ನೂ ಕಂಡುಹಿಡಿಯಬಲ್ಲದು. ಒಟ್ಟಾರೆಯಾಗಿ ನಮ್ಮ ಬಗ್ಗೆ ನಮಗೆ ಗೊತ್ತಿರುವುದಕ್ಕಿಂತ ಹೆಚ್ಚಾಗಿ ಸರ್ಕಾರ ಗುರುತಿಸಿ ತಿಳಿದುಕೊಳ್ಳಬಹುದು.

ಇದನ್ನು ಓದಿ: ವಿಡಿಯೊ| ಮಿತಿ ಮೀರುತ್ತಿರುವ ಪೊಲೀಸರ ವರ್ತನೆ-ಕೊರೊನಾ ವಾರಿಯರ್‌ ಸ್ವಯಂಸೇವಕನ ಕೈ ಮುರಿದ ದಾವಣಗೆರೆ ಪೊಲೀಸ್‌

ಈ ಎಲ್ಲ ಮಾಹಿತಿಗಳನ್ನು ಸರ್ಕಾರ ಯಾವುದೇ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ತಂತ್ರಜ್ಞಾನವೊಂದು ಸರ್ಕಾರದ ಪ್ರಬಲ ರಾಜಕೀಯ ಅಸ್ತ್ರವಾಗಬಹುದು. ವ್ಯಾಪಾರಿ ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಬಂದರೆ, ನಮ್ಮೆಲ್ಲ ಮಾಹಿತಿಗಳು ವ್ಯಾಪಾರದ ಸರಕಾಗಬಹುದು. ಅಥವಾ ನಮ್ಮಿಂದಲೇ ಸಂಗ್ರಹಿಸಿದ ಈ ಮಾಹಿತಿಗಳು ನಮ್ಮನ್ನೇ ಬಂಧಿಸುವ ಬೇಲಿಯಾಗಬಹುದು. ನಮ್ಮ ದೇಶದಲ್ಲಿಯೂ ಕೇರಳ ಸರ್ಕಾರ ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚಲು ಜಿಪಿಎಸ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಭಾರತ ಸರ್ಕಾರ ಕೂಡ ಆಪ್ ಮೂಲಕ ಈ ಪಿಡುಗನ್ನು ತಡೆಗಟ್ಟಲು ಮುಂದಾಗಿದೆ. ಸದ್ಯಕ್ಕೆ ಈ ಎಲ್ಲಾ ಹೆಜ್ಜೆಗಳು ನಮ್ಮ ಸುರಕ್ಷತೆಗೆ ಅಗತ್ಯವಿದ್ದ ಕ್ರಮಗಳಾಗಿದ್ದು, ಈ ಪಿಡುಗಿನಿಂದ ಮುಂದೊಮ್ಮೆ ಮುಕ್ತಿ ಹೊಂದಿದ ಮೇಲೆ ಈ ಕಣ್ಗಾವಲಿನ ಅವಶ್ಯಕತೆ ಮುಗಿದಿದೆ ಎಂದು ನಿಲ್ಲಿಸಬಹುದು ಎಂಬುದು ನಂಬಿಕೆಯ ಪ್ರಶ್ನೆ. ಇಂತಹ ಅಸಾಮಾನ್ಯ ಸಂದರ್ಭಗಳಲ್ಲಿ ಈ ಕ್ರಮಗಳನ್ನು ನಾಗರಿಕರು ಬೆಂಬಲಿಸಬೇಕು. ಆದರೆ ಈ ತಾತ್ಕಾಲಿಕ ವ್ಯವಸ್ಥೆ ಖಾಯಂ ಆಗದಂತೆ, ಪೂರ್ಣ ಪ್ರಮಾಣದಲ್ಲಿ ನಮ್ಮನ್ನು ಆವರಿಸದಂತೆ ಎಚ್ಚರ ವಹಿಸಬೇಕು. ಈ ಕ್ರಮಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆಯುವುದು ನಾಗರಿಕರ ಕರ್ತವ್ಯ ಕೂಡ.

