ಮಧ್ಯ ಮತ್ತು ದಕ್ಷಿಣ ಏಷ್ಯಾದೊಂದಿಗೆ ವ್ಯವಹರಿಸುವ ಹಿರಿಯ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ರಾಜತಾಂತ್ರಿಕ, ಆಲಿಸ್ ಜಿ ವೆಲ್ಸ್ ಅವರು ಕೋವಿಡ್ 19 ಅನ್ನು ಬಳಸಿ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಅವರು ಟ್ವೀಟ್‌ನಲ್ಲಿ, “ಯಾವುದೇ ಸಮಯದಲ್ಲಿ ಹಾಗೂ ಯಾವುದೇ ಸ್ಥಳದಲ್ಲಿ ಜನಾಂಗೀಯ ಅಥವಾ ಧಾರ್ಮಿಕ ಅಲ್ಪಸಂಖ್ಯಾತರನ್ನು ಕಳಂಕಿತಗೊಳಿಸುವುದು ಸ್ವೀಕಾರಾರ್ಹವಲ್ಲ. ಕೊವಿಡ್ 19 ರ ಆತಂಕ ಮತ್ತು ಭಯ ನಮ್ಮನ್ನು ವಿಭಜಿಸಲು ಬಿಡಬಾರದು …” ಎಂದು ಬರೆದಿದ್ದಾರೆ.
ಲಾರ್ಜ್ ಫಾರ್ ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಂ ಇದರ ಅಮೆರಿಕಾ ರಾಯಭಾರಿ ಸ್ಯಾಮ್ ಬ್ರೌನ್ಬ್ಯಾಕ್ ಭಾರತದಲ್ಲಿ ‘ಕರೋನಾ ಜಿಹಾದ್’ ಹ್ಯಾಶ್‌ಟ್ಯಾಗ್ ಟ್ರೆಂಡ್ “ದುರದೃಷ್ಟಕರ” ಎಂದು ಹೇಳಿದ್ದಾರೆ.
“ಸರ್ಕಾರಗಳು ತಪ್ಪು ಮಾಡುತ್ತಿದೆ. ಸರ್ಕಾರಗಳು ಇದನ್ನು ನಿಯಂತ್ರಿಸಬೇಕು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಕೊರೊನ ವೈರಸ್‌ನ ಮೂಲವಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು” ಎಂದು ಅವರು ಹೇಳಿದ್ದರು.
ಸರ್ಕಾರದ ಮೇಲೆ ಹೊಣೆಗಾರಿಕೆಯನ್ನು ಹೇರುತ್ತಿರುವಾಗ, “ಆತಿಥೇಯ ಸರ್ಕಾರಗಳು ಅದನ್ನು ಆಕ್ರಮಣಕಾರಿಯಾಗಿ ಹಿಂದಕ್ಕೆ ತಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು. ಆದರೆ ಈ ವಿಷಯದ ಬಗ್ಗೆ ಅವರು ಇನ್ನೂ ಭಾರತೀಯ ಅಧಿಕಾರಿಗಳೊಂದಿಗೆ ಯಾವುದೇ ನಿರ್ದಿಷ್ಟ ಸಂಭಾಷಣೆ ನಡೆಸಿಲ್ಲ ಎಂದು ಅವರು ಹೇಳಿದರು.
ಮಾರ್ಚ್ ಮೊದಲಾರ್ಧದಲ್ಲಿ ಧಾರ್ಮಿಕ ಸಭೆ ನಡೆದ ದೆಹಲಿಯ ನಿಜಾಮುದ್ದೀನ್‌ನಿಂದ ಕೋವಿಡ್ -19 ರ ಹರಡುವಿಕೆ ವರದಿಯಾದ ನಂತರ, ಈ ಘಟನೆಯಲ್ಲಿ ಭಾಗವಹಿಸಿದ ತಬ್ಲೀಘಿ ಜಮಾಅತ್ ಸದಸ್ಯರ ವಿರುದ್ಧ ಮಾತ್ರವಲ್ಲದೆ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆಯನ್ನಾಗಹಿ ಮಾಡಲಾಗುತ್ತಿದೆ.
ದೇಶದಲ್ಲಿ ಮುಸ್ಲಿಂ ಸಮುದಾಯವು ಉದ್ದೇಶಪೂರ್ವಕವಾಗಿ ಕೋವಿಡ್ -19 ಅನ್ನು ಹರಡುತ್ತಿದೆ ಎನ್ನುವಂತೆ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಎಷ್ಟರಮಟ್ಟಿಗೆಂದರೆ, ಸ್ವತಃ ಪೊಲೀಸರೇ ಮಾಧ್ಯಮಗಳಿಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡದಿರಿ ಎಂದು ಹೇಳತೊಡಗಿದೆ.


