ತೆಲಂಗಾಣದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇದುವರೆಗೂ 70 ಜನರು ಮೃತಪಟ್ಟಿದ್ದು ಕೋಟ್ಯಾಂತರ ರೂ. ಗಳ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಮಳೆಯಿಂದಾದ ಹಾನಿಗೆ ಪರಿಹಾರ ನೀಡಲು ತೆಲಂಗಾಣ ಮುಖ್ಯಮಂತ್ರಿ ಸ್ಥಾಪಿಸಿದ್ದ ಪರಿಹಾರ ನಿಧಿಗೆ, ತೆಲುಗು ಚಿತ್ರರಂಗದ ಚಿತ್ರ ನಟರಾದ ಚಿರಂಜೀವಿ, ನಾಗಾರ್ಜುನ, ಜೂನಿಯರ್ ಎನ್‌ಟಿಆರ್, ವಿಜಯ್ ದೇವೇರಕೊಂಡ, ಮಹೇಶ್ ಬಾಬು ಸೇರಿದಂತೆ ಹಲವಾರು ನಟರು ಕೊಡುಗೆ ನೀಡಿದ್ದಾರೆ.
ಇಂದು ಟ್ವೀಟ್ ಮಾಡಿರುವ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ, “ಹೈದರಾಬಾದ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾರಿ ಪ್ರಮಾಣದ ವಿನಾಶ, ಪ್ರಾಣಹಾನಿ ಮತ್ತು ಸಾವಿರಾರು ಜನರಿಗೆ ತೀವ್ರ ಸಂಕಷ್ಟ ಉಂಟಾಗಿದೆ. ಪ್ರಕೃತಿ ವಿಕೋಪಕ್ಕೊಳಗಾದವರ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ. ನಾನು ಸಿಎಂ ರಿಲೀಫ್ ಫಂಡ್‌ಗೆ ವಿನಮ್ರತೆಯಿಂದ 1 ಕೋಟಿ ದೇಣಿಗೆ ನೀಡಿದೆ. ಅಷ್ಟೇ ಅಲ್ಲದೆ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬರುವಂತೆ ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
The unprecedented rains in Hyd have caused massive devastation,loss of lives & extreme hardship to thousands. My heart goes out to those affected by nature's fury.I'm humbly donating Rs.1Cr to CM Relief Fund.Also appeal 2 all who can to come frward & help the needy @TelanganaCMO pic.twitter.com/ARBeV9JShy
— Chiranjeevi Konidela (@KChiruTweets) October 20, 2020
ಇದನ್ನೂ ಓದಿ: ಪ್ರವಾಹ: ಪ್ರಧಾನಿ ಮಾಡಿದ ಕನ್ನಡದ ಒಂದು ಟ್ವೀಟ್ ನೆರೆ ಪರಿಹಾರವಾಗಬಲ್ಲುದೇ?
ತೆಲುಗಿನ ಮತ್ತೊಬ್ಬ ತಾರೆ ಅಕ್ಕಿನೇನಿ ನಾಗಾರ್ಜುನ, ಮುಖ್ಯಮಂತ್ರಿ ಪರಿಹಾರ ನಿಧಿಗೆ ತಾನು ಕೊಡುಗೆಯಾಗಿ 50 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದರು.
Heavy rains and floods have devastated the life of people in Hyderabad. Appreciate the efforts of Telangana Govt in releasing 550 crores for immediate relief. Standing by the cause, will contribute 50 lakhs to Telangana CM relief fund.#TelanganaCMO ?
— Nagarjuna Akkineni (@iamnagarjuna) October 20, 2020
ನಟ ಮಹೇಶ್ ಬಾಬು, “ತೆಲಂಗಾಣದ ಸಿಎಂ ಪರಿಹಾರ ನಿಧಿಗೆ ₹ 1 ಕೋಟಿ ಕೊಡುಗೆ ನೀಡುತ್ತೇನೆ. ಎಲ್ಲರೂ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಬಯಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಜನರೊಂದಿಗೆ ನಿಲ್ಲಿರಿ” ಎಂದು ಹೇಳಿದರು.