ಇದನ್ನು ಓದಿ: ಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಈಗಾಗಲೇ ಹೇಳಿದಂತೆ ಪ್ರಪಂಚದ ಅನೇಕ ದೇಶಗಳು ತಂತ್ರಜ್ಞಾನ ಕಣ್ಗಾವಲಿನ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಪ್ರಯತ್ನಿಸುತ್ತಿವೆ. ಭಾರತ ಕೂಡ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಶನ್ ಟೆಕ್ನಾಲಜಿ, ವ್ಯಕ್ತಿಗಳನ್ನು ಪತ್ತೆ ಹಚ್ಚುವ ಹಾಗು ಆತನ ಚಲನವಲನಗಳ ಮೇಲೆ ನಿಗಾ ಇರಿಸುವ ಆಪ್ ಒಂದನ್ನು ಅಭಿವೃದ್ಧಿ ಪಡಿಸಿ, ಅದರ ಮೂಲಕ ವಿಮಾನ, ರೈಲ್ವೆ ಮತ್ತಿತರ ಪ್ರವಾಸ ಮಾಹಿತಿಗಳನ್ನು ಪರಿಶೀಲಿಸಿ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಿ ನಿಗಾ ಇರಿಸುತ್ತಿದೆ. ಕೇರಳ ರಾಜ್ಯದಲ್ಲಿ ಟೆಲಿಫೋನ್ ದಾಖಲೆಗಳು, ಸಿಸಿಟಿವಿ ಮಾಹಿತಿ ಮತ್ತು ಜಿಪಿಎಸ್ ಮೂಲಕ ವಕ್ತಿಗಳ ಗುರುತುಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ. ಕರ್ನಾಟಕ, ರಾಜಸ್ಥಾನ ಮೊದಲಾದ ರಾಜ್ಯಗಳು ಕೂಡ ತಮ್ಮ ರಾಜ್ಯದ ಸೋಂಕಿತರ ಮತ್ತು ಶಂಕಿತ ಕೋವಿಡ್ ವ್ಯಕ್ತಿಗಳ ಪಟ್ಟಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿವೆ.

