ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರ್ ಜಿಲ್ಲೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅದರ ಕಾರ್ಮಿಕನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಕಾರ್ಮಿಕ ಸಂಘಟನೆಯ ಹತ್ತು ಸದಸ್ಯರನ್ನು ಬಂಧಿಲಾಗಿದ್ದು, ಬುಧವಾರ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸ್ಯಾಮ್‌ಸಂಗ್ ಇಂಡಿಯಾ ಉತ್ಪಾದನಾ ಘಟಕದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಏಚೂರ್ ಗ್ರಾಮದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಟೆಂಟ್‌ಗಳನ್ನು ಬುಧವಾರ ಪೊಲೀಸರು ಕೆಡವಿದ್ದಾರೆ. ಆದರೆ, ಕಾರ್ಮಿಕರು ತೆರೆದ ಜಾಗದಲ್ಲಿ ಪ್ರತಿಭಟನೆ ಮುಂದುವರಿಸಿದ್ದು, ಪೊಲೀಸರು ಮತ್ತೊಂದು ಸುತ್ತಿನ ಬಂಧನಕ್ಕೆ ಮುಂದಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧವಾರ ಎಷ್ಟು ಜನರನ್ನು ಬಂಧಿಸಲಾಗಿದೆ ಅಥವಾ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲಎಂದು ಸ್ಕ್ರಾಲ್.ಕಾಂ ವರದಿ ಹೇಳಿದೆ. ಶ್ರೀಪೆರಂಬದೂರಿನಲ್ಲಿರುವ ಸ್ಯಾಮ್‌ಸಂಗ್ ಇಂಡಿಯಾ ಗೃಹೋಪಯೋಗಿ ಕಾರ್ಖಾನೆಯ ಬಹುತೇಕ ಕಾರ್ಮಿಕರು ಸೆಪ್ಟೆಂಬರ್ 9 ರಿಂದ ಮುಷ್ಕರ ನಡೆಸುತ್ತಿದ್ದಾರೆ. ಪ್ರಸ್ತುತ ಪ್ರತಿಭಟನೆಯು ಭಾರತದಲ್ಲಿ ಇತ್ತಿಚೆಗೆ ನಡೆಯುತ್ತಿರುವ ಅತಿದೊಡ್ಡ ಮುಷ್ಕರಗಳಲ್ಲಿ ಒಂದಾಗಿದೆ.
ಉತ್ತಮ ಕೆಲಸದ ಪರಿಸ್ಥಿತಿಗಳು, ಹೆಚ್ಚಿನ ವೇತನ ಮತ್ತು ಸ್ಯಾಮ್‌ಸಂಗ್ ಇಂಡಿಯಾ ತೊಳಿಲಾಲರ್ ಸಂಗಮ್ ಎಂಬ ತಮ್ಮ ಕಾರ್ಮಿಕ ಒಕ್ಕೂಟದ ಮಾನ್ಯತೆಗಾಗಿ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಕ್ಟೋಬರ್ 2 ರಂದು, 900 ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದರು.
ಅಕ್ಟೋಬರ್ 3ರಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಟ್ರೇಡ್ ಯೂನಿಯನ್ ಆಕ್ಟ್ ಅಡಿಯಲ್ಲಿ ಸ್ಯಾಮ್‌ಸಂಗ್ ಇಂಡಿಯಾ ತೊಳಿಲಾಲರ್ ಸಂಗಮ್ ಅನ್ನು ನೋಂದಾಯಿಸಲು ಕೋರಿ ಸಲ್ಲಿಸಿದ ಅರ್ಜಿಯನ್ನು ನಿರ್ಧರಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ.
ಸ್ಯಾಮ್‌ಸಂಗ್‌ನ ಶ್ರೀಪೆರಂಬದೂರ್ ಸ್ಥಾವರವು ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು ಮತ್ತು ವಾಷಿಂಗ್‌ಮಿಷನ್ ಯಂತ್ರಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುತ್ತದೆ. ಇದು ಭಾರತದಲ್ಲಿ ಸ್ಯಾಮ್‌ಸಂಗ್‌ನ ವಾರ್ಷಿಕ ಆದಾಯದ ಸರಿಸುಮಾರು ಮೂರನೇ ಒಂದು ಭಾಗದಷ್ಟು ಆರ್ಥಿಕ ವಹಿವಾಟು ಹೊಂದಿದೆ.
