Homeಮುಖಪುಟದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ...

ದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ…

- Advertisement -
- Advertisement -

| ಡಾ. ಸರ್ಜಾಶಂಕರ ಹರಳಿಮಠ |

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಷನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ.

ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು ದಕ್ಷಿಣ ಭಾರತದ ಭಾಷೆಗಳ ಮೂಲವನ್ನು ಅರಿಯಲು ಸಂಶೋಧನೆಗೆ ತೊಡಗಲು ಭಾಷಾ ಸಂಬಂಧಿ ಆಸಕ್ತಿ ಮತ್ತು ಸ್ಥಳೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಪ್ರಮುಖ ಪ್ರೇರಣೆಯಾಗಿದ್ದವು. ಆದರೆ ಈ ಸಂಶೋಧಕರು ಹೊರಗೆಡಹಿದ ಫಲಿತಗಳು ಮಾತ್ರ ಭಾರತದ ಸಾಮಾಜಿಕ ವಲಯದಲ್ಲಿ ಸಂಚಲನೆಗೆ ಕಾರಣವಾಯಿತು. ಪುರೋಹಿತಶಾಹಿ ವರ್ಗದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ, ಬಹುಸಂಖ್ಯಾತ ತಳವರ್ಗದವರಿಗೆ ಅಲಭ್ಯವಾಗಿದ್ದ ಶಿಕ್ಷಣ ಸೌಲಭ್ಯವೇ ಕಾರಣವಾಗಿ ಸಮಾಜದಲ್ಲಿ ಜಾತಿ ತಾರತಮ್ಯ, ಅವಮಾನ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿತ್ತು. ಸಂಸ್ಕೃತ ಪುರೋಹಿತಶಾಹಿ ವರ್ಗದ ಭಾಷೆಯಾಗಿದ್ದು ಈ ಭಾಷೆಯನ್ನು ಕಲಿಯಲು ಬೇರೆಯವರಿಗೆ ನಿರ್ಬಂಧವಿತ್ತು. ಪರಿಣಾಮವಾಗಿ ಭಾರತೀಯ ಬಹುಸಂಖ್ಯಾತ ತಳವರ್ಗದಲ್ಲಿ ಪುರೋಹಿತಶಾಹಿ ಮತ್ತು ಸಂಸ್ಕೃತದ ಮೇಲಿನ ಸಿಟ್ಟು ಬೇರ್ಪಡಿಸಲಾಗದಂತಿತ್ತು. ಆದರೂ ಕನ್ನಡದ ಮೂಲಭಾಷೆ ಸಂಸ್ಕೃತ ಎನ್ನುವ ಪ್ರಚಲಿತದಲ್ಲಿದ್ದ ನಂಬಿಕೆಯ ಹಿನ್ನೆಲೆಯಲ್ಲಿ ಆ ಸಿಟ್ಟು ವ್ಯಕ್ತವಾಗುತ್ತಿರಲಿಲ್ಲ. ಯಾವಾಗ ಕನ್ನಡ ಸಂಸ್ಕೃತದಿಂದ ಟಿಸಿಲೊಡೆದ ಭಾಷೆ ಅಲ್ಲ, ಇದು ದ್ರಾವಿಡಭಾಷಾ ಕುಟುಂಬದಿಂದ ಬಂದ ಭಾಷೆ ಎನ್ನುವ ಸತ್ಯ ಅನಾವರಣವಾಯಿತೋ ಅದು ತಳವರ್ಗದವರಲ್ಲಿ ಸ್ವಾಭಿಮಾನದ ಸಂಗತಿಯಾಗಿ ಹೊರಹೊಮ್ಮತೊಡಗಿತು. ಅಂದರೆ ಕನ್ನಡವನ್ನು ಸಂಸ್ಕೃತದಿಂದ ಬೇರ್ಪಡಿಸಿ, ದ್ರಾವಿಡ ನೆಲೆಯಿಂದ ನೋಡುವುದು ಭಾಷಿಕ ಕಾರಣಕ್ಕಿಂತ ಸಾಮಾಜಿಕ ಕಾರಣಕ್ಕಾಗಿ ಮುನ್ನೆಲೆಗೆ ಬಂದಿತು. ಈ ಅಂಶಗಳು ದ್ರಾವಿಡಮೂಲದ ಕನ್ನಡವನ್ನು ಪುನರೂಪಿಸುವ ಪ್ರಯತ್ನದ ಹಿಂದೆಯೂ ದಟ್ಟವಾಗಿರುವುದನ್ನು ಗುರುತಿಸಬಹುದು.

