Homeಕರ್ನಾಟಕಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್‌ಐ ಮುಗಿಸಲು ಬಿಜೆಪಿ ಶತಪ್ರಯತ್ನ

ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್‌ಐ ಮುಗಿಸಲು ಬಿಜೆಪಿ ಶತಪ್ರಯತ್ನ

- Advertisement -
- Advertisement -

ಫರಾನ್ ಖಾನ್ ಎಂಬ 24ರ ಹರೆಯದ ಯುವಕನೋರ್ವ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚಾಕುವಿನಿಂದ ಚುಚ್ಚುವ ಮೂಲಕ ಕೊಲ್ಲುವ ಯತ್ನ ಮಾಡಿದ್ದಾನೆ. ನವೆಂಬರ್ 17ರ ಭಾನುವಾರ ತಡರಾತ್ರಿ ಮೈಸೂರಿನಲ್ಲಿ ಘಟನೆ ನಡೆದಿದ್ದು ಗಂಭೀರ ಗಾಯಗಳಾದ ತನ್ವೀರ್ ಸೇಠ್ ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಘಟನೆ ನಡೆದ ಮಾರನೆಯ ದಿನದಿಂದಲೇ ಎಂದಿನಂತೆ ಆ ಯುವಕ ಕೊಲೆ ಮಾಡಲು ಮುಂದಾಗಿದ್ದು ಏಕೆ ಎನ್ನುವುದರ ಕುರಿತು ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ಕೇಳಿಬರುತ್ತಿವೆ. ಪೊಲೀಸ್ ತನಿಖೆ ನಡೆಯುತ್ತಿದ್ದು ಹತ್ತಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಏನನ್ನೂ ಇನ್ನು ಖಚಿತಪಡಿಸಿಲ್ಲ. ಆದರೆ ರಾಜಕೀಯ ಮುಖಂಡರು ಮಾತ್ರ ತಮ್ಮ ಊಹೆಗಳನ್ನೇ ಸತ್ಯವೆನ್ನುವ ಹಾಗೆ ಹರಿಯಬಿಟ್ಟಿದ್ದಾರೆ.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಲೆಯತ್ನವನ್ನು ಸೀದಾ ಪಿಎಫ್‍ಐ ಸಂಘಟನೆಯ ತಲೆಗೆ ಕಟ್ಟಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‍ಐ ಮೇಲಿದ್ದ ಎಲ್ಲಾ ಕೇಸುಗಳನ್ನು ವಾಪಸ್ ಪಡೆದರು. ಮೈಸೂರು, ಶಿವಮೊಗ್ಗ ಗಲಭೆಯಾಯಿತು. ಒಂದು ಕೊಲೆಯಾಯಿತು. ಈಗ ತನ್ವೀರ್ ಸೇಠ್ ಮಾರಣಾಂತಿಕ ಹಲ್ಲೆಯಾಗಿದೆ. ಕೊಲೆ ಗೂಂಡಾಗಿರಿ ಮಾಡಿದ ಪಿಎಫ್‍ಐಗೆ ರಕ್ಷಣೆ ಕೊಟ್ಟು ಅವರ ಮೇಲಿದ್ದ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುವ ಮೂಲಕ ನೀವು ಅವರಿಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದೀರಿ, ಇದಕ್ಕೆ ಸ್ಪಷ್ಟೀಕರಣ ನೀಡಿ ಎಂದು ಏಕಕಾಲಕ್ಕೆ ಪಿಎಫ್‍ಐ ಅನ್ನು, ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಗುಂಡು ಹೊಡೆದಿದ್ದಾರೆ.

ಅದನ್ನೇ ಕಾದು ಕುಳಿತಿದ್ದ ಟಿವಿವಾಹಿನಿಗಳು ಪಿಎಫ್‍ಐ ಬ್ಯಾನ್ ಮಾಡಬೇಕು ಎಂಬ ಬೊಂಬಡ ಬಜಾಯಿಸಲು ಶುರುಮಾಡಿದ್ದಾರೆ. ಪಿಎಫ್‍ಐ ಮೇಲೆ ಸಾಕಷ್ಟು ದೂರುಗಳಿವೆ, ಚಾರ್ಜ್‍ಶೀಟ್ ಇವೆ ಎಂದೆಲ್ಲಾ ಮಾತಾಡಿ ಅದಕ್ಕೂ ಐಸಿಸ್‍ಗೂ ಲಿಂಕ್ ಮಾಡಲು ಹೊರಟಿದ್ದಾರೆ. ಅಯೋಧ್ಯೆ ತೀರ್ಪನ್ನು ತನ್ವೀರ್ ಸೇಠ್ ಸ್ವಾಗತಿಸಿದ್ದರು. ಅದಕ್ಕಾಗಿ ಪಿಎಫ್‍ಐ ಕಾರ್ಯಕರ್ತ ಅವರ ಮೇಲೆ ಕೊಲೆಯತ್ನ ನಡೆಸಿದ್ದಾನೆ ಎಂದೂ ಹೇಳಿಬಿಟ್ಟರು.