ಇದನ್ನೂಓದಿ: ಗುಜರಾತ್ | ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ; ವಾರದಲ್ಲಿ 2ನೇ ಘಟನೆ
ಸೆಪ್ಟೆಂಬರ್ 16 ರಂದು, ಪೊಲೀಸರು 104 ಮುಷ್ಕರ ನಿರತ ಕಾರ್ಮಿಕರನ್ನು ಕಾರ್ಖಾನೆಯಲ್ಲಿ ಸುಮಾರು ಒಂದು ದಿನ ಬಂಧಿಸಿದ್ದರು ಎಂದು ದಿ ಹಿಂದೂ ವರದಿ ಮಾಡಿದೆ. ಪ್ರತಿಭಟನೆಯು ಎರಡನೇ ತಿಂಗಳಿಗೆ ಪ್ರವೇಶಿಸುತ್ತಿದ್ದಂತೆ, ಬುಧವಾರದಂದು ಕಾರ್ಮಿಕರು ಸ್ಯಾಮ್‌ಸಂಗ್ ನೀಡಿದ ಪರಿಹಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಕಂಪನಿಯು ಕಾರ್ಮಿಕರಿಗೆ ಮಾರ್ಚ್ ವರೆಗೆ ಮಾಸಿಕ 5,000 ರೂ.ಗಳ ಪ್ರೋತ್ಸಾಹಧನ, ಹೆಚ್ಚಿನ ಹವಾನಿಯಂತ್ರಿತ ಬಸ್ಸುಗಳು, ವೈವಿಧ್ಯಮಯ ಕೆಫೆಟೇರಿಯಾ ಮೆನು ಮತ್ತು ಹೆರಿಗೆಯ ಸಂದರ್ಭದಲ್ಲಿ ಸುಮಾರು 2,000 ರೂ.ಗಳ ಉಡುಗೊರೆ ಕಾರ್ಡ್ ಅನ್ನು ನೀಡಿತ್ತು. ಆದರೆ ಸ್ಯಾಮ್‌ಸಂಗ್ ಇಂಡಿಯಾ ತೊಳಿಲಾಲರ್ ಸಂಗಮ್‌ಗೆ ಮಾನ್ಯತೆ ನೀಡಲು ಕಂಪನಿಯು ಯಾವುದೇ ಇಚ್ಛೆಯನ್ನು ತೋರಿಸದ ಕಾರಣ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕ ಸಂಘವು ಕಂಪೆನಿಯ ಪ್ರಸ್ತಾಪವನ್ನು ತಿರಸ್ಕರಿಸಿತು.
ಭಾನುವಾರದಂದು ರಾಜ್ಯ ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು ಸ್ಯಾಮ್‌ಸಂಗ್‌ನ ಆಡಳಿತವು “ಗಮನಾರ್ಹವಾದ ವೇತನ ಹೆಚ್ಚಳ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಂತೆ ತಮ್ಮ ಉದ್ಯೋಗಿಗಳು ಎತ್ತಿರುವ ಪ್ರಮುಖ ಬೇಡಿಕೆಗಳಿಗೆ ಸಮ್ಮತಿಸಿದೆ ಮತ್ತು ಉಳಿದ ಉದ್ಯೋಗಿಗಳು ಕೆಲಸಕ್ಕೆ ಮರಳಿದ ನಂತರ ಇತರ ಕೆಲವು ಬೇಡಿಕೆಗಳನ್ನು ಪರಿಗಣಿಸಲು ಸಹ ಒಪ್ಪಿಕೊಂಡಿದೆ” ಎಂದು ಹೇಳಿದ್ದರು.
ವಿಡಿಯೊ ನೋಡಿ: ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ಕಾದಂಬರಿ ಕುರಿತ ಚರ್ಚೆಯಲ್ಲಿ ಲೇಖಕಿ ದು.ಸರಸ್ವತಿ ಅವರ ಮಾತುಗಳು


