Homeರಂಜನೆಕ್ರೀಡೆಟಾಟಾ ಗ್ರೂಪ್‌‌‌ಗೆ ಐಪಿಎಲ್ ಪ್ರಾಯೋಜಕತ್ವ!

ಟಾಟಾ ಗ್ರೂಪ್‌‌‌ಗೆ ಐಪಿಎಲ್ ಪ್ರಾಯೋಜಕತ್ವ!

- Advertisement -
- Advertisement -

ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನ ಶೀರ್ಷಿಕೆ ಪ್ರಾಯೋಜಕತ್ವ ಚೀನಾದ ಮೊಬೈಲ್ ತಯಾರಕ ವಿವೊ ಬದಲಿಗೆ, ಭಾರತದ ಅತಿದೊಡ್ಡ ವ್ಯಾಪಾರ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್ ಪಡೆದುಕೊಂಡಿದೆ ಎಂದು ಈವೆಂಟ್‌ನ ಆಡಳಿತ ಮಂಡಳಿಯು ಮಂಗಳವಾರದ ಸಭೆಯಲ್ಲಿ ನಿರ್ಧರಿಸಿದೆ.

“ಹೌದು, ಟಾಟಾ ಗ್ರೂಪ್ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಬರುತ್ತಿದೆ” ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಥೆ ಪಿಟಿಐಗೆ ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ಒಪ್ಪಂದಕ್ಕೆ ಸಂಬಂಧಿಸಿದ ಹಣ ಎಷ್ಟು ಎಂದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಟಾಟಾ ವಕ್ತಾರರು “ಹೌದು” ಎಂದಷ್ಟೇ ಹೇಳಿದ್ದು, ಯಾವುದೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

2018-2022 ವರೆಗೆ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ವಿವೋ 2,200 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿತ್ತು. ಆದರೆ 2020 ರ ಭಾರತ ಮತ್ತು ಚೀನಾದ ಸೇನಾ ಸೈನಿಕರ ನಡುವಿನ ಗಾಲ್ವಾನ್ ವ್ಯಾಲಿ ಮಿಲಿಟರಿ ಸಂಘರ್ಷದ ನಂತರ, ಬ್ರ್ಯಾಂಡ್ IPL ನಲ್ಲಿ Dream11 ಅನ್ನು ಬದಲಿಸಲಾಗಿತ್ತು. ಆದಾಗ್ಯೂ, ವಿವೋ 2021 ರಲ್ಲಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಮರಳಿತ್ತು.

440 ಕೋಟಿ ವಾರ್ಷಿಕ ಪ್ರಾಯೋಜಕತ್ವದ ಮೊತ್ತವನ್ನು ಭರವಸೆ ನೀಡಿರುವುದರಿಂದ ಬಿಸಿಸಿಐ ಯಾವುದೇ ಹಣವನ್ನು ಕಳೆದುಕೊಳ್ಳುವುದಿಲ್ಲ, ಅದನ್ನು ಈಗ ಹೊಸ ಪ್ರಾಯೋಜಕರು ಪಾವತಿಸುತ್ತಾರೆ ಎಂದು ತಿಳಿದು ಬಂದಿದೆ.

2023 ರಿಂದ ಪ್ರಾರಂಭವಾಗುವ ಮುಂದಿನ ಪಂದ್ಯಾಟಕ್ಕೆ ಬಿಸಿಸಿಐ ಹೊಸ ಟೆಂಡರ್‌ಗಳನ್ನು ಆಹ್ವಾನಿಸಬೇಕಾಗಿರುವುದರಿಂದ ಒಪ್ಪಂದವು ಈ ವರ್ಷಕ್ಕೆ ಮಾತ್ರ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಅತಿ ದೊಡ್ಡ ಮಾನವೀಯ ಬಿಕ್ಕಟ್ಟಿನ ಕಾಲ ಮತ್ತು ಐಪಿಎಲ್ ಔಚಿತ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...