Homeಮುಖಪುಟಯುಪಿ - 68 ವರ್ಷದ ವೃದ್ಧೆಯನ್ನು ಥಳಿಸಿ ಕೊಂದ ದರೋಡೆಕೋರರು

ಯುಪಿ – 68 ವರ್ಷದ ವೃದ್ಧೆಯನ್ನು ಥಳಿಸಿ ಕೊಂದ ದರೋಡೆಕೋರರು

- Advertisement -
- Advertisement -

ದರೋಡೆ ನಡೆಸುವ ವೇಳೆ 68 ವರ್ಷದ ವೃದ್ಧೆಯನ್ನು ದರೋಡೆಕೋರರು ಥಳಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಮುಜೀಬ್‌ಪುರ ಗ್ರಾಮದಲ್ಲಿ ನಡೆದಿದೆ. ಇಷ್ಟೆ ಅಲ್ಲದೆ, ದುಷ್ಕರ್ಮಿಗಳು ವೃದ್ದೆಯ ಇಬ್ಬರು ಪುತ್ರರು ಮತ್ತು ಸೊಸೆಯನ್ನು ಕೂಡಾ ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೂವರು ಅಪರಿಚಿತರು ಈ ದರೋಡೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಯಮುನಾ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಫಿರೋಜಾಬಾದ್‌ನಲ್ಲಿ ಶಂಕಿತ ಡೆಂಗ್ಯೂಗೆ 45 ಮಕ್ಕಳು ಸೇರಿ 53 ಮಂದಿ ಬಲಿ

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೂವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಯಮುನಾ ಪ್ರಸಾದ್ ತಿಳಿಸಿದ್ದಾರೆ. ಇದರ ನಂತರ ಆರೋಪಿಗಳು ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ದರೋಡೆಕೋರರು ಹಲ್ಲೆ ನಡೆಸಿದ್ದ ವ್ಯಕ್ತಿಗಳನ್ನು ಶಿವಪ್ರಸಾದ್, ಅವರ ಪತ್ನಿ ಅಂಜು, ಅವರ ಕಿರಿಯ ಸಹೋದರ ಛೋಟೆಲಾಲ್ ಮತ್ತು ಅವರ ತಾಯಿ ಚಂದ್ರಾವತಿ (68) ಎಂದು ಗುರುತಿಸಲಾಗಿದೆ.

ಚಂದ್ರಾವತಿ ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಚಂದ್ರಾವತಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಥುರಾ-ವೃಂದಾವನ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ 22 ವಾರ್ಡ್‌ಗಳಲ್ಲಿ ಮದ್ಯ, ಮಾಂಸ ನಿಷೇಧ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ | Naanu Gauri

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ

0
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವು ತಮ್ಮ ಮಾಲೀಕತ್ವದಲ್ಲಿ ಇಲ್ಲ ಎಂದು ಬಿಬಿಎಂಪಿ ಹೇಳಿದ ನಂತರವೂ ಬಿಜೆಪಿ ಸರ್ಕಾರ ವಿವಾದವನ್ನು ಜೀವಂತವಾಗಿಡಲು ಶ್ರಮಿಸುತ್ತಿವೆ. ಇದೀಗ ಈದ್ಗಾ ಮೈದಾನವನ್ನು ಕಂದಾಯ ಭೂಮಿ ಎಂದು ಸರ್ಕಾರ ಹೇಳಿದೆ....