Homeಮುಖಪುಟಭ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ: ಪ್ರಧಾನಿಗೆ ನಟಿ ತನುಶ್ರೀ ದತ್ ಪ್ರಶ್ನೆ

ಭ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ: ಪ್ರಧಾನಿಗೆ ನಟಿ ತನುಶ್ರೀ ದತ್ ಪ್ರಶ್ನೆ

- Advertisement -
- Advertisement -

ಭ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ ಎಂದು ಬಾಲಿವುಡ್ ನಟಿ ತನುಶ್ರೀ ದತ್ ಪ್ರಧಾನಿ ಮೋದಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದಾರೆ. ತನುಶ್ರೀ ದತ್, ಬಾಲಿವುಡ್ ನಟ ನಾನಾ ಪಾಟೇಕರ್ ತಮ್ಮ ಮೇಲೆ ಲೈಗಿಂಕ ದೌರ್ಜನ್ಯ ಮಾಡಿದ್ದಾರೆಂದು ಮೀ ಟೂ ಅಡಿ ಪ್ರಕರಣ ದಾಖಲಿಸಿದ್ದರು. ಈ ಆರೋಪ ದುರುದ್ದೇಶದಿಂದ ಕೂಡಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳು ಇಲ್ಲ ಎಂದು ಪೊಲೀಸರು ಕೇಸ್ ಕೈಬಿಟ್ಟಿದ್ದು, ತನುಶ್ರೀ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ.

ಪ್ರಧಾನಿ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆಯೇ ತಮ್ಮ ಆಧ್ಯ ಗುರಿಯೆಂದು ಹೇಳಿದ್ದರು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಮಾಧ್ಯಮಗಳೂ ಬಿಂಬಿಸಿದ್ದವು. ಮೋದಿಯವರ ಭ್ರಷ್ಟಾಚಾರ ವಿರೋಧಿ ಕೆಲಸಗಳನ್ನು ನೋಡಿದ್ದ ನಟಿ ತಮ್ಮ ಪ್ರಕರಣದಲ್ಲಿ ಅದನ್ನು ನೆನಪಿಸಿಕೊಂಡಿದ್ದಾರೆ. ಅದರಂತೆ ತಮ್ಮ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ಪೊಲೀಸರು ತಮ್ಮ ಎಫ್‍ಐಆರ್ ಅನ್ನು ತಿರುಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಭ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ? ಉತ್ತರಿಸಿ ಮೋದೀಜಿ ಎಂದು ಪ್ರಶ್ನೆ ಕೇಳಿದ್ದಾರೆ.

2008ರಲ್ಲಿ ನಿರ್ಮಾಣಗೊಂಡ ‘ಹಾರ್ನ್ ಓಕೆ ಪ್ಲೀಸ್’ ಸಿನಿಮಾದ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕಳ ನೀಡಲಾಗಿತ್ತು ಎಂದು ತನುಶ್ರೀ ಹೇಳಿದ್ದಾರೆ. ಈ ಬಗ್ಗೆ 2018ರ ಅಕ್ಟೋಬರ್‍ನಲ್ಲಿ ಎಫ್‍ಐಆರ್ ದಾಖಲಿಸಿದ್ದೆ. ಅಲ್ಲದೆ 2008ರಲ್ಲಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘಕ್ಕೂ ದೂರು ನೀಡಿದ್ದೆ. ಸಂಘ ಕ್ಷಮೆ ಕೂಡ ಕೇಳಿತ್ತು. ಆದರೆ ಆದರೆ ಪೋಲಿಸರು ಆರೋಪಿಯನ್ನು ರಕ್ಷಿಸಲು ಎಫ್‍ಐಆರ್ ಅನ್ನೇ ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.

ಹೆಣ್ಣುಮಗಳೊಬ್ಬಳಿಗೆ ಅಪರಾಧಿಯಿಂದ ಸರಣಿ ದೌರ್ಜನ್ಯ ನಡೆಸಿದೆ. ಸಾರ್ವಜನಿಕ ಸ್ಥಳಗಳಲ್ಲಿಯೇ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಸಾಕ್ಷಾ ಕೊರತೆ ಎಂದು ಹೇಳುತ್ತಿದ್ದಾರೆ. ಇದೇನಾ ರಾಮರಾಜ್ಯ? ಈ ದೇಶದಲ್ಲಿ ಯಾವಾಗಲೂ ಅಧರ್ಮವೇ ಗೆಲ್ಲುತ್ತದಯೇ? ಉತ್ತರ ಕೊಡಿ ಮೋದಿಜೀ ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...