ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿಗಾಗಿ ನಡೆದ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾರತೀಯ ತಂಡವು ಜರ್ಮನಿ ವಿರುದ್ದ 5-4 ಅಂತರದಲ್ಲಿ ಗೆದ್ದು ಕೊಂಡಿತ್ತು. ಈ ಮೂಲಕ ಭಾರತೀಯ ತಂಡವು ಕಳೆದ 41 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿದೆ. 1980 ರ ಮಾಸ್ಕೋ ಕ್ರೀಡಾಕೂಟದಲ್ಲಿ ಭಾರತವು ಕೊನೆಯ ಬಾರಿಗೆ ಹಾಕಿಯಲ್ಲಿ ಪದಕ ಗೆದ್ದಿತ್ತು.
ಮಹಿಳೆಯರ ಹಾಕಿಯಲ್ಲೂ ಭಾರತೀಯ ತಂಡ ಉತ್ತಮ ಪ್ರದರ್ಶನ ನೀಡಿದೆ. ಒಲಿಂಪಿಕ್ ಇತಿಹಾಸದಲ್ಲೇ ಭಾರತದ ಮಹಿಳಾ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿದೆ. ಆದರೆ ಪದಕ ಗೆಲ್ಲಲು ವಿಫಲವಾಗಿ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಕೊಂಡಿದೆ.
ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್
ಭಾರತದ ಮಹಿಳೆ ಮತ್ತು ಪುರುಷರ ಹಾಕಿ ತಂಡಗಳು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ, ಹಾಕಿಯಲ್ಲಿ ಭಾರತವು ಮತ್ತೆ ಪುಟಿದೆದ್ದು ಬಂದಿದ್ದಕ್ಕೆ ಭಾರಿ ಹರ್ಷ ವ್ಯಕ್ತವಾಗುತ್ತಿದೆ. ಅದರಲ್ಲೂ ವನಿತಾ ತಂಡಕ್ಕೆ ಭಾರತದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆ ಸುರಿದಿದೆ.
ಈ ಮಧ್ಯೆ ಭಾರತದ ಪುರುಷರ ತಂಡದ ಗೋಲ್ ಕೀಪರ್ ಶ್ರೀಜೇಶ್ ಪಿಆರ್ ಅವರು ಟ್ವಿಟರ್‌ನಲ್ಲಿ ಒಂದು ಚಿತ್ರವನ್ನು ಫೋಸ್ಟ್ ಮಾಡಿದ್ದು, ಈ ಪದಕ ಉಪ್ಪುಪ್ಪಾಗಿದೆ, ಯಾಕೆಂದರೆ ಇದು ನನ್ನ 21 ವರ್ಷಗಳ ಬೆವರಿನ ಫಲ ಎಂದು ಅವರು ಹೇಳಿದ್ದಾರೆ, ಈ ಮೂಲಕ ಅವರು ನೆಟ್ಟಿಗರ ಮನಗೆದ್ದಿದ್ದಾರೆ.
ಅವರು ತನ್ನ ಟ್ವೀಟ್‌ನಲ್ಲಿ ಒಲಿಂಪಿಕ್ ಪದಕವನ್ನು ಕಚ್ಚುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, “ಹೌದು, ಇದು ಉಪ್ಪಿನ ರುಚಿಯಿದೆ. ಹೌದು… ನನಗೆ ನೆನಪಿದೆ, ಇದು ಕಳೆದ 21 ವರ್ಷಗಳ ನನ್ನ ಬೆವರು” ಎಂದು ಬರೆದಿದ್ದಾರೆ.
Yeah ….. it’s taste salty,
Yeah …. I remember, it’s my sweat ? from last 21 years ?#medalist #olympic #games #olympicgames2020 #tokyo pic.twitter.com/szAyEeJEWV
— sreejesh p r (@16Sreejesh) August 5, 2021
ಕಂಚಿನ ಪದಕಕ್ಕಾಗಿ ಆಡಿದ ಪಂದ್ಯದಲ್ಲಿ, ಪಂದ್ಯವು ಮುಗಿಯಲು ಆರು ಸೆಕೆಂಡುಗಳು ಬಾಕಿ ಇರುವಾಗ, ಜರ್ಮನಿ ತಂಡವು ಪೆನಾಲ್ಟಿ ಕಾರ್ನರ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಪಿಆರ್ ಶ್ರೀಜೇಶ್ ಅದನ್ನು ತಡೆದು ಭಾರತವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು.
ಕೇರಳ ಮೂಲದವರಾದ ಶ್ರೀಜೇಶ್ ಈ ಪಂದ್ಯದಲ್ಲಿ ಒಟ್ಟು ಒಂಬತ್ತು ಗೋಲ್‌ಗಳನ್ನು ತಡೆದು ಭಾರತದ ಗೆಲುವಿಗೆ ನೆರವಾಗಿದ್ದಾರೆ.
ಇದನ್ನೂ ಓದಿ: 41 ವರ್ಷಗಳ ಕಾಯುವಿಕೆ ಅಂತ್ಯ | ಕೊನೆಗೂ ಪದಕಕ್ಕೆ ಮುತ್ತಿಟ್ಟ ಭಾರತೀಯ ಹಾಕಿ ತಂಡ!
ಗೋಲ್ ಪೋಸ್ಟೇ ನನ್ನ ದೇಗುಲ ಎಂದಿದ್ದ ಶ್ರೀಜೇಶ್, ಪದಕವನ್ನು ತನ್ನ ತಂದೆಗೆ ಅರ್ಪಿಸಿದ್ದಾರೆ. ಟ್ವಿಟರ್‌ನಲ್ಲಿ ಅವರ ತಂದೆ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೊವನ್ನು ಅಪ್‌ಲೋಡ್ ಮಾಡಿರುವ ಶ್ರೀಜೇಶ್, “ಈ ಪದಕ ನನ್ನ ತಂದೆಗೆ. ನಾನೀಗ ಇಲ್ಲಿ ಇರಲು ಅವರೇ ಕಾರಣ, ಅವರು ನನ್ನ ಹೀರೋ” ಎಂದು ಬರೆದಿದ್ದಾರೆ.
This medal is for you my achaaan ( father )
My hero, he is why I’m here pic.twitter.com/1OdO5eZwaw
— sreejesh p r (@16Sreejesh) August 5, 2021
ಇದನ್ನೂ ಓದಿ: ಹಾಕಿ ಮಹಿಳಾ ತಂಡದ 9 ಆಟಗಾರರಿಗೆ ತಲಾ 50 ಲಕ್ಷ ನೀಡುವುದಾಗಿ ಹರಿಯಾಣ ಘೋಷಣೆ


