Homeಮುಖಪುಟದೇವೆಗೌಡರ ಕುಟುಂಬದ ಕುರಿತು ಸುಳ್ಳು ಸುದ್ದಿ ಪ್ರಕಟ: ವಿಶ್ವೇಶ್ವರ್ ಭಟ್ ಮೇಲೆ ಎಫ್‍ಐಆರ್ ದಾಖಲು

ದೇವೆಗೌಡರ ಕುಟುಂಬದ ಕುರಿತು ಸುಳ್ಳು ಸುದ್ದಿ ಪ್ರಕಟ: ವಿಶ್ವೇಶ್ವರ್ ಭಟ್ ಮೇಲೆ ಎಫ್‍ಐಆರ್ ದಾಖಲು

ಪ್ರದೀಪ್ ಕುಮಾರ್ ಎಸ್‍ಪಿ ಎಂಬುವವರು ಮೇ 26ರಂದು ನೀಡಿರುವ ದೂರಿನ ಅನ್ವಯ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಲೋಕಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕುಡಿದು ಮೈಸೂರಿನಲ್ಲಿ ರಂಪಾಟ ಮಾಡಿದ್ದಾರೆ. ಅಲ್ಲದೇ ತನ್ನ ತಾತ ದೇವೇಗೌಡರಿಗೆ ಕರೆ ಮಾಡಿ ನನ್ನ ಸೋಲಿಗೆ ನೀವೇ ಕಾರಣ, ನನ್ನನ್ನು ಚಕ್ರವ್ಯೂಹದಲ್ಲಿ ಸಿಕ್ಕಿಸಿಬಿಟ್ಟಿದ್ದೀರಿ ಎಂದೆಲ್ಲಾ ಸುಳ್ಳು ಸುದ್ದಿ ಪ್ರಕಟಿಸಿದ್ದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ಮತ್ತು ಸಿಬ್ಬಂದಿಗಳ ಮೇಲೆ ಮಾನಹಾನಿ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿದೆ.

ಪ್ರದೀಪ್ ಕುಮಾರ್ ಎಸ್‍ಪಿ ಎಂಬುವವರು ಮೇ 26ರಂದು ನೀಡಿರುವ ದೂರಿನ ಅನ್ವಯ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ವಿಶ್ವವಾಣಿ ಪತ್ರಿಕೆಯು ದೇವೇಗೌಡರ ಮತ್ತು ನಿಖಿಲ್ ಕುಮಾರಸ್ವಾಮಿಯವರ ತೇಜೋವಧೆ ಮಾಡಲೇಂದೆ ಸುಳ್ಳು ವರದಿ ಪ್ರಕಟಿಸಲಾಗಿದೆ ಎಂದು ದೂರಿದ್ದಾರೆ.

ಒಬ್ಬ ಮಹಿಳೆ ವಿರುದ್ಧ ಸೋತಿದ್ದು ನನಗೆ ಅವಮಾನವಾಗಿದೆ, ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ, ಹಾಗೂ ಹೆಚ್.ಡಿ ದೇವೆಗೌಡರ ಬಗ್ಗೆ ‘ಗೌಡರ ಮೊಮ್ಮಕ್ಕಳ ಗದ್ದಲ ಗೊಂದಲ’ ಎಂದೆಲ್ಲಾ ಅಪಪ್ರಚಾರ ಮಾಡಲಾಗಿದೆ. ನಿಖಿಲ್ ಕುಮಾರಸ್ವಾಮಿ ದೇವೇಗೌಡರಿಗೆ ಬೆದರಿಕೆ ಕೂಗಟ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ವಿಶ್ವವಾಣಿ ಪತ್ರಿಕೆಯಲ್ಲಿ, ಇದೊಂದು ಪೂರ್ವನಿಯೋಜಿತ ಒಳಸಂಚಿನ ಪ್ರಕಟಣೆಯಾಗಿದ್ದು, ಉಹಾಪೋಹ ಕಲ್ಪನೆಯ ಪ್ರಕಟಣೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದರು.

ಈ ಕುರಿತು ಎನ್‍ಡಿಟಿವಿಯೊಂದಿಗೆ ಪ್ರತಿಕ್ರಿಯಿಸಿರುವ ವಿಶ್ವೇಶ್ವರ್ ಭಟ್ ನಾನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮರುದಿನ ತಂದೆಯ ನೋವು ಎಂದು ಅವರ ಹೇಳಿಕೆಯನ್ನು ಸಹ ವರದಿ ಪ್ರಕಟಿಸಿದ್ದೇನೆ ಎಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ನಿಖಿಲ್ ಕುಮಾರಸ್ವಾಮಿ ನನಗೆ ಎರಡು ಬಾರಿ ಕರೆ ಮಾಡಿದ್ದರು. ಎರಡನೇ ಸಲ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದರು ಎಂದು ದೂರಿದ್ದಾರೆ. ಅಲ್ಲದೇ ನಾನು ಬಿಜೆಪಿ ಪರವಾಗಿ ಇಲ್ಲ, ಅದು ವಿರೋಧ ಪಕ್ಷದಲ್ಲಿರುವ ಕಾರಣ ನನ್ನನ್ನ ಬೆಂಬಲಿಸುತ್ತಿದೆ ಅಷ್ಟೇ ಎಂದಿದ್ದಾರೆ.

ಈ ಕುರಿತು ಗೃಹ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು ಮಾಧ್ಯಮಗಳು ಫೋರ್ಜರಿ ಮಾಡಿದರೆ ಅದು ತಪ್ಪು. ಅಂತಹ ಮಾಧ್ಯಮವನ್ನು ಯಾರು ರಕ್ಷಿಸಿದರೆ ಅದಕ್ಕಿಂತ ನಾಚಿಕೆ ಮತ್ತೊಂದಿಲ್ಲ, ಇದರ ಕುರಿತು ತನಿಖೆ ನಡೆಯುತ್ತಿದೆ, ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದಿದ್ದಾರೆ.

ಒಬ್ಬ ಸಂಪಾದಕನ ಮೇಲೆ ಎಫ್‍ಐಆರ್ ದಾಖಲಾಗಿದೆ. ಅದು ಸಹ ಸುಳ್ಳು ಸುದ್ದಿ ಪ್ರಕಟಿಸಿರುವ ಕಾರಣಕ್ಕಾಗಿ. ಯಾವ ಕನ್ನಡ ಚಾನೆಲ್‍ಗಳು ಕೂಡ ಇದನ್ನು ಸುದ್ದಿ ಮಾಡುತ್ತಿಲ್ಲ ಏಕೆ? ಎಂದು ಹಲವಾರು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಸಂಪಾದಕರ ಜೊತೆ ಈ ಖಾವಿ ತೊಟ್ಟ ಎರಡೆರಡು ಅತ್ಯಾಚಾರದ ಆರೋಪ ಹೊತ್ತಿರುವ ಈ ಕ್ಷಣಕ್ಕೂ ಬೇಲ್ ಮೇಲೆ ತಿರುಗುತ್ತಿರುವ ಈ ಸ್ವಾಮೀಜಿಯನ್ನು ಬಂಧಿಸಬೇಕು. ಯಾಕೆಂದರೆ ಇವನು ಈ ಪತ್ರಿಕೆಯ ಬೇನಾಮಿ ಪಾಲುದಾರ. ಸರಿಯಾಗಿ ಒದ್ದು ವಿಚಾರಣೆ ಮಾಡಿದರೆ ಗೌರಿ ಲಂಕೇಶ್ ಹತ್ಯೆಯಲ್ಲಿ ಈತನ ಪಾತ್ರವು ಬಯಲಾಗುತ್ತದೆ.

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...