‘ದ್ರಾವಿಡ’ ಎಂಬ ಪದವು ದೇಶವಾಚಕವಾಗಿ, ಜನಾಂಗವಾಚಕವಾಗಿ ಸಾಮಾನ್ಯವಾಗಿ ರೂಢಿಯಲ್ಲಿದೆ. ದ್ರಾವಿಡಭಾಷೆ ಎಂದಾಗ ಅದು ಒಂದು ಭಾಷಾವರ್ಗವನ್ನು ಹೆಸರಿಸುತ್ತದೆ. ಸಂಸ್ಕೃತ ವಿದ್ವಾಂಸರ ಪ್ರಕಾರ ದ್ರಾವಿಡ ಎಂಬುದು ದಕ್ಷಿಣ ಭಾರತದ ಒಂದು ಭೂಭಾಗವೇ ಆಗಿದೆ. ಸಂಸ್ಕೃತದ ಮಹಾವಿದ್ವಾಂಸನಾದ ಫೆಡ್ರಿಕ್ ಮ್ಯಾಕ್ಸ್ ಮುಲ್ಲರ್ ಮೊತ್ತಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದ ದಶಕದಲ್ಲಿ ದ್ರಾವಿಡ ಭಾಷೆಗಳನ್ನು ವಿಭಾಗಿಸಿದ. ಅಲ್ಲಿಂದ ಮುಂದೆ ‘ದ್ರಾವಿಡ’ ಎಂಬುದು ಒಂದು ಭಾಷಿಕ ಪರಿಕಲ್ಪನೆಯಾಗಿ ಭಾರತದಲ್ಲಿ ನಿರ್ದಿಷ್ಟವಾದ ಒಂದು ‘ಭಾಷಾ ಪರಿವಾರ’ ಎಂಬರ್ಥದಲ್ಲಿ ಪ್ರಕಟಗೊಂಡಿತು ಸಾಮಾನ್ಯವಾಗಿ ದಕ್ಷಿಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ದ್ರಾವಿಡ ನಾಡೆಂದು, ಇಲ್ಲಿ ವಾಸ ಮಾಡುವ ಜನರನ್ನು ದ್ರಾವಿಡರು ಎಂದು ಗುರುತಿಸುವುದಿದೆ. ಇನ್ನೂ ನಿರ್ದಿಷ್ಟವಾಗಿ ದ್ರಾವಿಡ ಪದವನ್ನು ವ್ಯಾಪಕವಾಗಿ ‘ತಮಿಳ’ ಪದಕ್ಕೆ ಪರ್ಯಾಯವಾಗಿ ಬಳಸಲಾಗಿದೆ.

