Homeಮುಖಪುಟಅನುಮಾನದ ರೋಗ: ತೆಲಂಗಾಣದಲ್ಲಿ ಮನೆಗೆಲಸಗಾರರ ಮೇಲೆ ಕಣ್ಗಾವಲು ಆಪ್

ಅನುಮಾನದ ರೋಗ: ತೆಲಂಗಾಣದಲ್ಲಿ ಮನೆಗೆಲಸಗಾರರ ಮೇಲೆ ಕಣ್ಗಾವಲು ಆಪ್

ಮನೆಗೆಲಸದವರು ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ತಮ್ಮ ಉದ್ಯೋಗದಾತರ ಅಪರಾಧದ ಹಿನ್ನೆಲೆಯನ್ನು ಪರಿಶೀಲಿಸಲು ಪೊಲೀಸರು ಯಾವ ಆಪ್ ರಚಿಸಿದ್ದೀರಿ ಎಂಬ ಪ್ರಶ್ನೆ ಎದ್ದಿದೆ.

- Advertisement -
- Advertisement -

ನಮ್ಮ ದೇಶದಲ್ಲಿ ಕೋಟ್ಯಾಂತರ ಜನ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ, ಹಲವು ಕೆಲಸಗಳನ್ನು ಮಾಡುತ್ತಾ, ಕಷ್ಟಪಟ್ಟು ದುಡಿಯುತ್ತಾ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲರೂ ತಾವು ಕೆಲಸ ಮಾಡುವ ಕಂಪನಿ, ಕಾರ್ಖಾನೆ, ಕಚೇರಿಗಳಲ್ಲಿ ತಮ್ಮ ವಿಳಾಸ ಸೇರಿ ಕನಿಷ್ಟ ಮಾಹಿತಿ ಕೊಟ್ಟಿರುತ್ತಾರೆ. ಆದರೆ ಕನಿಷ್ಟ ವೇತನ ಪಡೆಯುತ್ತಾ ದುಡಿಯುತ್ತಿರುವ ಮನೆಗೆಲಸಗಾರರ ಮೇಲೆ ಕಣ್ಗಾವಲು ಇಡಲು ತೆಲಂಗಾಣ ಪೊಲೀಸ್ ಮೊಬೈಲ್ ಆಪ್ ಒಂದನ್ನು ರಚಿಸಿದ್ದಾರೆ. ಇದು ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ತೀವ್ರ ವಿರೋಧ ಸಹ ವ್ಯಕ್ತವಾಗಿದೆ.

ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹೈದರಾಬಾದ್‌ನ ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಶಿಖಾ ಗೋಯೆಲ್, ಮನೆಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಜಾಗರೂಕರಾಗಿರಿ, ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಸುರಕ್ಷತೆಗಾಗಿ ನೇಮಕ ಮಾಡಿಕೊಳ್ಳುವ ಮೊದಲು HAWKEYE ಆಪ್ ಮೂಲಕ ಪರೀಶಿಲಿಸಿ ಮತ್ತು ಅವರ ಮಾಹಿತಿಯನ್ನು ನಮಗೆ ನೀಡಿ” ಎಂದು ಹೇಳಿದ್ದಾರೆ.

ಈ ದಿನಗಳಲ್ಲಿ ನಾವು ಮನೆಗೆಲಸದವರನ್ನು ಅವಲಂಬಿಸಬೇಕಾಗಿದೆ. ಕೆಲವೊಮ್ಮೆ ಅವರು ವಿವಿಧ ರಾಜ್ಯಗಳು ಅಥವಾ ಬೇರೆ ದೇಶದವರಾಗಿರುತ್ತಾರೆ. ಆದರೆ ಅವರು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಅಡುಗೆಯವರಾಗಿ, ಭದ್ರತಾ ಸಿಬ್ಬಂದಿಗಳಾಗಿ ಮತ್ತು ಶ್ರೀಮಂತ ಕುಟುಂಬಗಳಿಗೆ ಚಾಲಕರಾಗಿ ಕೆಲಸ ಮಾಡುತ್ತಾರೆ. ಮಾಲೀಕರ ನಂಬಿಕೆಯನ್ನು ಗಳಿಸಿದ ನಂತರ, ಅದು ಒಂದೆರೆಡು ದಿನಗಳಲ್ಲಿ ಅಲ್ಲ, ಹಲವಾರು ತಿಂಗಳುಗಳು ಕೆಲಸ ಮಾಡಿ ಕೊನೆಗೆ ಮಾಲೀಕರು ದೂರವಿರುವಾಗ ಮನೆಯಲ್ಲಿ ಕಳ್ಳತನ ಮಾಡಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಅವರನ್ನು ನೇಮಿಸಿಕೊಳ್ಳುವ ಮುನ್ನ ನಮಗೆ ಅವರ ಪೂರ್ಣ ಮಾಹಿತಿ ನೀಡಿ ಎಂದಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಅವರು ಆಭರಣಗಳು ಮತ್ತು ಹಣವನ್ನು ದರೋಡೆ ಮಾಡುವ ಮೊದಲು ಕುಟುಂಬಗಳಿಗೆ ಮಾದಕ ದ್ರವ್ಯವನ್ನು ನೀಡಿದ್ದರು ಎಂದು ಸಹ ಅವರು ಆರೋಪಿಸಿದ್ದಾರೆ ಎಂದು ತೆಲಂಗಾಣ ಟುಡೆ ವರದಿ ಮಾಡಿದೆ.

ಹೈದರಾಬಾದ್ ಪೊಲೀಸರ ಈ ಕ್ರಮ ಮತ್ತು ಆರೋಪಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮನೆಗೆಲಸದವರು ಸಹ ಮನುಷ್ಯರು, ಅವರಲ್ಲಿ ಬಹುತೇಕರು ಪ್ರಾಮಾಣಿಕರಾಗಿರುತ್ತಾರೆ. ನಿಮ್ಮ ಶ್ರೀಮಂತಿಕೆಯ ಅಹಂನಿಂದ ಅವರನ್ನು ಕ್ರಿಮಿನಲ್‌ಗಳ ರೀತಿ ನೋಡುವುದನ್ನು ಬಿಡಿ ಎಂದು ತಾಕೀತು ಮಾಡಿದ್ದಾರೆ.

ಮನೆಗೆಲಸದವರು ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ತಮ್ಮ ಉದ್ಯೋಗದಾತರ ಅಪರಾಧದ ಹಿನ್ನೆಲೆಯನ್ನು ಪರಿಶೀಲಿಸಲು ಪೊಲೀಸರು ಯಾವ ಆಪ್ ರಚಿಸಿದ್ದೀರಿ? ಅದರ ಪ್ರಕ್ರಿಯೆಯೇನು? ಅಥವಾ ಈ ಪರಿಶೀಲನೆ ಪ್ರಕ್ರಿಯೆಯು ಕಟ್ಟುನಿಟ್ಟಾಗಿ ಏಕಮುಖವಾಗಿದೆಯೇ? ಎಂದು ಧನಕ್ ಎಂಬುವವರು ಪ್ರಶ್ನಿಸಿದ್ದಾರೆ.

ಇದು ಬಡವರ ವಿರೋಧಿ ಮತ್ತು ಜಾತಿವಾದಿ ಕೊಳಕು ಕೆಲಸವಾಗಿದೆ. ಜನರು ತಮ್ಮ ವರ್ಗ, ಜಾತಿ, ಆರ್ಥಿಕ ಸವಲತ್ತುಗಳ ಕಾರಣದಿಂದ ಮನೆಗೆಲಸಗಾರರನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕಾಗಿ ಉದ್ಯೋಗದಾತರೆ ಹೆಚ್ಚು ಹೊಣೆಗಾರರಾಗಿರುತ್ತಾರೆ ಎಂದು ಸಬಿನಾ ಬಾಷ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮನೆಗೆಲಸಗಾರರಿಗೆ ಶೌಚಾಲಯ ಬಳಸಲು ಅವಕಾಶ, ಸ್ವಚ್ಛತಾ ಉಪಕರಣಗಳು, ಕನಿಷ್ಠ ಮತ್ತು ವಾರ್ಷಿಕ ಹೆಚ್ಚಳ, ಕೆಲಸದ ಸಮಯ ನಿಗಧಿ, ಹಬ್ಬದ ರಜಾದಿನಗಳನ್ನು ನೀಡಿ. ದಯವಿಟ್ಟು ಇದನ್ನೂ ಸಹ ಖಚಿತಪಡಿಸಲು ಡವ್ ಐ ಎಂಬ ಆಪ್ ರಚಿಸಿರಿ ಎಂದು ರಾಜು ಎಂಬುವವರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಮನೆಗೆಲಸ ಬಡಜನರ ಮೇಲೆ ಕಣ್ಗಾವಲು ಇಡುವ ಮೂಲಕ ತೆಲಂಗಾಣವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮುಂಬೈ-ದೆಹಲಿಯಂತಹ ನಗರಗಳಲ್ಲಿ “ಮನೆ ನಮ್ಮ ವೈಯಕ್ತಿಕ ಜಾಗ. ಕಳ್ಳತನ ಮಾಡಿದವರು, ಯಾರೊಬ್ಬರ ಮಗುವನ್ನು ಹೊಡೆದವರು, ವೃದ್ಧ ದಂಪತಿಯನ್ನು ಕೊಂದವರು, ಜೈಲಿನಿಂದ ಹೊರಬಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಈ ಹಿಂದೆ ಇವರು ಎಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು, ಅಲ್ಲಿನ ಮಾಲೀಕರಿಂದ ಪ್ರತಿಕ್ರಿಯೆ ಪಡೆಯಬೇಕು” ಎಂದು ಹೆಲ್ಫ್ ಚೆಕ್ಕರ್ ಎಂಬ ಫೇಸ್‌ಬುಕ್ ಗ್ರೂಪ್ ಒಂದನ್ನು ಮಾಡಿಕೊಂಡು ಹೆಣ್ಣು ಮಕ್ಕಳ ಫೋಟೊವನ್ನು ಹಾಕಿ ವಿಕೃತಿ ಮೆರೆಯುತ್ತಿರುವುದರ ಕುರಿತು ನಾನುಗೌರಿ.ಕಾಂ ಈ ಹಿಂದೆ ವರದಿ ಮಾಡಿತ್ತು. ಅದನ್ನು ಇಲ್ಲಿ ಓದಬಹುದು.


ಇದನ್ನೂ ಓದಿ: ಅನುಮಾನದ ರೋಗ: ಹೆಣ್ಣುಮಕ್ಕಳ ಫೋಟೋ ಎಫ್‌ಬಿಯಲ್ಲಿ ಪೋಸ್ಟ್‌ ಮಾಡಿ ವಿಕೃತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...