ವಾಸ್ತವ ಸಂಗತಿಗಳನ್ನು ಅವಲೋಕಿಸಿದರೆ ಈ ಕೊಲೆಗೆ ಪಿಎಫ್‍ಐ ಕಾರಣವಿದ್ದಂತೆ ಕಾಣುತ್ತಿಲ್ಲ. ಏಕೆಂದರೆ ಯಾವುದೇ ಕೊಲೆ ಮಾಡಬೇಕಾದರೆ ಅದರಿಂದ ಅವರಿಗೆ ಲಾಭವಾಗಬೇಕು. ಹಾಗಾದಾಗ ಅಂತಹ ಯತ್ನ ಮಾಡುತ್ತಾರೆ ಎನ್ನಬಹುದು. ಸದ್ಯ ತನ್ವೀರ್ ಸೇಠ್‍ರವರನ್ನು ಪಿಎಫ್‍ಐನ ಚುನಾವಣಾ ವೇದಿಕೆಯಾದ ಎಸ್‍ಡಿಪಿಐ ರಾಜಕೀಯವಾಗಿ ಎದುರಿಸಲು ಹೊರಟಿದೆ. ಇಂತಹ ಸಂದರ್ಭದಲ್ಲಿ ಅವರ ಕೊಲೆ ಅಥವಾ ಅವರ ಮೇಲಿನ ಹಲ್ಲೆಯಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಿರುವಾಗ ಅವರೇಕೆ ಕೊಲ್ಲಲು ಹೋಗುತ್ತಾರೆ ಎಂಬುದು ನರಸಿಂಹರಾಜ ಕ್ಷೇತ್ರದ ಜನರ ಮಾತು.

ಇನ್ನು ಕೊಲೆಯತ್ನದ ಆರೋಪಿ ಫರಾನ್ ಖಾನ್ ತನ್ವೀರ್ ಸೇಠ್‍ಗೂ ಆಪ್ತ, ಎಸ್‍ಡಿಪಿಐಗೂ ಆಪ್ತ. ಜೊತೆಗೆ ಜೆಡಿಎಸ್‍ಗೂ ಆಪ್ತನೆಂದರೆ ಇವರಲ್ಲಿ ಯಾರು ಕಾಸು ಕೊಟ್ಟರೂ ಸಹ ಅವರ ಕಾರ್ಯಕ್ರಮಗಳಿಗೆ ಜನ ಕರೆದುಕೊಂಡು ಹೋಗುವುದು ಅವನ ಕಾಯಕ. ಆತ ಪಿಎಫ್‍ಐ ಕಾರ್ಯಕ್ರಮ ದಲ್ಲಿದ್ದ ಫೋಟೋಗಳು ಹೊರ ಬೀಳುತ್ತಿದ್ದಂತೆ, ಪಿಎಫ್‍ಐ ಸ್ವತಃ ತನ್ವೀರ್ ಸೇಠ್‍ರೊಂದಿಗೇ ಆತನಿರುವ ಫೋಟೋಗಳನ್ನು ಹೊರಬಿಟ್ಟಿತು. ಹೀಗಿರುವಾಗ ತನಗೊಂದು ಉದ್ಯೋಗ ಕೊಡಿ ಎಂದು ಪದೇ ಪದೇ ಗೆದ್ದ ತನ್ವೀರ್ ಸೇಠ್ ಬಳಿ ದುಂಬಾಲು ಬಿದ್ದಿದ್ದ ಎನ್ನಲಾಗುತ್ತಿದೆ. ಅವರು ಸೂಕ್ತ ಉದ್ಯೋಗ ಕೊಡಿಸಿಲ್ಲ. ಅದೇ ಸಮಯಕ್ಕೆ ತಾನು ಸೆಲೆಬ್ರಿಟಿಗಳನ್ನು ಕೊಲ್ಲುವ ಮೂಲಕ ಫೇಮಸ್ ಆಗಬೇಕು ಎಂದು ತನ್ನ ಗೆಳೆಯರೊಂದಿಗೆ ಆಗಾಗ ಹೇಳಿಕೊಳ್ಳುತ್ತಿದ್ದ ಎಂದೂ ವರದಿಗಳು ಬಂದಿವೆ. ಹಾಗೆ ನೋಡಿದರೆ ಈತ ಹತಾಶ ವ್ಯಕ್ತಿಯಂತೆ ಕಂಡುಬರುತ್ತಾನೆ. ಇಂತಹ ಸ್ಥಿಮಿತತೆ ಇಲ್ಲದವ ಮಾಡಿದ ಆ ಒಂದು ಯತ್ನ ಈಗ ನೂರಾರು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಸ್ವತಃ ಆತನು ಭಾವಿಸಿರಲಿಲ್ಲವೇನೋ?