ಶಂಬಾ ಅವರು ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಮತ್ತು ದೇಶಿ ವಿದ್ವಾಂಸರ ‘ದ್ರಾವಿಡ’ ಅಧ್ಯಯನಗಳನ್ನು ಆಧರಿಸಿ, ‘ದ್ರಾವಿಡ’ ಪದಕ್ಕಿರುವ ಅರ್ಥವ್ಯಾಪ್ತಿಯನ್ನು ಚರ್ಚಿಸುತ್ತಾರೆ. ‘ದ್ರಾವಿಡ’ ಪ್ರಯೋಗ ವೈದಿಕ ವಾಙ್ಮಯದಲ್ಲಿ ‘ದಸ್ಯು’ಗಳನ್ನು ನಿರ್ದೇಶಿಸುವ ಪದ. ಆರ್ಯರೊಂದಿಗೆ ಹೋರಾಡಿದ ದಸ್ಯುಗಳೇ ದ್ರಾವಿಡರಾಗಿದ್ದು, ದ್ರಾವಿಡ ಮೂಲದ ‘ಬ್ರಾಹೂಯಿ’ ಭಾಷೆ ಇಂದಿಗೂ ಬಲೂಚಿಸ್ಥಾನದ ಪರಿಸರದಲ್ಲಿರುವುದು, ಸಿಂಧು ಸಂಸ್ಕೃತಿಯು ದ್ರಾವಿಡರ ಅಸ್ತಿತ್ವಕ್ಕೆ ಪ್ರಬಲ ಪುರಾವೆಯೆನ್ನುವುದು ಶಂಬಾ ಅವರ ವಾದ. ಇಂದಿನ ತಮಿಳರು ಮತ್ತು ಕನ್ನಡಿಗರು ಮೂಲ ದ್ರಾವಿಡ ಪಂಗಡಕ್ಕೆ ಸೇರಿದವರೆನ್ನುವುದನ್ನು ಹಳಗನ್ನಡ ಮತ್ತು ತಮಿಳು ಭಾಷೆಗಳೆರಡು ಒಡೆಯುವ ಪೂರ್ವದಲ್ಲಿದ್ದ ಏಕರೂಪ ‘ಕಂದಮಿಳ’ ಭಾಷೆ. ಕಂದಮಿಳ ಭಾಷೆಯನ್ನಾಡುವವರೇ ‘ಕಂದಮಿಳರು’, ದ್ರಾವಿಡ ಸಂಸ್ಕøತಿಯ ಮೂಲಿಗರಾದ ‘ಕಂದಮಿಳರು’ ಕ್ರಿಸ್ತಪೂರ್ವ ಸು.2000 ವರ್ಷಗಳ ಹಿಂದೆ ನರ್ಮದೆಯ ಪರಿಸರದಲ್ಲಿ ಅಂದರೆ ಇಂದಿನ ಗುಜರಾಥ (ಲಾಟ), ಬಂಗಾಲ, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು ಎಂದು ಶಂಬಾ ಅವರು ನಿರ್ಣಯಕ್ಕೆ ಬರುತ್ತಾರೆ.

ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪ್ರಯತ್ನದ ಹಿಂದಿನ ಪ್ರೇರಣೆಗಳಿಗೆ ಹಲವು ಆಯಾಮಗಳಿವೆ. ತಿಳಿವಳಿಕೆಯ ಕೊರತೆಯಿಂದ ಆಗಿರಬಹುದಾದ ಸಂಸ್ಕೃತವೇ ಕನ್ನಡದ ಮೂಲ ಎಂಬ ಸಮಾಜದಲ್ಲಿದ್ದ ನಂಬಿಕೆಯು ಸಂಶೋಧನೆಗಳು ನಡೆದು ಸತ್ಯ ತಿಳಿದ ನಂತರ ಸ್ವಲ್ಪಮಟ್ಟಿಗೆ ಬದಲಾಯಿತು. ಆದರೆ ಸಂಸ್ಕೃತವೇ ಕನ್ನಡದ ಮೂಲ ಎಂಬ ವಾದವನ್ನು ಒಂದು ವರ್ಗ ಮುಂದುವರೆಸಿದ್ದು ಇದರ ಹಿಂದೆ ನಿರ್ದಿಷ್ಠ ಉದ್ದೇಶ ಇರುವುದನ್ನು ಹೇಳಿತು. ಈ ಉದ್ದೇಶ ಭಾಷಾಮೂಲದ್ದಾಗಿರದೆ ವರ್ಗ ಹಿತಾಸಕ್ತಿಯದ್ದಾಗಿತ್ತು.