Contributing ₹1 crore towards the CM relief fund of Telangana. I urge all of you to come forward and donate towards the cause. Let's stand by our people during these difficult times.?? @TelanganaCMO @KTRTRS
— Mahesh Babu (@urstrulyMahesh) October 20, 2020
ಇದನ್ನೂ ಓದಿ: ಅ.21 ರವರೆಗೂ ಮಹಾಮಳೆ: ಹೈದರಾಬಾದ್‌ನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ!
ನಟ ಜೂನಿಯರ್ ಎನ್‌ಟಿಆರ್, “ಮಳೆ ಮತ್ತು ಪ್ರವಾಹದಿಂದ ಹೈದರಾಬಾದ್‌ನಲ್ಲಿ ಅನೇಕರು ಜೀವ ಕಳೆದು ಕೊಂಡಿದ್ದಾರೆ. ನಮ್ಮ ನಗರದ ಪುನರ್ವಸತಿಗಾಗಿ ನಾನು ತೆಲಂಗಾಣ ಸಿಎಂ ರಿಲೀಫ್ ಫಂಡ್‌ಗೆ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ. ನಾವೆಲ್ಲರೂ ನಮ್ಮ ಹೈದರಾಬಾದ್ ಅನ್ನು ಪುನರ್ನಿರ್ಮಿಸೋಣ” ಎಂದು ಹೇಳಿದ್ದಾರೆ.
Many lives in Hyderabad have been devastated by the rains and floods. I am contributing 50 Lakh Rupees to the Telangana CM Relief Fund towards the rehabilitation of our city. Let us all chip in and rebuild our Hyderabad #TelanganaCMO
— Jr NTR (@tarak9999) October 20, 2020
ನಟ ವಿಜಯ್ ದೇವೇರಕೊಂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ದೇಣಿಗೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
Its been a hard year on all of us, but those of us who are doing decently well, let's pool in some money to help those who are not – Let's do it one more time for our own.
Today I am donating 10 Lakhs to the CMRF. #HyderabadRains
— Vijay Deverakonda (@TheDeverakonda) October 20, 2020
మన వాళ్లకు మనమే అండగా నిలబడదాం ….
నా వంతు సాయం నేను చేసాను .. మీకు చేతనైనంత సాయం మీరు కూడా చెయ్యాలని అర్ధిస్తున్నాను ? pic.twitter.com/GR5TmE71Dj— kona venkat (@konavenkat99) October 15, 2018
#CycloneTitli victims need your generous support! Let's do our bit. pic.twitter.com/K4nG1v5erU
— Bellamkonda Sreenivas (@BSaiSreenivas) October 15, 2018
It's time we stand up for our people..
I've done my part..
I request you all to contribute and help us rebuild our homes in Andhra..?????? pic.twitter.com/hsKj6Ra5c7— Varun Tej Konidela ? (@IAmVarunTej) October 15, 2018
Let’s help all we can ?? #disasterstrikeshome https://t.co/cI3biza0uz
— Kajal Aggarwal (@MsKajalAggarwal) October 15, 2018
I also joined Bro….just transferred ONE lakh rupees to #Apcmrelief fund. #CycloneTitli https://t.co/bd3ajUOO7j
— Anil Ravipudi (@AnilRavipudi) October 14, 2018
ಇಷ್ಟೇ ಅಲ್ಲದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೂಡಾ ರಾಜ್ಯಕ್ಕೆ 15 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಹೈದರಾಬಾದ್ ಕೆಳೆದೊಂದು ವಾರದಿಂದ ಶತಮಾನದ ಭೀಕರ ಮಳೆಯನ್ನು ಕಂಡಿದ್ದು, ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ. ಅಕ್ಟೋಬರ್ 19 ರಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನಗರದ ಪ್ರವಾಹ ಪೀಡಿತರಿಗೆ ತಕ್ಷಣದ ಪರಿಹಾರವಾಗಿ ₹ 10,000 ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ 130 ತಾಲೂಕುಗಳು ‘ಪ್ರವಾಹಪೀಡಿತ’: ಸರ್ಕಾರದ ಘೋಷಣೆ


