Homeಕ್ರೀಡೆಒಲಂಪಿಕ್ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್!

ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್!

ಪುರುಷರ ವಿಭಾಗದಲ್ಲಿ ಅಮೆರಿಕದ ಈಜುಗಾರ ಮೆಕಲ್ ಫೆಲ್ಪ್ಸ್ ಒಂದೇ ಒಲಂಪಿಕ್ಸ್‌ನಲ್ಲಿ 8 ಪದಕ ಗೆಲ್ಲುವ ಮೂಲಕ ಎರಡು ಭಾರಿ ದಾಖಲೆ ನಿರ್ಮಿಸಿದ್ದಾರೆ.

- Advertisement -
- Advertisement -

ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಒಂದಾದರೂ ಚಿನ್ನ ಗೆಲ್ಲಲಿ ಎಂದು ಬಹಳಷ್ಟು ಮಂದಿ ಹಂಬಲಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾದ ಈಜುಗಾರ್ಜಿ ಎಮ್ಮ ಮಕೀನ್ ಟೋಕಿಯೋ ಒಲಂಪಿಕ್ಸ್‌ ಒಂದರಲ್ಲೇ ಬರೋಬ್ಬರಿ 4 ಚಿನ್ನ ಮತ್ತು 3 ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾಳೆ.

ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್ “ಮಹಿಳೆಯರ 50 ಮೀಟರ್ ಮತ್ತು 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಹಾಗೂ ಮಹಿಳೆಯರ 4×100 ಫ್ರೀಸ್ಟೈಲ್ ರಿಲೇ ಮತ್ತು ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅದೇ ರೀತಿಯಲ್ಲಿ ಮಹಿಳೆಯರ 100 ಮೀಟರ್ ಬಟರ್‌ಫ್ಲೈ, ಮಹಿಳೆಯರ 4×100 ಮೀಟರ್ ಮೆಡ್ಲೆ ರಿಲೇ, ಮಹಿಳೆಯರ 4×200 ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಈಸ್ಟ್ ಜರ್ಮನ್‌ನ ಕ್ರಿಸ್ಟಿನ್ ಒಟ್ಟೊ ಅವರು 1952 ರ ಒಲಂಪಿಕ್ಸ್‌ನಲ್ಲಿ ಆರು ಪದಕಗಳನ್ನು ಗೆದ್ದಿದ್ದರು. ಇದನ್ನು 2008 ರಲ್ಲಿ ಅಮೇರಿಕನ್ ನಟಾಲಿ ಕಗ್ಲಿನ್ ಸರಿಗಟ್ಟಿದ್ದರು. ಆದರೆ ಈ ಭಾರಿ ಆಸ್ಟ್ರೇಲಿಯಾದ ಈಜುಗಾರ್ಜಿ ಎಮ್ಮ ಮಕೀನ್ ಅವರಿಬ್ಬರ ದಾಖಲೆಯನ್ನು ಮುರಿದಿದ್ದಾರೆ.

ಪುರುಷರ ವಿಭಾಗದಲ್ಲಿ ಅಮೆರಿಕದ ಈಜುಗಾರ ಮೆಕಲ್ ಫೆಲ್ಪ್ಸ್ ಒಂದೇ ಒಲಂಪಿಕ್ಸ್‌ನಲ್ಲಿ 8 ಪದಕ ಗೆಲ್ಲುವ ಮೂಲಕ ಎರಡು ಭಾರಿ ದಾಖಲೆ ನಿರ್ಮಿಸಿದ್ದಾರೆ. 2004ರ ಒಲಂಪಿಕ್ಸ್‌ನಲ್ಲಿ ಅವರು ಆರು ಚಿನ್ನ ಮತ್ತು ಎರಡು ಕಂಚಿನ ಪದಕ ಗೆದ್ದಿದ್ದರೆ, 2008 ರಲ್ಲಿ ಬರೋಬ್ಬರಿ 8 ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ವಿಭಾಗದಲ್ಲಿ ಅಮೆರಿಕದವರೆ ಆದ ಮಾರ್ಕ್ ಸ್ಪಿಟ್ಜ್, ವಿಲ್ಲೀಸ್ ಎ. ಲೀ ಮತ್ತು ಮ್ಯಾಥ್ಯು ಬಿಯಾಂಡಿ ಒಂದೆ ಒಲಂಪಿಕ್ಸ್‌ನಲ್ಲಿ ತಲಾ 7 ಪದಕಗಳನ್ನು ಗೆದ್ದು ನಂತರದ ಸ್ಥಾನದಲ್ಲಿದ್ದಾರೆ.

ಒಟ್ಟಾರೆ ಒಲಂಪಿಕ್ಸ್‌ ಆಟಗಳಲ್ಲಿ ಅತಿ ಹೆಚ್ಚು ಪದಕ ಗೆದ್ದ ದಾಖಲೆ ಕೂಡ ಮೆಕಲ್ ಫೆಲ್ಪ್ಸ್ ಹೆಸರಿನಲ್ಲಿದೆ. ಅವರು ಒಟ್ಟು ನಾಲ್ಕು ಒಲಂಪಿಕ್ಸ್‌ನಲ್ಲಿ ಭಾಗವಹಿಸಿ 28 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 23 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಅದರಲ್ಲಿ ಸೇರಿವೆ.


ಇದನ್ನೂ ಓದಿ: ತ್ಯಾಗ.. ತ್ಯಾಗ.. ತನ್ನೆಲ್ಲ ಖುಷಿಗಳನ್ನು ತ್ಯಾಗ ಮಾಡಿ ದೇಶದ ಸಂಭ್ರಮಕ್ಕೆ ಕಾರಣವಾಗಿಬಿಟ್ಟರು ಮೀರಾಬಾಯಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...