ಕೇಸರಿ ಬಣ್ಣದ ಅಂಗಿ ಮತ್ತು ಶಾಲುಗಳನ್ನು ಧರಿಸಿದ್ಧ ಗುಂಪೊಂದು ಹೈದರಾಬಾದ್ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸೇಂಟ್ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ಆವರಣಕ್ಕೆ ನುಗ್ಗಿ ಶಾಲೆಯಲ್ಲಿ ದಾಂಧಲೆ ನಡೆಸಿ ಪಾದ್ರಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಜೈಶ್ರೀರಾಮ್ ಕೂಗಿದ ಗುಂಪು ಶಾಲೆಯ ಮುಖ್ಯ ಗೇಟ್‌ನಲ್ಲಿ ಸ್ಥಾಪಿಸಲಾಗಿದ್ದ ಸಂತ ಮದರ್ ತೆರೆಸಾ ಅವರ ಪ್ರತಿಮೆಗೆ ಕಲ್ಲು ಎಸೆದಿದ್ದಾರೆ ಮತ್ತು ಭದ್ರತಾ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಮತ್ತು ಶಾಲೆಯ ಮೊದಲ ಮತ್ತು ಎರಡನೇ ಮಹಡಿಗೆ ಪ್ರವೇಶಿಸಿ ಕಿಟಕಿ ಗಾಜುಗಳು ಮತ್ತು ಕಚೇರಿ ಕೊಠಡಿಯನ್ನು ಧ್ವಂಸಗೊಳಿಸಿದ್ದಾರೆ.
ಏಪ್ರಿಲ್ 15ರಂದು ಸಮವಸ್ತ್ರದ ಬದಲಿಗೆ ಕೇಸರಿ ಉಡುಗೆ ಧರಿಸಿ ತರಗತಿಗೆ ಹಾಜರಾಗುತ್ತಿರುವುದನ್ನು ಗಮನಿಸಿದ ಶಾಲಾ ಆಡಳಿತ ವಿದ್ಯಾರ್ಥಿಗಳಿಗೆ ಕೇಸರಿ ಬಟ್ಟೆ ಧರಿಸಲು ಅವಕಾಶ ನಿರಾಕರಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಹೊರಗಿನವರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲಿ 1000 ಜನರು ಶಾಲೆಯ ಆವರಣಕ್ಕೆ ಪ್ರವೇಶಿಸಿದ್ದು, ಕಲ್ಲು ತೂರಾಟ ನಡೆಸಿ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಇನ್ನು ‘ಹನುಮಾನ್ ದೀಕ್ಷಾ ಉಡುಗೆ’ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಪ್ರಾಂಶುಪಾಲರ ವಿರುದ್ಧ ಮಂಚೇರಿಯಲ್ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರ ದೂರಿನ ಆಧಾರದ ಮೇಲೆ ದಂಡೇಪಲ್ಲಿ ಪೊಲೀಸರು, ಸೆಕ್ಷನ್ 153 (ಎ) ಮತ್ತು 295 (ಎ) (ಧಾರ್ಮಿಕ ಭಾವನೆಗಳನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳು ಸಮವಸ್ತ್ರದ ಬದಲು ಕೇಸರಿ ಬಟ್ಟೆ ಧರಿಸಿರುವುದನ್ನು ಗಮನಿಸಿದ ಪ್ರಾಂಶುಪಾಲರು ತಮ್ಮ ಪೋಷಕರನ್ನು ಕರೆದುಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ್ದೆವು. ನಂತರ, ಜನರ ಗುಂಪು ಶಾಲೆಯ ಆಡಳಿತದಿಂದ ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ ಮತ್ತು ಕೆಲವು ಆಕ್ರೋಶಿತರು ಶಾಲೆಯ ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ ಮದರ್ ತೆರೇಸಾ ಹೈಸ್ಕೂಲ್ ಆಡಳಿತ ಮಂಡಳಿ ತಿಳಿಸಿದೆ.
A mob wearing saffron colored shirts and shawls entered the premises of the St. Mother Teresa English Medium School in Kannepally, a village in Mancherial district and Vandalized the school and Assaulted Priest.
The mob shouting religious slogans threw stones at the statue of… pic.twitter.com/xs0JgklJ6E— Mohammed Zubair (@zoo_bear) April 17, 2024
ಇದನ್ನು ಓದಿ: ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ ಓದಿದ ಪತ್ನಿ


