Homeಕ್ರೀಡೆಒಲಂಪಿಕ್ಒಲಂಪಿಕ್ ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆ: ಮೂರು ಪದಕ ಜಮೈಕಾ ಪಾಲಿಗೆ!

ಒಲಂಪಿಕ್ ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆ: ಮೂರು ಪದಕ ಜಮೈಕಾ ಪಾಲಿಗೆ!

- Advertisement -
- Advertisement -

ಒಲಂಪಿಕ್ ಓಟ ಎಂದರೇನೆ ಉಸೇನ್ ಬೋಲ್ಟ್ ನೆನಪಿಗೆ ಬರುತ್ತಾರೆ. ಬೋಲ್ಟ್ ದಾಖಲೆ ಮೇಲೆ ದಾಖಲೆ ಮಾಡಿ ಜಗತ್ತಿನಾದ್ಯಂತ ಹೆಸರುವಾಸಿಯಾದ ಪುಟ್ಟ ಜಮೈಕಾ ದೇಶದ ಓಟಗಾರ. ಈಗ ಅದೇ ಹಾದಿಯಲ್ಲಿ ಜಮೈಕಾದ ಮಹಿಳೆಯರು ಸಹ ಅದ್ವಿತೀಯ ಸಾಧನೆಗೈದಿದ್ದಾರೆ. ಮಹಿಳೆಯರ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಎಲ್ಲಾ ಮೂರೂ ಸ್ಥಾನಗಳನ್ನು ಪಡೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಹೊಸ ಚರಿತ್ರೆ ಬರೆದಿದ್ದಾರೆ.

ಥಾಂಪ್ಸನ್ ಹೇರಾ 10.61 ಸೆಕೆಂಡುಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದರೆ, ಈಗಾಗಲೇ ಎರಡು ಚಿನ್ನ ಗೆದ್ದಿದ್ದ ಶೆಲ್ಲಿ ಆ್ಯನ್ ಫ್ರೇಸರ್-ಪ್ರೈಸ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಶೆರಿಕಾ ಜಾಕ್ಸನ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಶನಿವಾರ ನಡೆದ ಈ ಪಂದ್ಯದಲ್ಲಿ ಎಲ್ಲರ ಕಣ್ಣು ಶೆಲ್ಲಿ ಆ್ಯನ್ ಫ್ರೇಸರ್-ಪ್ರೈಸ್ ಮೇಲಿತ್ತು. 34 ವರ್ಷದ ಎರಡು ಮಕ್ಕಳ ತಾಯಿಯಾದ ಅವರು ಹಿರಿಯ ಓಟಗಾರ್ತಿಯಾಗಿದ್ದರು. ಅವರು ಮೂರನೇ ಚಿನ್ನಕ್ಕೆ ಮುತ್ತಿಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು 10.76 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.


ಇದನ್ನೂ ಓದಿ; ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೀಟನಾಶಕ ರಾಸಾಯನಿಕ ಬಳಕೆ ಆರೋಪ: ‘ಎವರೆಸ್ಟ್ ಫಿಶ್ ಕರಿ ಮಸಾಲಾ’ವನ್ನು ನಿಷೇಧಿಸಿದ ಸಿಂಗಾಪುರ

0
ಭಾರತದಿಂದ ಆಮದು ಆಗುತ್ತಿದ್ದ 'ಎವರೆಸ್ಟ್ ಫಿಶ್ ಕರಿ ಮಸಾಲಾ'ವನ್ನು ಸಿಂಗಾಪುರ ಹಿಂಪಡೆದಿದ್ದು, ಕೀಟನಾಶಕವಾಗಿ ಕೃಷಿಗಳಿಗೆ ಬಳಸುವ ಎಥಿಲೀನ್ ಆಕ್ಸೈಡ್ ಪ್ರಮಾಣ 'ಎವರೆಸ್ಟ್ ಫಿಶ್ ಕರಿ ಮಸಾಲಾ'ದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿದೆ. ಎಥಿಲೀನ್...