Homeಮುಖಪುಟಚೀನಿಯರನ್ನು ಭಾರತದಿಂದ ಯಾವಾಗ ಹೊರಹಾಕುತ್ತೀರಿ? ಮೋದಿ ಭಾಷಣಕ್ಕೆ ರಾಹುಲ್ ಪ್ರಶ್ನೆ

ಚೀನಿಯರನ್ನು ಭಾರತದಿಂದ ಯಾವಾಗ ಹೊರಹಾಕುತ್ತೀರಿ? ಮೋದಿ ಭಾಷಣಕ್ಕೆ ರಾಹುಲ್ ಪ್ರಶ್ನೆ

ಕಳೆದ ಮೇ ತಿಂಗಳಿನಿಂದ ಗಡಿಯಲ್ಲಿ ಚೀನಾ ಭಾರತದೊಂದಿಗೆ ತಗಾದೆ ತೆಗೆದಿದೆ. 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಚೀನಿಯರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ.

- Advertisement -
- Advertisement -

ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಲಿರುವ ಹಿನ್ನೆಲೆಯಲ್ಲಿ ಚೀನಿಯರನ್ನು ಭಾರತದಿಂದ ಯಾವಾಗ ಹೊರಹಾಕುತ್ತೀರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಆತ್ಮೀಯ ಪ್ರಧಾನಿಗಳೆ, ನಿಮ್ಮ ಸಂಜೆ 6 ಗಂಟೆಯ ಭಾಷಣದಲ್ಲಿ ನೀವು ಚೀನಿಯರನ್ನು ಭಾರತೀಯ ಭೂಪ್ರದೇಶದಿಂದ ಹೊರಹಾಕುವ ದಿನಾಂಕವನ್ನು ದಯವಿಟ್ಟು ದೇಶಕ್ಕೆ ತಿಳಿಸಿ. ಧನ್ಯವಾದಗಳು” ಎಂದು ಹೇಳಿದ್ದಾರೆ.

ಕಳೆದ ಮೇ ತಿಂಗಳಿನಿಂದ ಗಡಿಯಲ್ಲಿ ಚೀನಾ ಭಾರತದೊಂದಿಗೆ ತಗಾದೆ ತೆಗೆದಿದೆ. 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಚೀನಿಯರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿಯವರು ಇಂದಿನ ಭಾಷಣದಲ್ಲಿ ಯಾವ ವಿಚಾರ ಮಾತನಾಡುತ್ತೇನೆ ಎಂಬ ಸುಳಿವು ನೀಡಿಲ್ಲ. ಕೋವಿಡ್ ನಿರ್ವಹಣೆ, ಪ್ರವಾಹ ಪರಿಸ್ಥಿತಿ ಇತ್ಯಾದಿಗಳ ಕುರಿತು ಪ್ರಧಾನಿ ಮೋದಿಯವರು ಮಾತನಾಡಲಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ದೇಶವನ್ನುದ್ದೇಶಿಸಿ ಮೋದಿ ಭಾಷಣಕ್ಕೆ ಟ್ರೋಲ್: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...