ಕನ್ನಡ ಅಸ್ಮಿತೆಯನ್ನು ದ್ರಾವಿಡ ನೆಲೆಯಿಂದ ನೋಡುವ ಚಿಂತನಾಕ್ರಮದ ಹಿಂದೆ ಭಾಷಿಕ ಕಾರಣವೂ ಇದೆ. ಈ ಭಾಷಿಕ ಕಾರಣವೂ ಸಾಮಾಜಿಕ ನೆಲೆಯಲ್ಲಿ ಅಂತರ್ಗತವಾಗಿದೆ. ಬರಹದ ಭಾಷೆ ಸಂಸ್ಕೃತದಿಂದ ಪ್ರಭಾವಿತವಾಗಿದ್ದು ಆಡುಭಾಷೆಗಿಂತ ಭಿನ್ನವಾಗಿದೆ. ಬರಹದ ಭಾಷೆಯ ಎದುರು ಆಡುಭಾಷೆ ಕೀಳರಿಮೆಯನ್ನು ಅನುಭವಿಸುತ್ತಿದ್ದು, ಮುಖ್ಯವಾಗಿ ತಳವರ್ಗದವರಿಗೆ ಇದು ಬಳಕೆಯ ಸಂದರ್ಭದಲ್ಲಿ ತೊಡಕಾಗಿ ಪರಿಣಮಿಸುತ್ತ್ತಿದೆ. ಆಡುಭಾಷೆಯ ಕನ್ನಡ ಹೆಚ್ಚು ಸಂಸ್ಕೃತ ಪದಗಳಿಲ್ಲದ ಮೂಲ ಕನ್ನಡ ಭಾಷೆಗೆ ಹತ್ತಿರವಾಗಿದೆ. ಇದು ತಳವರ್ಗದವರಿಗೆ ಬಳಸಲು ಸುಲಭವಾಗಿದೆ. ಆಡುಭಾಷೆಯ ಕನ್ನಡವನ್ನೇ ಬರಹದಲ್ಲಿಯೂ ಬಳಸುವಂತೆ ದ್ರಾವಿಡ ನೆಲೆಯ ಕನ್ನಡ ಅಸ್ಮಿತೆ ಒತ್ತಾಯಿಸುತ್ತದೆ. ಈ ಒತ್ತಾಯದ ಹಿಂದೆ ಎರಡು ಉದ್ದೇಶಗಳಿವೆ. ಮೊದಲನೆಯದು ಸಂಸ್ಕೃತದ ವಿರೋಧ. ಒಂದು ಭಾಷೆಯ ಹೇರಿಕೆಯ ವಿರೋಧ, ಆ ಸಂಸ್ಕೃತಿಯ ವಿರೋಧವೂ ಆಗಿಬಿಡುತ್ತದೆ. ಎರಡನೆಯದು ಸಂಸ್ಕೃತದ ಹಿಡಿತದಿಂದ ಹೊರಬರುವ ಮತ್ತು ತಳವರ್ಗದ ಕನ್ನಡ ಭಾಷೆಯನ್ನು ಮೇಲ್ಚಲನೆಗೊಳಪಡಿಸುವ ಉದ್ದೇಶ.

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಶನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ. ದ್ರಾವಿಡಶೋಧದ ನೆಲೆ ಕನ್ನಡದೊಳಗೆ ಪರಿವರ್ತನೆ ಮತ್ತು ಸುಧಾರಣೆಯ ಮೂಲಕ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ಇದು ಕನ್ನಡದೊಳಗೇ ಇರುವ ವಿವಿಧ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳು ಕನ್ನಡಕ್ಕೆ ಉಂಟು ಮಾಡುತ್ತಿರುವ ತೊಡಕುಗಳನ್ನು ಪ್ರಧಾನವಾಗಿ ಗಮನಿಸುತ್ತದೆ.

ಕನ್ನಡದಲ್ಲಿ ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುತ್ತಿರುವವರಲ್ಲಿ ಡಿ.ಎನ್.ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣ ಅವರು ಪ್ರಮುಖರು. ಡಿ.ಎನ್.ಶಂಕರಭಟ್ಟರು ದ್ರಾವಿಡಮೂಲದ ಕನ್ನಡವನ್ನು ಪುನರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ಕೆ.ವಿ.ನಾರಾಯಣ ಅವರು ಜಾಗತಿಕ ಪರಿವರ್ತನೆಗಳು, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಚಲನೆಗಳು, ವ್ಶೆಜ್ಞಾನಿಕವಾಗಿ ಕಂಡುಕೊಂಡ ಕಲಿಕೆಯ ಸಾಮಥ್ರ್ಯ, ಹೀಗೆ ಎಲ್ಲ ಆಯಾಮಗಳಿಂದಲೂ ಕನ್ನಡಕ್ಕೆ ಆಗುವ ಪರಿಣಾಮಗಳನ್ನು ಮುಕ್ತವಾಗಿ ಚಿಂತಿಸಿದರೂ ಈ ಚಿಂತನೆಗಳು ದ್ರಾವಿಡ ಮೂಲದಿಂದ ಹೊರಡುತ್ತವೆ ಎನ್ನುವುದು ಮುಖ್ಯವಾದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...