Homeಕ್ರೀಡೆಒಲಂಪಿಕ್41 ವರ್ಷಗಳ ಕಾಯುವಿಕೆ ಅಂತ್ಯ | ಕೊನೆಗೂ ಪದಕಕ್ಕೆ ಮುತ್ತಿಟ್ಟ ಭಾರತೀಯ ಹಾಕಿ ತಂಡ!

41 ವರ್ಷಗಳ ಕಾಯುವಿಕೆ ಅಂತ್ಯ | ಕೊನೆಗೂ ಪದಕಕ್ಕೆ ಮುತ್ತಿಟ್ಟ ಭಾರತೀಯ ಹಾಕಿ ತಂಡ!

- Advertisement -
- Advertisement -

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿಗಾಗಿ ನಡೆದ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾರತೀಯ ತಂಡವು ಜರ್ಮನಿ ವಿರುದ್ದ 5-4 ಅಂತರದಲ್ಲಿ ಗೆದ್ದು ಕೊಂಡಿತು. ಈ ಮೂಲಕ ಭಾರತೀಯ ತಂಡವು ಕಳೆದ 41 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿತು.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತವು ಬೆಲ್ಜಿಯಂ ವಿರುದ್ದ 2-5 ಅಂತರದಲ್ಲಿ ಸೋಲುಂಡು ಚಿನ್ನದ ಕನಸನ್ನು ಕೈಬಿಟ್ಟಿತ್ತು. 1980 ರಲ್ಲಿ ಮಾಸ್ಕೋ ಕ್ರೀಡಾಕೂಟದಲ್ಲಿ ಭಾರತವು ಕೊನೆಯ ಬಾರಿಗೆ ಹಾಕಿಯಲ್ಲಿ ಪದಕ ಗೆದ್ದಿತ್ತು.

ಇದನ್ನೂ ಓದಿ: ಜಾವಲಿನ್ ಥ್ರೋ: 86.65 ಮೀ ದೂರ ಎಸೆದು ಮೊದಲಿಗರಾಗಿ ಫೈನಲ್ ತಲುಪಿದ ಭಾರತದ ನೀರಜ್!

ಸಿಮ್ರಂಜಿತ್ ಸಿಂಗ್ ಎರಡು ಗೋಲ್‌ ಮತ್ತು ಹಾರ್ದಿಕ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಲಾ ಒಂದೊಂದು ಗೋಲ್‌ ದಾಖಲಿಸಿದರು. ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಜರ್ಮನಿಯ ತೈಮೂರ್ ಒರುಜ್ ಗೋಲು ಗಳಿಸುವುದರೊಂದಿಗೆ ಜರ್ಮನಿ ತಂಡವು ಆರಂಭಿಕ ಮುನ್ನಡೆ ಸಾಧಿಸಿತ್ತು.

ಸಿಮ್ರಂಜಿತ್ ಸಿಂಗ್ ಆಟದ 17 ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಭಾರತದ ಅಂಕವನ್ನು 1-1 ಕ್ಕೆ ಏರಿಸಿದರು. ಆದಾಗ್ಯೂ ಎರಡನೆ ಕ್ವಾರ್ಟರ್‌ನಲ್ಲಿ ಜರ್ಮನಿ ಮತ್ತೆ ಎರಡು ಗೋಲುಗಳನ್ನು ಗಳಿಸಿ 3-1 ಮುನ್ನಡೆ ಸಾಧಿಸಿತು.

ಎರಡನೇ ಕ್ವಾರ್ಟರ್‌‌ನಲ್ಲಿ ಹಾರ್ದಿಕ್ ಸಿಂಗ್‌ ಮತ್ತು ಹರ್ಮನ್‌ಪ್ರೀತ್ ಸಿಂಗ್ ಮತ್ತೊಮ್ಮೆ ಭಾರತಕ್ಕೆ ತಲಾ ಒಂದೊಂದು ಗೋಲ್‌ ನೀಡುವುದರೊಂದಿಗೆ ತಂಡವನ್ನು 3-3 ಕ್ಕೆ ತಂದು ಸಮಬಲ ಗೊಳಿಸಿದರು.

ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ

ಮೂರನೆಯ ಕ್ವಾರ್ಟರ್‌‌ನಲ್ಲಿ ರುಪಿಂದರ್ ಪಾಲ್ ಸಿಂಗ್ ತನ್ನ ಪೆನಾಲ್ಟಿ ಸ್ಟ್ರೋಕ್ ನಲ್ಲಿ ಭಾರತಕ್ಕೆ 4-3 ಮುನ್ನಡೆಯ ಗೋಲ್ ದಾಖಲಿಸಿದರು ನೀಡಿದರು. ನಂತರ ಸಿಮ್ರಂಜಿತ್ ಸಿಂಗ್ ಪಂದ್ಯದ ಎರಡನೇ ಗೋಲು ಗಳಿಸಿ ಭಾರತಕ್ಕೆ 5-3 ಮುನ್ನಡೆ ತಂದುಕೊಟ್ಟರು.

ಜರ್ಮನಿ ಅಂತಿಮ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಒಂದು ಗೋಲ್ ಪಡೆಯಲು ಯಶಸ್ವಿಯಾಯಿತು. ಆದಾಗ್ಯೂ, ಭಾರತೀಯ ಆಟಗಾರರು ಸಮರ್ಥವಾಗಿ ಜರ್ಮನಿಯನ್ನು ಎದುರಿಸಿ ಒಂದು ಅಂಕಗಳ ಮುನ್ನಡೆಯನ್ನು ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾದರು.

ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ, ಜರ್ಮನಿಗೆ ಪೆನಾಲ್ಟಿ ಕಾರ್ನರ್‌ ಪಡೆಯುವಲ್ಲಿ ಯಶಸ್ವಿಯಾದರೂ, ಗೋಲಿ ಪಿಆರ್ ಶ್ರೀಜೇಶ್ ಅದನ್ನು ತಡೆದು ಭಾರತವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಶ್ರೀಜೇಶ್‌‌ ಪಂದ್ಯದಲ್ಲಿ ಒಟ್ಟು ಒಂಬತ್ತು ಗೋಲ್‌ಗಳನ್ನು ತಡೆದು ಗೆಲುವಿಗೆ ನೆರವಾಗಿ ಭಾರತದ 41 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದರು.

ಮತ್ತೊಂದು ಕಡೆ ಭಾರತದ ಮಹಿಳಾ ಹಾಕಿ ತಂಡವು ಬುಧವಾರ ನಡೆದಿದ್ದ ಸೆಮಿಫೈನಲ್‌‌ನಲ್ಲಿ ಅರ್ಜೆಂಟೀನಾ ವಿರುದ್ದ 1-2 ಅಂತರದಲ್ಲಿ ಸೋಲುಂಡಿತ್ತು. ಮಹಿಳಾ ತಂಡವು ಶುಕ್ರವಾರ (ನಾಳೆ) ಗ್ರೇಟ್‌ ಬ್ರಿಟನ್‌ ತಂಡದ ವಿರುದ್ದ ಕಂಚಿಗಾಗಿ ಆಡಲಿದೆ.

ಇದನ್ನೂ ಓದಿ: ಒಲಂಪಿಕ್ ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆ: ಮೂರು ಪದಕ ಜಮೈಕಾ ಪಾಲಿಗೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...