Homeಮುಖಪುಟಮತ್ತೊಂದು ಉದ್ದಿಮೆಯನ್ನು ಕೈಚೆಲ್ಲಿದ ಸರ್ಕಾರ: ಟಾಟಾ & ಸನ್ಸ್‌ ತೆಕ್ಕೆಗೆ ಏರ್‌ ಇಂಡಿಯಾ?

ಮತ್ತೊಂದು ಉದ್ದಿಮೆಯನ್ನು ಕೈಚೆಲ್ಲಿದ ಸರ್ಕಾರ: ಟಾಟಾ & ಸನ್ಸ್‌ ತೆಕ್ಕೆಗೆ ಏರ್‌ ಇಂಡಿಯಾ?

ಟಾಟಾ ಏ‌‌ರ್‌ಲೈನ್ಸ್‌ ಸಂಸ್ಥೆಯು ಕಾಲನಂತರದಲ್ಲಿ ಏರ್‌ ಇಂಡಿಯಾ ಸಂಸ್ಥೆಯಾಗಿ ಬದಲಾಗಿತ್ತು. ನಷ್ಟದಲ್ಲಿದ್ದ ಸಂಸ್ಥೆಯನ್ನು ಮೇಲೆತ್ತುವಲ್ಲಿ ಸೋತಿರುವ ಕೇಂದ್ರ ಸರ್ಕಾರ, ಟಾಟಾ ಅಂಡ್‌ ಸನ್ಸ್‌‌ಗೆ ಏರ್‌ ಇಂಡಿಯಾವನ್ನು ಒಪ್ಪಿಸಲು ಹೊರಟಿದೆ.

- Advertisement -
- Advertisement -

ಚೇತರಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಏರ್‌ ಇಂಡಿಯಾ ಸಂಸ್ಥೆಯನ್ನು ‘ಸಾಲ್ಟ್‌ ಟು ಸಾಫ್ಟ್‌ವೇರ್‌’ವರೆಗಿನ ವಿರಾಟ್‌ ಸಂಸ್ಥೆಯೆಂದೇ ಖ್ಯಾತವಾದ ಟಾಟಾ ಸಂಸ್ಥೆಗೆ ವಹಿಸಲಾಗುತ್ತಿದೆ ಎನ್ನಲಾಗಿದೆ. ವಿನ್ನಿಂಗ್‌ ಬಿಡ್ಡರ್‌ ಆಗಿ ಟಾಟಾ ಅಂಡ್‌ ಸನ್ಸ್‌ ಸಂಸ್ಥೆ ಆಯ್ಕೆಯಾಗಿದೆ ಎಂದು ವರದಿಯಾಗಿದೆ.

ಏರ್‌ ಇಂಡಿಯಾ ಸಂಸ್ಥೆ ಸ್ಥಾಪಿತವಾಗಿದ್ದು ಟಾಟಾ ಸಂಸ್ಥೆಯಿಂದ. ಟಾಟಾ ಏರ್‌‌ಲೈನ್ಸ್ ಎಂದು ಸ್ಥಾಪಿತವಾದದ್ದು, ಸರ್ಕಾರದ ಒಡೆತನಕ್ಕೆ ಬಂದ ಮೇಲೆ ಏ‌ರ್‌ ಇಂಡಿಯಾ ಆಗಿತ್ತು. ಅರ್ಧ ಶತಮಾನದ ಬಳಿಕ ಏರ್‌‌ಇಂಡಿಯಾ ಸಂಸ್ಥೆ ಮತ್ತೆ ಟಾಟಾ & ಸನ್ಸ್‌‌ ಸಂಸ್ಥೆಯ ತೆಕ್ಕೆಗೆ ಒಳಪಡುತ್ತಿದೆ ಎಂದು ಉತ್ನತ ಮೂಲಗಳು ಹೇಳಿವೆ.

ಇದನ್ನೂ ಓದಿ: ಸಾರ್ವಜನಿಕ ಉದ್ದಿಮೆಗಳ ಮಾರಾಟ : ಕೇಂದ್ರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

ಟಾಟಾ & ಸನ್ಸ್‌‌ನ ಉದ್ಯಮಿ ಅಜಯ್‌ ಸಿಂಗ್‌‌ ಅವರಿಂದ ಬಂದಿದ್ದ ಆಹ್ವಾನವನ್ನು ಅಧಿಕಾರಿಗಳು ಸಚಿವರ ಪ್ಯಾನಲ್‌ ಮುಂದೆ ಇಟ್ಟಿದ್ದು, ಸಚಿವರುಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ವಿಷಯವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ‌ಮೂಲಗಳು ತಿಳಿಸಿವೆ.

“ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ. ಹಣಕಾಸು ಸಚಿವಾಲಯದ ವಕ್ತಾರರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಟಾಟಾ ಸನ್ಸ್‌ನ ಪ್ರತಿನಿಧಿಯು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

1932ರಲ್ಲಿ ಕೈಗಾರಿಕಾ ಕ್ಷೇತ್ರದ ದಂತಕತೆ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಆರಂಭಿಸಿದ್ದರು. ಮುಂದೆ ಅದು ಏರ್‌ ಇಂಡಿಯಾ ಆಯಿತು. ಭಾರತದ ಮೊದಲ ಪರವಾನಗಿ ಪಡೆದ ಪೈಲಟ್‌ ಜೆಆರ್‌ಡಿ ಟಾಟಾ ಅವರಾಗಿದ್ದರು. ವಾಣಿಜ್ಯೋದ್ಯಮವಾಗಿ ಏರ್‌ಲೈನ್ಸ್‌ ಮಾರ್ಪಟ್ಟಿತು. 1940ರ ಅವಧಿಯಲ್ಲಿ ಸಾರ್ವಜನಿಕ ಕ್ಷೇತ್ರವಾಗಿ ಬದಲಾಯಿತು. ಶ್ರೀಮಂತರನ್ನು ಸೆಳೆಯಿತು. ಬಾಲಿವುಡ್‌ ನಟಿಯರ ಮೂಲಕ ಜಾಹೀರಾತು ನೀಡಿ, ಪ್ರಯಾಣಿಕರನ್ನು ಸೆಳೆಯಲಾಗುತ್ತಿತ್ತು.

1990ರ ಬಳಿಕ ಖಾಸಗಿಯವರು ಏರ್‌ಲೈನ್‌ ಆರಂಭಿಸಿ ಕಡಿಮೆ ವೆಚ್ಚದಲ್ಲಿ ವಿಮಾನ ಹಾರಾಟ ಆರಂಭಿಸಿದರು. ಏ‌‌ರ್‌ ಇಂಡಿಯಾ ನಷ್ಟಕ್ಕೆ ಜಾರಿತು. ಏರ್ ಇಂಡಿಯಾ 2007ರಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್ ಲಿಮಿಟೆಡ್‌ನೊಂದಿಗೆ ವಿಲೀನಗೊಂಡ ನಂತರ, ನಷ್ಟಗಳು ಇನ್ನೂ ಹೆಚ್ಚಾಗತೊಡಗಿದವು. ಸುಮಾರು 600 ಬಿಲಿಯನ್ ರೂಪಾಯಿ ಸಾಲವನ್ನು ಏರ್‌ ಇಂಡಿಯಾ ಹೊಂದಿದೆ ಎನ್ನಲಾಗಿದೆ.

2013ರ ಹೊತ್ತಿಗೆ, ದೇಶದ ಅಂದಿನ ನಾಗರಿಕ ವಿಮಾನಯಾನ ಸಚಿವರು ಖಾಸಗೀಕರಣವು ಅದರ ಉಳಿವಿಗೆ ಮುಖ್ಯ ಎಂದು ಹೇಳಿದ್ದರು. 2017ರಲ್ಲಿ ಸರ್ಕಾರವು ಆ ಮಾರ್ಗವನ್ನು ಅನುಮೋದಿಸಿತು ಮತ್ತು ಪ್ರಕ್ರಿಯೆಯನ್ನು ಆರಂಭಿಸಲು ಒಂದು ಸಮಿತಿಯನ್ನು ರಚಿಸಿತು. ಹೀಗೆ ಏರ್‌ ಇಂಡಿಯಾವನ್ನು ಖಾಸಗಿಯವರಿಗೆ ನೀಡುವ ಪ್ರಕ್ರಿಯೆ ಆರಂಭವಾದವು. ಏರ್‌ ಇಂಡಿಯಾ ಖಾಸಗಿಯವರ ತೆಕ್ಕೆಗೆ ಹೋಗುವ ಮೂಲಕ, ಮತ್ತೊಂದು ಸಾರ್ವಜನಿಕ ಸಂಸ್ಥೆಯನ್ನು ಸರ್ಕಾರ ಮಾರಿದಂತಾಗುತ್ತಿದೆ. ಆದರೆ, ಮಾಧ್ಯಮಗಳ ವರದಿಯನ್ನು ಸರ್ಕಾರ ನಿರಾಕರಿಸಿದ್ದು, ತಪ್ಪಾಗಿ ವರದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...