ಪಿಎಫ್‍ಐ ಬ್ಯಾನ್ ಸಾಧ್ಯವೇ?

ಪಿಎಫ್‍ಐ, ಎಸ್‍ಡಿಪಿಐ ಮೇಲೆ ಕೇಸುಗಳಿಲ್ಲವೇನೆಂದಲ್ಲ. ಅವರು ಹಿಂಸೆಗಿಳಿದಿದ್ದಾರೆ ಎಂದು ಮಂಗಳೂರು, ಕೇರಳದಲ್ಲಿ ಪದೇ ಪದೇ ಆರೋಪಗಳು ಬರುವುದು ನಿಜ. ಹಾಗೆಂದ ಮಾತ್ರಕ್ಕೆ ಸಂಘಟನೆಯೊಂದನ್ನು ಬ್ಯಾನ್ ಮಾಡಲು ಸಾಧ್ಯವೇ? ಸಹಜವಾಗಿ ಚರ್ಚೆ ಆರೆಸ್ಸೆಸ್‍ನತ್ತ ಹೊರಳುತ್ತದೆ. ಆರ್‍ಎಸ್‍ಎಸ್ ಮೇಲೆ ಎಷ್ಟು ಕೇಸುಗಳಿಲ್ಲ? ಅದು ಕೂಡ ಮೂರು ಬಾರಿ ಬ್ಯಾನ್ ಆಗಿದೆ ಮತ್ತು ಕಡೆಯ ಬಾರಿ ಕೋರ್ಟ್‍ನಲ್ಲಿ ಅದನ್ನು ಹಿಂಪಡೆಯಲಾಯಿತು. ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ ಅದು ಇನ್ನೊಂದು ಹೆಸರಿನಲ್ಲಿ ತಲೆಎತ್ತುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು?

ಮೊನ್ನೆ ನಡೆದ ಮಂಗಳೂರು ಸ್ಥಳೀಯ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿದ್ದಲ್ಲದೇ ಹಲವೆಡೆ ಪೈಪೋಟಿ ನೀಡಿದೆ. ತನ್ವೀರ್ ಸೇಠ್‍ರವರು ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರದಲ್ಲಿಯೂ ಸಹ ಅದು ಕೆಲವೊಮ್ಮೆ ಎರಡನೇ ಸ್ಥಾನಕ್ಕೆ ಬಂದು ನಿಂತಿದ್ದಿದೆ. ಇನ್ನು ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆಯೂ ಮುಸ್ಲಿಂ ಮತಗಳ ವಿಚಾರದಲ್ಲಿ ಪೈಪೋಟಿ ಇದೆ. ಕಾಂಗ್ರೆಸ್ ಪಾಲಿಗಿದ್ದ ಮುಸ್ಲಿಂ ಮತಗಳಲ್ಲಿ ಒಂದಷ್ಟು ಪಾಲನ್ನು ಎಸ್‍ಡಿಪಿಐ ಪಡೆದುಕೊಳ್ಳುವ ಮೂಲಕ ಬಿಜೆಪಿ ಗೆಲುವಿಗೆ ಎಸ್‍ಡಿಪಿಐ ಕಾರಣವಾಗಿವೆ ಎಂದು ಕಾಂಗ್ರೆಸ್ ಆರೋಪಿಸಿದ್ದಿದೆ. ಸಿಪಿಎಂ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಎಸ್‍ಡಿಪಿಐ ಅನ್ನು ವಿರೋಧಿಸುತ್ತವೆ.

ಅವೆಲ್ಲಾ ಚರ್ಚೆಗಳು ಈ ಸಂದರ್ಭದಲ್ಲಿ ಮತ್ತೊಮ್ಮೆ ಮೇಲೆದ್ದಿವೆಯಾದರೂ, ಕೊಲೆಗೆ ಪಿಎಫ್‍ಐ ಕಾರಣವಿರಬಹುದೆಂಬ ತರ್ಕವನ್ನು ಬಹುತೇಕರು ಒಪ್ಪುತ್ತಿಲ್ಲ. ನಿಷ್ಪಕ್ಷಪಾತ ತನಿಖೆಯಷ್ಟೇ ಸತ್ಯವನ್ನು ಹೊರತರಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...