ಅಸ್ಸಾಂನ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ಅಧಿಕಾರವನ್ನು ಪಡೆದರೆ ತಾನು ಮುಖ್ಯಮಂತ್ರಿ ಕುರ್ಚಿಗೆ ಸ್ಪರ್ಧಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
“ಕಾಂಗ್ರೆಸ್ ನೇತೃತ್ವದ ‘ಮಹಾಜೋತ್’ ಮೊದಲ ಹಂತದ ಮತದಾನವನ್ನು ಮುನ್ನಡೆಸಿದ್ದಾರೆ ಎಂದು ಉತ್ತರ ಅಸ್ಸಾಂನಲ್ಲಿರುವ ನನ್ನ ಸ್ನೇಹಿತರಿಂದ ಕೇಳಲು ನನಗೆ ತುಂಬಾ ಸಂತೋಷವಾಗಿದೆ. ಎಐಯುಡಿಎಫ್ ಮೇ 2 ರ ನಂತರ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಬೆಂಬಲಿಸಲು ಎದುರು ನೋಡುತ್ತಿದೆ” ಎಂದು ಅಜ್ಮಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.
I am very happy to hear from my friends in upper Assam that the Congress led #Mahajot has swept the first phase. The lowest figure I am hearing from anyone is 30 seats. AIUDF looks forward to supporting a Congress Chief Minister after 2 May.#AssamAssemblyElection2021
— Maulana Badruddin Ajmal (@BadruddinAjmal) March 28, 2021
ಇದನ್ನೂ ಓದಿ: ಅಸ್ಸಾಂ: ಜಾಹೀರಾತನ್ನು ಸುದ್ದಿಯ ರೂಪದಲ್ಲಿ ನೀಡಿದ ಬಿಜೆಪಿ; ಕಾಂಗ್ರೆಸ್‌ನಿಂದ ದೂರು ದಾಖಲು
ತಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಸಿಎಂ ಅಭ್ಯರ್ಥಿ ಕಾಂಗ್ರೆಸ್‌ನಿಂದ ಆಗಿರುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ಮಹಾಜೋತ್” ಅಧಿಕಾರವನ್ನು ಪಡೆದುಕೊಂಡರೆ ಎಐಯುಡಿಎಫ್ ಮುಖ್ಯಸ್ಥರು ಅಸ್ಸಾಂ ಸಿಎಂ ಆಗುತ್ತಾರೆ ಎಂದು ಹೇಳುವ ಮೂಲಕ ಅಸ್ಸಾಂ ಸಚಿವರು ಮತ್ತು ಬಿಜೆಪಿಯ ಹಿಮಾಂತ ಬಿಸ್ವಾ ಶರ್ಮಾ ಮತದಾರರನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಅಜ್ಮಲ್ ಅವರ ಈ ಹೇಳಿಕೆಯು ಮಹತ್ವದ್ದಾಗಿದೆ.
ಅಜ್ಮಲ್ ಅವರನ್ನು ಅವರ ಪ್ರತಿಸ್ಪರ್ಧಿಗಳು ಅಕ್ರಮ ಬಾಂಗ್ಲಾದೇಶದ ವಲಸಿಗರ ಸಹಾನುಭೂತಿ ವ್ಯಕ್ತಪಡಿಸುವ ವ್ಯಕ್ತಿ ಎಂದು ಆರೋಪಿಸುತ್ತಾರೆ.
ಮಾರ್ಚ್ 27 ರಂದು ಮೊದಲ ಹಂತದ ಚುನಾವಣೆಗಳು ಉತ್ತರ ಅಸ್ಸಾಂನ 47 ಕ್ಷೇತ್ರಗಳಲ್ಲಿ ನಡೆದಿತ್ತು. ಇಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಎಜಿಪಿ ಮೈತ್ರಿಯು 47 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಗೆದ್ದಿತ್ತು. ಈ ಪ್ರದೇಶಗಳಲ್ಲಿ ಚಹಾ ತೋಟದ ಕಾರ್ಮಿಕ ಮತದಾದರು ಗಣನೀಯ ಸಂಖ್ಯೆಯಲ್ಲಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮ: ವೀಲ್‌ಚೇರ್‌ನಲ್ಲಿಯೇ ರ್‍ಯಾಲಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ


