ಗುಜರಾತ್‍ನ ಸೂರತ್‍ನ ಕೋಚಿಂಗ್ ಸೆಂಟರ್‍ನಲ್ಲಿ ಬೆಂಕಿ ಅವಘಡದಿಂದಾಗಿ 23 ಜನ ಮುಗ್ಧ ವಿದ್ಯಾರ್ಥಿಗಳು ಮೃತಪಟ್ಟ ದುರ್ಘಟನೆಗೆ ಇಡೀ ಭಾರತವೇ ಮರುಗಿದೆ. ಬಹಳಷ್ಟು ಜನರು ಮುಗ್ಧ ಮಕ್ಕಳ ಸಾವಿಗೆ ಕಂಬನಿ ಮಿಡಿದಿದ್ದಾರೆ. ಈ ಘಟನೆ ಮಾಸುವ ಮುನ್ನವೇ, ಎರಡು ದಿನದಲ್ಲಿ ಗುಜರಾತಿನಲ್ಲಿ ಇದೇ ಸ್ಥಿತಿಯಲ್ಲಿರುವ 9395 ಅನ್‍ಸೇಫ್ ಕಟ್ಟಡಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಸೂರತ್ ಅವಘಡ ನಡೆದ ನಂತರ ಗುಜರಾತ್‍ನ ಮುಖ್ಯ ಕಾರ್ಯದರ್ಶಿಗಳು, ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದ ಕಟ್ಟಡಗಳ ತನಿಖೆಗೆ ಆದೇಶಿಸಿದ ಎರಡೇ ದಿನದಲ್ಲಿ 9395 ಕಟ್ಟಡಗಳು ಸಿಕ್ಕಿಬಿದ್ದಿವೆ. ಇವುಗಳಲ್ಲಿ ಶಾಲೆಗಳು, ಕೋಚಿಂಗ್ ಸೆಂಟರ್‍ಗಳು, ಮಾಲ್‍ಗಳು, ಹೋಟೆಲ್‍ಗಳು ಸೇರಿದ್ದು ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಲ್ಲ ಎಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಗುಜರಾತ್‍ನ ಮುಖ್ಯ ಕಾರ್ಯದರ್ಶಿಗಳಾದ ಜಗದೀಪ್ ನಾರಾಯಣ್ ಸಿಂಗ್ ರವರ ಆದೇಶದ ಮೇರೆಗೆ 9962 ಕಟ್ಟಡಗಳ ಪರೀಶೀಲನೆ ನಡೆಸಲಾಗಿದ್ದು ಅವುಗಳಲ್ಲಿ ಕೇವಲ 567 ಕಟ್ಟಡಗಳು ಮಾತ್ರ ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದು ಉಳಿದ 9395 ಕಟ್ಟಡಗಳು ಅನ್‍ಸೇಫ್ ಎಂದು ಪರಿಗಣಿಸಲ್ಪಟ್ಟಿವೆ.
ಒಟ್ಟು 2055 ಅಧಿಕಾರಿಗಳು 713 ತಂಡಗಳಾಗಿ ತಪಾಸಣಾ ಕೆಲಸ ಮಾಡಿದ್ದು ಗುಜರಾತ್‍ನ ತುಂಬೆಲ್ಲಾ ಓಡಾಡಿದ್ದು 162 ನಗರಸಭೆ/ಪಾಲಿಕೆಗಳನ್ನು ತಪಾಸಣೆ ನಡೆಸಿದೆ. ಲೋಪವೆಸಗಿರುವ ಕಟ್ಟಡಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದ್ದು ಮೂರು ದಿನದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಕಟ್ಟಡಗಳನ್ನು ಮುಚ್ಚಬೇಕಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿಗಳು ಎಚ್ಚರಿಕೆ ನೀಡಿದ್ದಾರೆ.
ಗುಜರಾತ್ ಮಾದರಿ ಎಂದು ದೇಶದಲ್ಲೆಡೆ ಹಲವು ಫೇಕ್ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ಬಿಜೆಪಿ ದೇಶಾದ್ಯಂತ ಪ್ರಚಾರ ನಡೆಸಿತ್ತು. ಗುಜರಾತ್ ವೇಗವಾಗಿ ಅಭಿವೃದ್ದಿ ಹೊಂದಿರುವ ರಾಜ್ಯವೆಂದು, ಇದೇ ಮಾದರಿಯಲ್ಲಿ ದೇಶದ ಅಭಿವೃದ್ದಿ ಮಾಡಿವುದಾಗಿ ಘೋಷಿಸಿ, ನರೇಂದ್ರ ಮೋದಿಯವರು 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದರು.
ಈಗ ನೋಡಿದರೆ ಕನಿಷ್ಟ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ 9000 ಕ್ಕೂ ಹೆಚ್ಚು ಕಟ್ಟಡಗಳಿರುವುದು ಯಾವ ಥರದ ಅಭಿವೃದ್ದಿ ಎಂಬ ಪ್ರಶ್ನೆ ಎದ್ದಿದೆ.
ಗುಜರಾತ್ ಮಾಡೆಲ್ ಅಂತೆ!!
ಸೂರತ್ ನಗರದ ಬೆಂಕಿ ಅನಾಹುತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ನೆಹರು ಸ್ಥಾಪಿತ ಅಖಿಲ ಭಾರತ ವೈದ್ಯಕೀಯ ಮಹಾವಿಜ್ಞಾನ ಸಂಸ್ಥೆಗೆ ತೆಗೆದುಕೊಂಡು ಹೋಗಲು ಮೋದಿ ಆದೇಶಿಸಿದ್ದಾರೆ. 15 ವರುಷ ಗುಜರಾತ್ ಆಡಳಿತ ನಡೆಸಿ ಫಕೀರರು ಅಲ್ಲಿ ಒಂದು ಒಳ್ಳೆಯ ಆಸ್ಪತ್ರೆ ಸ್ಥಾಪಿಸಲು ಆಗಲಿಲ್ಲವೇ? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಸೂರತ್ ನಂತಹ ದೊಡ್ಡ ವ್ಯವಹಾರಿಕ ನಗರದಲ್ಲಿ ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ವಾಹನದಲ್ಲಿ ಮಕ್ಕಳನ್ನು ಉಳಿಸಲು 22 ಅಡಿಯ ಎಣಿಯು ಇರಲಿಲ್ಲ ಅಂದರೆ ಅದೆಂಥ ಡಬ್ಬಾ ಗುಜರಿ ಗಾಡಿಗಳು? ಗುಜರಾತ್ ಮಾಡೆಲ್ ಅನ್ನುತ್ತಾ ಸುಳ್ಳುಗಳ ಸರಮಾಲೆಗಳ ಅಡಿಯಲ್ಲಿ ಗೆದ್ದು ಜನರಿಗೆ ಮಂಕುಬೂದಿ ಎರಚಿದ ಪ್ರಧಾನಿ ಇವರಲ್ಲವೇ ಎಂದು ಸಹ ಕಿಡಿ ಕಾರಿದ್ದಾರೆ.


