Homeಕ್ರೀಡೆಒಲಂಪಿಕ್ಕೊನೆಗೂ ಕಂಚಿನ ಪದಕಕ್ಕೆ ಮುತ್ತಿಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

ಕೊನೆಗೂ ಕಂಚಿನ ಪದಕಕ್ಕೆ ಮುತ್ತಿಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

- Advertisement -
- Advertisement -

ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಭಾರತದ ನೆಚ್ಚಿನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂದು ನಡೆದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ಅಲ್ಲಿಗೆ ಎರಡು ಪದಕಗಳಿಗೆ ಭಾರತ ಭಾಜನವಾಗಿದೆ.

ಇಂದಿನ ಪಂದ್ಯದಲ್ಲಿ ಪಿವಿ ಸಿಂಧು ಚೀನಾದ ಹಿ ಬಿಂಗ್‌ಜಾವ್‌‌ ಅವರ ವಿರುದ್ದ ಸೆಣಸಿದರು. 21-13 ಅಂತರದಿಂದ ಮೊದಲ ಸೆಟ್ ಗೆದ್ದ ಸಿಂಧು ಎರಡನೇ ಸೆಟ್ ಅನ್ನು 21-15 ಗೆದ್ದು ನೇರ ಸೆಟ್‌ಗಳಿಂದ ವಿಜಯಿಯಾದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ಇಡೀ ಆಟದಲ್ಲಿ ಪಾರಮ್ಯ ಮೆರೆದರು. ಈ ಗೆಲುವಿನ ಮೂಲಕ ಶನಿವಾರದ ಸೆಮಿಫೈನಲ್ ಸೋಲನ್ನು ಮರೆಸಿದರು.

ಶನಿವಾರದ ಪಂದ್ಯದಲ್ಲಿ ತೈವಾನ್‌ನ ಥಾಯಿ ತ್ಸು ಯಿಂಗ್‌‌ ಅವರ ವಿರುದ್ದ 18-21, 12-21 ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು.

ಕಳೆದ ಒಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.


ಇದನ್ನೂ ಓದಿ; ಒಲಂಪಿಕ್ ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆ: ಮೂರು ಪದಕ ಜಮೈಕಾ ಪಾಲಿಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -