Homeಕರ್ನಾಟಕಹೊಸ ರೀತಿಯ ಅನೈತಿಕ ಪಕ್ಷಾಂತರಕ್ಕೆ ಮದ್ದು ನೀಡಲು ವಿಫಲವಾದ ಸುಪ್ರೀಂ.. : ಡಾ.ವಾಸು ಎಚ್.ವಿ

ಹೊಸ ರೀತಿಯ ಅನೈತಿಕ ಪಕ್ಷಾಂತರಕ್ಕೆ ಮದ್ದು ನೀಡಲು ವಿಫಲವಾದ ಸುಪ್ರೀಂ.. : ಡಾ.ವಾಸು ಎಚ್.ವಿ

- Advertisement -
- Advertisement -

ಬಹುನಿರೀಕ್ಷಿತವಾಗಿದ್ದ ಅನರ್ಹ ಶಾಸಕರ ಕುರಿತಾದ ಮೊಕದ್ದಮೆಯಲ್ಲಿ ಇಂದು ಸುಪ್ರೀಂಕೋರ್ಟು ನಿರೀಕ್ಷಿತ ತೀರ್ಪನ್ನು ನೀಡಿದೆ. ಅವರು ಅನರ್ಹರೇ, ಆದರೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಪಿನ ಹಿಂದಿರಬಹುದಾದ ಸದುದ್ದೇಶವೇನಿರಬಹುದು? ಅನರ್ಹರು ಎನ್ನುವ ಟ್ಯಾಗ್ ಕೊಡೋಣ. ಆದರೆ, ಜನತಾ ನ್ಯಾಯಾಲಯಕ್ಕೆ ಹೋಗಿ ಸ್ಪರ್ಧೆ ಮಾಡಲಿ. ಜನರು ತೀರ್ಮಾನ ಮಾಡಲಿ ಎಂಬ ಸದುದ್ದೇಶವನ್ನು ಆರೋಪಿಸಬಹುದು.

ನಮ್ಮ ಸಂವಿಧಾನದ ಪ್ರಕಾರ ತೀವ್ರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವವರು ಸ್ಪರ್ಧೆ ಮಾಡುವಂತಿಲ್ಲ. ಆದರೆ, ಅಂತಹ ವ್ಯಕ್ತಿಗಳು ಸ್ಪರ್ಧೆ ಮಾಡಿದರೆ ಜನರು ಅವರನ್ನು ಚುನಾಯಿಸುವುದಿಲ್ಲವೇ? ಚುನಾಯಿಸುವ ಸಾಧ್ಯತೆ ಹೆಚ್ಚೇ ಇರಬಹುದು. ಅಲ್ಲಿ ಒಂದು ನೈತಿಕ ನಿರ್ಬಂಧವನ್ನು ಸಂವಿಧಾನವು ಒಡ್ಡಿದೆ. ಈ ಹಿನ್ನೆಲೆಯಲ್ಲಿ ಒಂದು ವಿಶ್ಲೇಷಣೆ ಮಾಡುವ ಅಗತ್ಯ ಇದೆ.

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಾಗ ಎಲ್ಲಾ ಪಕ್ಷಗಳ ನಡುವೆ ಸಹಮತ ಇತ್ತು. ಹಾಗೆ ನೋಡಿದರೆ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಹುಮತವಿದ್ದು, ಯಾವ ಪಕ್ಷಾಂತರವೂ ಅಲುಗಾಡಿಸಲು ಸಾಧ್ಯವಿರದ ಸರ್ಕಾರವು (ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ನಂತರದ ದಿನಗಳಲ್ಲಿ ಸುಪ್ರೀಂಕೋರ್ಟು ಸಹಾ ಅದಕ್ಕೆ ತನ್ನದೇ ರೀತಿಯಲ್ಲಿ ಮಾನ್ಯತೆಯನ್ನು ನೀಡಿತ್ತು.

ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಹೋದರೆ ಅದು ಪಕ್ಷಾಂತರವಾಗದು ಎಂಬುದು ನಂತರ ಮೂರನೇ ಎರಡು ಭಾಗ ಆದದ್ದಕ್ಕೂ ಕಾರಣವಿತ್ತು. ‘ಪಕ್ಷಾಂತರವನ್ನು ನಿಷೇಧಿಸಬೇಕು; ಏಕೆಂದರೆ ಇದು ಅನೈತಿಕವಾದುದು; ಗೆದ್ದ ಜನಪ್ರತಿನಿಧಿಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ಮಾಡುತ್ತಿರುವ ಪಕ್ಷಾಂತರವಿದು’ ಎಂಬ ಕುರಿತು ಯಾರಿಗೂ ಅಸಮ್ಮತಿಯಿರಲಿಲ್ಲ. ಹೀಗಾಗಿ ಪಕ್ಷಾಂತರ ನಿಷೇಧ ಕಾನೂನನ್ನು ಗಟ್ಟಿ ಮಾಡುವ ಕೆಲಸ ನಡೆಯಿತು.

ಅದನ್ನೂ ಉಲ್ಲಂಘಿಸಲು ಕೆಲವು ದಾರಿಗಳನ್ನು ಅನೈತಿಕ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಕಂಡುಕೊಂಡವು. ಅದರಲ್ಲಿ ಒಂದು – ಸ್ಪೀಕರ್ ಅವರು ಪಕ್ಷಾಂತರಿಗಳ ಪರ ಇದ್ದರೆ, ವಿಳಂಬ ನೀತಿಯನ್ನು ಅನುಸರಿಸಿ ಶಾಸನಸಭೆಯ ಅವಧಿ ಮುಗಿಯುವತನಕ ಎಳೆದು ಅನರ್ಹಗೊಳಿಸಲು ಕೋರಿದ ದೂರೇ ಅಪ್ರಸ್ತುತವಾಗುವಂತೆ ಮಾಡುವುದು. ಎರಡು- ಆಡಳಿತ ಪಕ್ಷಕ್ಕೆ ಪಕ್ಷಾಂತರ ಮಾಡಿಸಲು ಶಾಸನಸಭೆಯ ಸದಸ್ಯರ ಕೈಯ್ಯಲ್ಲಿ ರಾಜೀನಾಮೆ ಕೊಡಿಸುವುದು. ನಂತರ ಅವರಿಗೆ ಅಧಿಕಾರ ನೀಡಿ, ಆಡಳಿತದ ಬಲದೊಂದಿಗೆ ಆಡಳಿತ ಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಿ ಗೆಲ್ಲಿಸಿಕೊಂಡು ಬರುವುದು. ಇದನ್ನು ಬಿಜೆಪಿಯೇ ಶುರು ಮಾಡಿದ್ದರಿಂದ ಮತ್ತು ಹೆಚ್ಚು ಬಳಸಿದ್ದರಿಂದ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ.

ಅಂತಹ ಆಪರೇಷನ್ ಕಮಲಕ್ಕೆ ಮದ್ದು ಕಂಡುಕೊಳ್ಳುವುದು ಬಹಳ ಅಗತ್ಯವಿತ್ತು. ಆದರೆ, ಸ್ವತಃ ಬಿಜೆಪಿ (ಅಥವಾ ಇನ್ನಾವುದೋ ಪಕ್ಷ) ಅಧಿಕಾರದಲ್ಲಿದ್ದಾಗ ಅವರದ್ದೇ ಸ್ಪೀಕರ್ ಇರುವುದರಿಂದ ಅನರ್ಹತೆ ಆಗುತ್ತಿರಲಿಲ್ಲ. ಈ ಸಾರಿ ಕರ್ನಾಕಟದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿತ್ತು. ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಸೆಳೆದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದ್ದ ಪಕ್ಷವಾದ ಬಿಜೆಪಿಯು ಪಕ್ಷಾಂತರ ಮಾಡಿಸಿತ್ತು. ಹೀಗಾಗಿ ಸಮ್ಮಿಶ್ರ ಸರ್ಕಾರದ ಪಕ್ಷಗಳ ಬೆಂಬಲದೊಂದಿಗೆ (ವಾಸ್ತವದಲ್ಲಿ ಸರ್ವಾನುಮತದಿಂದ) ಆಯ್ಕೆಯಾಗಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿದ್ದರು. ಅವರು ಸದರಿ ಶಾಸಕರನ್ನು ಅನರ್ಹಗೊಳಿಸಿದರು ಮತ್ತು ಷೆಡ್ಯೂಲ್ 10ರ ಪ್ರಕಾರ ವಿಧಾನಸಭೆಯ ಈ ಅವಧಿ ಮುಗಿಯುವವರೆಗೆ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪಿತ್ತಿದ್ದರು. ಒಂದು ರೀತಿಯಲ್ಲಿ ಅದು ಆಪರೇಷನ್ ಕಮಲಕ್ಕೆ ಮದ್ದಾಗಿತ್ತು.

