Homeಕ್ರೀಡೆಒಲಂಪಿಕ್ಜಾವಲಿನ್ ಥ್ರೋ: 86.65 ಮೀ ದೂರ ಎಸೆದು ಮೊದಲಿಗರಾಗಿ ಫೈನಲ್ ತಲುಪಿದ ಭಾರತದ ನೀರಜ್ ಚೋಪ್ರಾ

ಜಾವಲಿನ್ ಥ್ರೋ: 86.65 ಮೀ ದೂರ ಎಸೆದು ಮೊದಲಿಗರಾಗಿ ಫೈನಲ್ ತಲುಪಿದ ಭಾರತದ ನೀರಜ್ ಚೋಪ್ರಾ

- Advertisement -
- Advertisement -

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆಯುವ ಮೂಲಕ ಮೊದಲಿಗರಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಗ್ರೂಪ್ ಎ ವಿಭಾಗದಲ್ಲಿ ಒಟ್ಟು 7 ಸ್ಪರ್ಧಿಗಳು ಮತ್ತು ಗ್ರೂಪ್ ಬಿ ವಿಭಾಗದಲ್ಲಿ 6 ಸ್ಪರ್ಧಿಗಳು ಸೇರಿ ಒಟ್ಟು 13 ಮಂದಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅದರಲ್ಲಿ ಭಾರತದ ನೀರಜ್ ಚೋಪ್ರಾ ಅತಿ ದೂರ ಎಸೆದು ಭರವಸೆ ಹುಟ್ಟಿಸಿದ್ದಾರೆ.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 23 ವರ್ಷದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 83.50 ಮೀ ಅರ್ಹತಾ ಅಂಕವನ್ನು ದಾಟಿದರು.

ಗ್ರೂಪ್ ಎ ವಿಭಾಗದಲ್ಲಿ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆದರೆ ನಂತರದ ಸ್ಥಾನದಲ್ಲಿ ಜರ್ಮನಿಯ ಜೆ ವೆಟ್ಟರ್ ಇದು ಅವರು 85.64 ಮೀಟರ್ ಎಸೆಯಲು ಶಕ್ತರಾಗಿದ್ದಾರೆ. ಗ್ರೂಪ್ ಬಿ ವಿಭಾಗದಲ್ಲಿ ಪಾಕಿಸ್ತಾನದ ಎ.ನದೀಮ್ 85.16 ಮೀಟರ್ ಎಸೆಯುವ ಮೂಲಕ ಮೊದಲಿಗರಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಆಗಸ್ಟ್ 07 ರ ಶನಿವಾರ ಸಂಜೆ 4.30ಕ್ಕೆ ಜಾವಲಿನ್ ಥ್ರೋ ಫೈನಲ್ ಪಂದ್ಯ ನಡೆಯಲಿದೆ. ಇಂದು ಭಾರತದ ಕುಸ್ತಿಪಟುಗಳಾದ ರವಿ ದಹಿಯಾ, ದೀಪಕ್ ಪುನಿಯಾ ತಮ್ಮ ಅದ್ವೀತಿಯಾ ಆಟದಿಂದ ಸೆಮಿಫೈನಲ್ ತಲುಪಿ ಪದಕದ ಭರವಸೆ ಮೂಡಿಸಿದ್ದಾರೆ.

ಇಂದು ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ ಭಾರತದ ಮಹಿಳಾ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ ಸೆಮಿಫೈನಲ್ ಪಂದ್ಯ ಎದುರಿಸಲಿದೆ.


ಇದನ್ನೂ ಓದಿ: ಒಲಿಂಪಿಕ್ ಕುಸ್ತಿ: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತದ ರವಿ ದಹಿಯಾ, ದೀಪಕ್ ಪುನಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...