Homeಅಂತರಾಷ್ಟ್ರೀಯಅಫ್ಘಾನ್‌ ಮಾಜಿ ಉಪಾಧ್ಯಕ್ಷನ ಸಹೋದರನನ್ನು ಕೊಂದ ತಾಲಿಬಾನ್

ಅಫ್ಘಾನ್‌ ಮಾಜಿ ಉಪಾಧ್ಯಕ್ಷನ ಸಹೋದರನನ್ನು ಕೊಂದ ತಾಲಿಬಾನ್

- Advertisement -
- Advertisement -

ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೀಹ್ ಅವರ ಸಹೋದರ ರೋಹುಲ್ಲಾ ಅಜೀಜಿ ಮತ್ತು ಅವರ ಚಾಲಕನನ್ನು ಉತ್ತರ ಪಂಜ್‌ಶಿರ್ ಪ್ರಾಂತ್ಯದ ಕರುಖ್ ಜಿಲ್ಲೆಯಲ್ಲಿ ತಾಲಿಬಾನ್ ಗುಂಡಿಕ್ಕಿ ಕೊಂದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಅಮ್ರುಲ್ಲಾ ಸಲೀಹ್ ಅವರ ಸೋದರ ಸಂಬಂಧಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಪಂಜ್‌ಶೀರ್‌ನ ತಾಲಿಬಾನ್ ವಿರೋಧಿ ಗುಂಪಿನ ಮುಂಚೂಣಿಯ ನಾಯಕರಲ್ಲಿ ಒಬ್ಬರಾಗಿರುವ ಅಜೀಜಿ ಅವರು ಗುರುವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ತಾಲಿಬಾನಿಗಳು ತಪಾಸಣಾ ಕೇಂದ್ರದಲ್ಲಿ ತಡೆದಿದ್ದಾರೆ. ನಂತರ ಅಜೀಜಿ ಮತ್ತು ಅವರ ಚಾಲನಿಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಅವರ ಸೋದರ ಸಂಬಂಧಿ ಶುರೇಶ್‌ ಸಲೀಹ್‌ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಹಿಂಸಾಚಾರ; ವಿಶ್ವಸಂಸ್ಥೆ ಖಂಡನೆ

ತಾಲಿಬಾನಿಗಳು ಅಜೀಜಿ ಅವರನ್ನು ತಡೆಯುವ ಸಮಯದಲ್ಲಿ ಅವರು ಎಲ್ಲಿಗೆ ಹೋಗುತ್ತಿದ್ದರು ಎಂದು ತಿಳಿದಿಲ್ಲ ಎಂದು ಶುರೇಶ್‌‌ ಹೇಳಿದ್ದಾರೆ. ಅವರನ್ನು ತಡೆದಿದ್ದ ಪ್ರದೇಶದಲ್ಲಿ ಫೋನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಅಜೀಜಿ ಅವರ ಮೃಹ ದೇಹವನ್ನು ಆತನ ಸಂಬಂಧಿಕರಿಗೆ ನೀಡಲಾಗಿಲ್ಲ ಎಂದು ಖಾಮಾ ನ್ಯೂಸ್ ಅನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಮಾಡಿದೆ. ಈ ಮಧ್ಯೆ, ತಾಲಿಬಾನ್ ಈ ಸುದ್ದಿಯನ್ನು ನಿರಾಕರಿಸಿದ್ದು, ತಾಲಿಬಾನ್‌ನೊಂದಿಗಿನ ಸಂಘರ್ಷದ ಸಮಯದಲ್ಲಿ ಅಜೀಜಿಯವರನ್ನು ಕೊಲ್ಲಲಾಯಿತು ಎಂದು ಐಎಎನ್ಎಸ್ ವರದಿ ಮಾಡಿದೆ.

ಇದು ಪಂಜ್‌ಶೀರ್ ಪ್ರಾಂತ್ಯದಲ್ಲಿ ಪ್ರಾಣ ಕಳೆದುಕೊಂಡ ತಾಲಿಬಾನ್ ವಿರೋಧಿ ನಾಯಕರ ಕುಟುಂಬದ ಎರಡನೇ ಸದಸ್ಯರಾಗಿದ್ದಾರೆ. ಈ ಹಿಂದೆ, ಕಮಾಂಡರ್ ಅಬ್ದುಲ್ ವದೂದ್‌‌ ಅವರು ತಾಲಿಬಾನ್‌ ವಿರೋಧಿ ಪಡೆಯ ವಕ್ತಾರ ಫಾಹಿಮ್‌ ದಷ್ಟಿ ಅವರೊಂದಿಗೆ ಹತ್ಯೆಯಾಗಿದ್ದರು.

ಇದನ್ನೂ ಓದಿ: ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

ಆದರೆ ತಾಲಿಬಾನ್ ಇಬ್ಬರನ್ನೂ ಕೊಂದಿರುವುದನ್ನು ನಿರಾಕರಿಸಿದ್ದು, ಬದಲಾಗಿ ಸಂಘರ್ಷದ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಕಾಬೂಲ್‌ನ ಈಶಾನ್ಯದಲ್ಲಿರುವ ಪಂಜ್‌ಶೀರ್ ಪ್ರಾಂತ್ಯವನ್ನು ತಾನು ವಶಪಡಿಸಿರುವುದಾಗಿ ಕಳೆದ ವಾರ ತಾಲಿಬಾನ್‌ ಹೇಳಿತ್ತು. ಆದರೆ ಅಲ್ಲಿನ ಕೆಲವು ಭಾಗಗಳಲ್ಲಿ ಇನ್ನೂ ಹೋರಾಟ ನಡೆಯುತ್ತಿದೆ.

ತಾಲಿಬಾನ್‌ ವಿರೋಧಿ ಪಡೆಗಳು ತಾಲಿಬಾನ್‌ನಿಂದ ಕೆಲವು ಪ್ರದೇಶಗಳನ್ನು ಮರು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದೆ. ಈ ಬಗ್ಗೆ ತಾಲಿಬಾನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ತಾಲಿಬಾನ್ ಪರ ಪಾಕ್‌ ಆರ್ಮಿ ದಾಳಿ ಎಂದು ವಿಡಿಯೊ ಗೇಮ್‌ ಕ್ಲಿಪ್‌ ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...