ಅದು ನಂತರ ಸುಪ್ರೀಂಕೋರ್ಟಿನ ಮೆಟ್ಟಿಲೇರಿತ್ತು. ಇವೆಲ್ಲದರಿಂದ ಶಾಸಕರುಗಳು ಗುಂಪಾಗಿ, ಒಂದು ನಿರ್ದಿಷ್ಟ ಯೋಜನೆಯ ಭಾಗವಾಗಿ ವಿರೋಧ ಪಕ್ಷವನ್ನು ಸ್ವಂತ ಹಿತಾಸಕ್ತಿಗಾಗಿ ಅಧಿಕಾರಕ್ಕೆ ತರಲೆಂದೇ (ಅಂದರೆ ಪಕ್ಷಾಂತರ ಮಾಡಲೆಂದೇ) ರಾಜೀನಾಮೆಗೆ ಮುಂದಾಗಿದ್ದಾರೆ ಎಂಬುದು ಸ್ಪಷ್ಟವಿತ್ತು. ಅದಕ್ಕೆ ಯಡಿಯೂರಪ್ಪನವರ ಆಡಿಯೋ ಕಡೆಯ ಸಾಕ್ಷಿಯಾಗಿತ್ತೇ ಹೊರತು, ಬೇಕಾದಷ್ಟು ಸಾಂದರ್ಭಿಕ ಸಾಕ್ಷಿಗಳಿತ್ತು. ಹೀಗಿದ್ದುದರಿಂದ, ಸದರಿ ಶಾಸಕರನ್ನು ಹಾಲಿ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಗೆ ಸ್ಪರ್ಧಿಸಲು ಸುಪ್ರಿಂಕೋರ್ಟು ಯಾವ ನಿರ್ಬಂಧ ವಿಧಿಸುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಒಂದು ವೇಳೆ ಅದು ಸರಿ ಇಲ್ಲ ಎನ್ನುವುದಾದರೂ ಬೇರೆ ಯಾವ ಮದ್ದು ನೀಡಲಿದೆ ಎಂಬುದು ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಮಹತ್ವದ್ದಾಗಿತ್ತು.

ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದ ಗುಂಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವುದು ಉಡುಗೊರೆಯೇ ಹೊರತು ಶಿಕ್ಷೆಯಲ್ಲ. ಹೀಗಿರುವಾಗ ಅನರ್ಹತೆಯನ್ನು ಎತ್ತಿ ಹಿಡಿದಿದ್ದೇವೆ ಎನ್ನುವುದಕ್ಕೆ ಯಾವ ಅರ್ಥವೂ ಇದ್ದಂತಿಲ್ಲ.

ಅನೈತಿಕ ಪಕ್ಷಾಂತರವನ್ನು ತಡೆಯಬಲ್ಲ ಯಾವ ಮದ್ದನ್ನು ನೀಡುವಲ್ಲಿಯೂ ಸುಪ್ರೀಂಕೋರ್ಟು ಸಫಲವಾಗಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ಅನರ್ಹಗೊಂಡ ಬಹುತೇಕ ಶಾಸಕರು ಈಗ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಲಿದ್ದಾರೆ ಎನ್ನುವುದು ಸುಪ್ರೀಂಕೋರ್ಟು ವಿಫಲವಾದದ್ದಕ್ಕೆ ಸಾಕ್ಷಿಯಾಗಲಿದೆ. ಒಂದು ರೀತಿಯಲ್ಲಿ ಬಿಜೆಪಿಯಿಂದ ಅನರ್ಹರಿಗೆ ಟಿಕೆಟ್ ನೀಡುವುದು ಮತ್ತು ಪಡೆಯುವುದು ಸುಪ್ರೀಂಕೋರ್ಟನ್ನೇ ಅಣಕ ಮಾಡಿದಂತೆಯೂ ಆಗುವ ಸಾಧ್ಯತೆ ಇದೆ. ಯಾವುದಕ್ಕೂ ಉಪಚುನಾವಣೆಯಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...