ಜನರ ಖಾಸಗಿ ವಿಷಯಗಳನ್ನು ಗುರುತಿಸುವುದು, ಕಣ್ಗಾವಲಿನಲ್ಲಿ ಇಡುವುದು ಈ ಸಂಕಷ್ಟಕರ ಸಮಯದಲ್ಲಿ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾದರೂ, ಈ ವಿಷಮ ಪರಿಸ್ಥಿತಿಯಿಂದ ಹೊರಬಂದ ಮೇಲೆ ಆ ಮಾಹಿತಿಯ ಗತಿ? ಆಗಲೂ ಇದೇ ರೀತಿ ಮಾಹಿತಿಗಳನ್ನು ಕಲೆ ಹಾಕುವುದು ಅದನ್ನು ಬಳಕೆ ಮಾಡಿಕೊಳ್ಳುವುದು ಮುಂದುವರೆದರೆ ಅದು ನಾಗರಿಕರ ಖಾಸಗಿತನ ಮತ್ತು ಗೌಪ್ಯತೆಯ ಹರಣವಾದಂತೆ. ಈ ತುರ್ತು ಪರಿಸ್ಥಿತಿಯಲ್ಲಿ ಕಲೆಹಾಕಿದ ಮಾಹಿತಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡುವುದಿಲ್ಲ ಎಂಬುದನ್ನು ನಾಗರಿಕರಿಗೆ ಮನವರಿಕೆ ಮಾಡಿಕೊಡುವುದು ಮುಖ್ಯ. ಸಂವಿಧಾನದಲ್ಲಿ ನಾಗರಿಕರ ಖಾಸಗಿತನ ಮತ್ತು ಗೌಪ್ಯತೆಯ ಹಕ್ಕಿನ ಬಗ್ಗೆ ಯಾವುದೇ ಉಲ್ಲೇಖವಿಲ್ಲದೆ ಇದ್ದರೂ, ಆರ್ಟಿಕಲ್ 21ರ ಪ್ರಕಾರ, ಬದುಕು ಮತ್ತು ಸ್ವಾತಂತ್ರ‍್ಯ ಮನುಷ್ಯನ ಮೂಲಭೂತ ಹಕ್ಕು. ಆ ನಿಟ್ಟಿನಲ್ಲಿ ಯಾವುದೇ ನಾಗರಿಕನ ಖಾಸಗಿ ಮಾಹಿತಿಯನ್ನು ಅವನ ಒಪ್ಪಿಗೆಯಿಲ್ಲದೆ ಉಪಯೋಗಿಸಿಕೊಳ್ಳುವುದು ವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ಮಾಡಿದಂತೆ. ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ನಿರ್ದಿಷ್ಟ ಕಾನೂನಿನಡಿ ಉಪಯೋಗಿಸಿಕೊಂಡರೂ (ಇದು ಕೂಡ ನಿರ್ಬಂಧಿತ ಉಪಯೋಗವೇ ಆಗಿರಬೇಕು) ಆ ಬಳಕೆ ಕೂಡ ಎಲ್ಲರೂ ಒಪ್ಪಿಕೊಳ್ಳುವ ರೀತಿಯದ್ದಾಗಿರಬೇಕು. ಮತ್ತದಕ್ಕೆ ಎಲ್ಲರ ಪರವಾನಗಿಯನ್ನೂ ಪಡೆಯಬೇಕು.

ಎಪಿಡೆಮಿಕ್ ಡಿಸೀಸ್ ಆಕ್ಟ್ 1897 ಹಾಗೂ ನ್ಯಾಷನಲ್ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆಕ್ಟ್ 2005ರ ಪ್ರಕಾರ ಸರ್ಕಾರವು ಎಲ್ಲ ತುರ್ತು ಕಾರ್ಯಗಳಿಗೆ ಕಾರ್ಯೋನ್ಮುಖವಾಗಿದ್ದು, ಅದಕ್ಕನುಗುಣವಾಗಿ ವ್ಯಕ್ತಿಗಳ ಖಾಸಗಿ ಮಾಹಿತಿಗಳನ್ನು ಉಪಯೋಗಿಸಿಕೊಳ್ಳುತ್ತದೆ. ಖಾಸಗಿ ಮಾಹಿತಿಗಳ ರಕ್ಷಣೆಯ ಬಿಲ್ ನಮ್ಮ ದೇಶದಲ್ಲಿ ಇನ್ನೂ ಕಾನೂನಾಗಿ ಪರಿವರ್ತನೆಯಾಗದ ಕಾರಣ ಅತೀ ಅಗತ್ಯ ಮಾಹಿತಿಗಳನ್ನಷ್ಟೇ ಕಲೆ ಹಾಕಬೇಕು ಹಾಗೂ ಅದರ ಗೌಪ್ಯತೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಸಾಂಕ್ರಾಮಿಕ ನಿವಾರಣೆಯಾದ ಬಳಿಕ ಇಂತಹ ಪ್ರಕ್ರಿಯೆಗಳನ್ನು ನಿಲ್ಲಿಸಿ, ಪ್ರತಿ ವ್ಯಕ್ತಿಯ ಖಾಸಗಿತನವನ್ನು ಗೌರವಿಸಿ ಉಳಿಸುವುದು ಪ್ರಜಾಪ್ರಭುತ್ವದಲ್ಲಿ ಮುಖ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...

SIR | ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸರ್ಕಾರಿ ಸೌಲಭ್ಯ: ಸಿಎಂ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ...