ಯುದ್ದ ಪೀಡಿತ ಪ್ಯಾಲೆಸ್ತೀನ್ ಜನತೆಗೆ ಬೆಂಬಲ ಸೂಚಿಸುವ ಸಲುವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು (ಡಿ.16) ಸಂಸತ್ತಿಗೆ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹೊತ್ತು ಆಗಮಿಸುವ ಮೂಲಕ ಗಮನಸೆಳೆದರು.
ಪ್ರಿಯಾಂಕಾ ಗಾಂಧಿ ಈ ಹಿಂದೆಯೂ ಹಲವು ಬಾರಿ ಪ್ಯಾಲೆಸ್ತೀನ್ ಜನತೆಯ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸಿದ್ದು,ಸಂಕಷ್ಟದಲ್ಲಿರುವ ಜನರಿಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ಇಂದು ಸಂಸತ್ತಿಗೆ ತಂದಿದ್ದ ಬ್ಯಾಗ್ ಮೇಲೆ ‘ಪ್ಯಾಲೆಸ್ತೀನ್’ ಎಂದು ಬರೆದಿತ್ತು. ಅದರಲ್ಲಿ ಪ್ಯಾಲೆಸ್ತೀನ್ ಧ್ವಜದ ಬಣ್ಣ ಮತ್ತು ಕಲ್ಲಂಗಡಿಯ ಚಿತ್ರವಿತ್ತು. ಪ್ಯಾಲೆಸ್ತೀನ್ ಧ್ವಜ ಬಳಸಿ ಒಗ್ಗಟ್ಟು ಪ್ರದರ್ಶಿಸಲು ಅವಕಾಶವಿಲ್ಲದ ಕಡೆಗಳಲ್ಲಿ, ಅಲ್ಲಿನ ಧ್ವಜದ ಬಣ್ಣ ಹೊಂದಿರುವ ಕಲ್ಲಂಗಡಿ ಹಣ್ಣು ಪ್ರದರ್ಶಿಸಿ ಪ್ರತಿಭಟಿಸಲಾಗುತ್ತಿದೆ.
ಕಳೆದ ವಾರ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದ ನವದೆಹಲಿಯ ಪ್ಯಾಲೆಸ್ತೀನ್ ರಾಯಭಾರ ಕಚೇರಿಯ ಮುಖ್ಯಸ್ಥ ಆಬಿದ್ ಎಲ್ರಾಝೆಗ್ ಅಬು ಜಾಝರ್ ಅವರು ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭಿನಂದಿಸಿದ್ದರು.
ಕಳೆದ ಜೂನ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸಿದ್ದ ಪ್ರಿಯಾಂಕಾ ಗಾಂಧಿ, ಗಾಝಾದಲ್ಲಿ ನಡೆಸುತ್ತಿರುವ ನರಮೇಧ ನೆತನ್ಯಾಹು ಸರ್ಕಾರ ಅನಾಗರಿಕ ಸರ್ಕಾರ ಎಂದಿದ್ದರು.
ಯುಎಸ್ ಕಾಂಗ್ರೆಸ್‌ನಲ್ಲಿ ಗಾಝಾ ನರಮೇಧವನ್ನು ನೆತನ್ಯಾಹು ಸಮರ್ಥಿಸಿಕೊಂಡ ಬಳಿಕ ಪ್ರಿಯಾಂಕಾ ಅವರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ : ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಎಂಕೆ ಸ್ಟಾಲಿನ್


